ಎಂ.ಪಿ ನರೇಂದ್ರ ಸ್ವಾಮಿಯವರಿಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ದಲಿತರ ಕುಂದು ಕೊರತೆಗಳ ಹಾಗೂ ಅನ್ಯಾಯ ವೇಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ – ಒತ್ತಾಯಿಸಿ ಮನವಿ.
ಬಳ್ಳಾರಿ ಸ.27

ಇಂದು ದಿನಾಂಕ 27/ 9/ 2024 ರಂದು ಬಳ್ಳಾರಿ ನಗರದ ಜಿಲ್ಲಾ ಪಂಚಾಯತ್ ನಜೀರ್ ಸಭಾಂಗಣದಲ್ಲಿ ಕರ್ನಾಟಕ ಅನುಸೂಚಿತ ಜಾತಿ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶ್ರೀ ಪಿ ಎಂ ನರೇಂದ್ರಸ್ವಾಮಿ ಇವರ ಅಧ್ಯಕ್ಷತೆಯಲ್ಲಿ ಬಳ್ಳಾರಿ ಹಾಗೂ ವಿಜಯನಗರ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಜನಾಂಗದ ಅಭಿವೃದ್ಧಿಯ ಸಂರಕ್ಷಣ ಹಿತದೃಷ್ಟಿಯಿಂದ ಪ್ರಗತಿ ಪರಿಶೀಲನ ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಶ್ರೀ ಎಂಪಿ ನರೇಂದ್ರ ಸ್ವಾಮಿ ಇವರಿಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ದಲಿತರ ಸಮಸ್ಯೆಗಳ ಈಡೇರಿಕೆಗಾಗಿ ಹಾಗೂ ದಲಿತರಿಗೆ ಅನ್ಯಾಯ ಎಸಗಿ ಕಡೆಗಣಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿಕ್ಕಾಗಿ ಹಾಗೂ ದಲಿತರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು ಕೆ ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರಪ್ಪ ನಿರ್ದೇಶಕರು ಭೀಮರಾವ್ ಐಎಎಸ್ ಕೆಎಎಸ್ ತರಬೇತಿ ಕೇಂದ್ರ ಬಳ್ಳಾರಿ ನಾಗರಾಜ್ ತಾಲೂಕ ಅಧ್ಯಕ್ಷರು ರಿಪಬ್ಲಿಕನ್ ಸೇನಾ ಕೂಡ್ಲಿಗಿ ಬಸಣ್ಣ ಶಿವಪುರ ಹನುಮಂತ ಶಿವಪುರ ಇತರರು ಇದ್ದರು ಎಂದು ಪತ್ರಿಕೆಗೆ ತಿಳಿಸಿದ್ದಾರೆ.