ಪೌರ ಕಾರ್ಮಿಕರ ಕಾರ್ಯಕ್ರಮ ಉದ್ಘಾಟಿಸಿದ – ಸಚಿವ ಎಸ್.ಎಸ್ ಬೋಸರಾಜು
ಮಾನ್ವಿ ಸ.29

ಪೌರ ಕಾರ್ಮಿಕರು ಮಳೆ,ಚಳಿ ಮತ್ತು ಬಿಸಿಲೆನ್ನದೆ ಸೇವೆ ಮಾಡುತ್ತಾರೆ. ಹೀಗಾಗಿ ಅವರ ಸೇವೆಯನ್ನು ಎಷ್ಟು ಹೊಗಳಿದರು ಕಡಿಮೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರಕಾರ ಪೌರ ಕಾರ್ಮಿಕರ ಪರವಾಗಿ ಇರುತ್ತದೆ.

ನಿಮ್ಮ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತದೆ ಎಂದರು.ಮಾನ್ವಿಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುವವರು ಕಳೆದ ಹತ್ತಾರು ವರ್ಷದಿಂದ ಸೇವೆ ಸಲ್ಲಿಸಿದರು ಸಹ ಅವರು ಖಾಯಂ ಆಗಿಲ್ಲ, ಹೀಗಾಗಿ ಸರಕಾರ ಖಾಯಂ ಮಾಡುವ ಕೆಲಸ ಮಾಡುತ್ತದೆ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷ.ನಕ್ಕುಂದಿ.ಮಾನ್ವಿ