ಸ್ಮಶಾನಕ್ಕೆ ವಿದ್ಯುತ್ ಇಲ್ಲದೆ ಹೂಳಲು ಪರದಾಡಿದ ಕುಟುಂಬ.

ಮಸ್ಕಿ ಸ.29

ಪಟ್ಟಣದ ಹಿರಿಯ ಜೀವ ಮಾನಯ್ಯ ಬಡಿಗೇರ ರವರು ಮರಣ ಹೊಂದಿದರು ಅವರ ಮಗಳು ಬೆಂಗಳೂರು ನಿಂದ ಬರುವುದು ತಡವಾದ ಕಾರಣ ಅಂತ್ಯ ಸಂಸ್ಕರಕ್ಕೆ ಎಂದು ಸ್ಮಶಾನಕ್ಕೆ ಹೋದಾಗ ಅಲ್ಲಿ ವಿದ್ಯುತ್ ಇಲ್ಲದೇ ಪರದಾಡಿದ ಪರಿಸ್ಥಿತಿ ನಿರ್ಮಾಣವಾಗಿ ಕತ್ತಲಲ್ಲೇ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ ಘನ ಘೋರ ಘಟನೆ ತಡರಾತ್ರಿ ಜರುಗಿದ್ದು ಬಹಳ ನೋವಿನ ಸಂಗತಿ.ಹೌದು ಎಲ್ಲೆಂದರಲ್ಲಿ ಕಸ, ಕಾಲಿಟ್ಟರೆ ಮುಳ್ಳು ಚುಚ್ಚುವ ಆತಂಕ, ಮಳೆ ಬಂದರಂತೂ ಆ ಪ್ರದೇಶವೆಲ್ಲ ಜಲಾವೃತ ಇಂಥಹ ಚಿತ್ರಣಗಳು ತಾಲ್ಲೂಕಿನ ಬಹುತೇಕ ಗ್ರಾಮಗಳ ಸ್ಮಶಾನಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ.ಯಾವುದೇ ಸಮುದಾಯ, ಜಾತಿ, ಲಿಂಗವಿದಿದ್ದರೂ ಮರಣಾನಂತರ ಆ ವ್ಯಕ್ತಿಗೆ ಅತ್ಯಂತ ಗೌರವಯುತವಾಗಿ ಅಂತಿಮ ಸಂಸ್ಕಾರ ನೆರವೇರಿಸ ಬೇಕು ಎನ್ನುವುದು ಆಯಾ ಕುಟುಂಬಗಳ ಮತ್ತು ಬಂಧುಗಳ ಸಹಜ ಆಸೆ.ಆದರೆ, ಬಹಳಷ್ಟು ಕಡೆ ಸ್ಮಶಾನಗಳು, ಮೂಲ ಸೌಕರ್ಯ ಮತ್ತು ಸ್ವಚ್ಛತೆಯ ಸಮಸ್ಯೆ ಎದ್ದು ಕಾಣುತ್ತದೆ. ಅನೇಕ ಕಡೆ ರುದ್ರ ಭೂಮಿಗಳಿಗೆ ಸರಿಯಾದ ದಾರಿ ಇಲ್ಲ, ಮುಳ್ಳು ಕಂಟಿಗಳನ್ನು ದಾಟಿಕೊಂಡು ಹೋಗುವ ಅನಿವಾರ್ಯತೆ. ಶನಿವಾರ ಪಟ್ಟಣದಲ್ಲಿ ಹಿರಿಯ ಜೀವ ಮಾನಯ್ಯ ಬಡಿಗೇರ ರವರು ಮರಣ ಹೊಂದಿದರು ಅವರ ಮಗಳು ಬೆಂಗಳೂರು ನಿಂದ ಬರುವುದು ತಡವಾದ ಕಾರಣ ಅಂತ್ಯ ಸಂಸ್ಕಾರಕ್ಕೆ ಎಂದು ಸ್ಮಶಾನಕ್ಕೆ ಹೋದಾಗ ಅಲ್ಲಿ ವಿದ್ಯುತ್ ಇಲ್ಲದೇ ಪರದಾಡಿದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ರಾಘವೇಂದ್ರ ಮೋಚಿ ಯವರು ಆಡಳಿತದ ಬಗ್ಗೆ ಪತ್ರಿಕೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಇನ್ನೂದಾರು ಸಂಬಂಧಿಸಿದ ಅಧಿಕಾರಿಗಳು ಸ್ಮಶಾನದಲ್ಲಿ ವಿದ್ಯುತ್ ಕಂಬ ಅಳವಡಿಸಿ ಹಾಗೂ ಮೂಲ ಸೌಕರ್ಯ ಒದಗಿಸಿ ಅಂತ್ಯ ಸಂಸ್ಕಾರಕ್ಕೆ ಅನುಕೂಲ ಮಾಡಿ ಕೊಡುವರೇ ಎಂದು ಕಾದು ನೋಡಬೇಕಿದೆ..?

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button