ದಸರಾ ಕಲಾ ಶಿಬಿರದಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಕಲಾವಿದ – ಭಾಗಿಯಾದ ವಾಜಿದ್ ಸಾಜಿದ್ ಆಯ್ಕೆ.
ಮಾನ್ವಿ ಸ.29

ಮೈಸೂರು ದಸರಾ ಮಹೋತ್ಸವದ ನಿಮಿತ್ತ ಕರ್ನಾಟಕ ಲಲಿತಾ ಕಲಾ ಅಕಾಡೆಮಿಯಿಂದ ನಡೆಯುವ ಚಿತ್ರಕಲಾ ಶಿಬಿರದಲ್ಲಿ ಮಾನ್ವಿ ಕುಡಿ ಎಂದೇ ಹೆಸರುವಾಸಿಯಾದ ವಾಜಿದ್ ಸಾಜಿದ್ ಅವರು ಆಯ್ಕೆ ಯಾಗಿರುವುದು ಹೆಮ್ಮೆಯ ವಿಷಯ ಎಂದು ರವಿಕುಮಾರ್ ಪಿ.ವಕೀಲ ತಿಳಿಸಿದರು.ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಕೋನಾಪುರ ಪೇಟೆಯಲ್ಲಿರುವ ವಾಜಿದ್ ಸಾಜಿದ್ ಅವರನ್ನು ಸನ್ಮಾನಿಸಿ ಮಾತನಾಡಿ, ರಾಯಚೂರು ಜಿಲ್ಲೆ ಹಿಂದುಳಿದ ಜಿಲ್ಲೆ ಯಾದರು ಸಹ ವಾಜಿದ್ ಸಾಜಿದ್ ಅವರು ತಮ್ಮ ಪ್ರತಿಭೆಯ ಮೂಲಕವೇ ಸಿನಿಮಾ ರಂಗದಲ್ಲಿ ಚಿತ್ರ ಕಲಾವಿದರಾಗಿ ಹೆಸರು ವಾಸಿಯಾಗಿದ್ದಾರೆ,

ಹೀಗಾಗಿ ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಆಹ್ವಾನ ಬಂದಿದೆ ಎಂದು ಬಣ್ಣಿಸಿದರು.ಮಾನ್ವಿಯ ಕೋನಾಪುರ ಪೇಟೆಯ ವ್ಯಕ್ತಿಯಾದ ವಾಜಿದ್ ಸಾಜಿದ್ ಅಣ್ಣನವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅವಕಾಶಗಳು ಸಿಗುವುದರ ಜೊತೆಗೆ ನಮ್ಮೂರಾದ ಮಾನ್ವಿಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತ ಕೆಲಸ ಮಾಡಲಿ ಎಂದು ಆಶಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷ.ನಕ್ಕುಂದಿ.ಮಾನ್ವಿ