ಬರದ ನಾಡಿನಲ್ಲಿ ಕೆರೆಗಳಿಗೆ ಬಾಗಿನ ಅರ್ಪಿಸಿದ ಶಾಸಕ – ಡಾ, ಎನ್.ಟಿ ಶ್ರೀ ನಿವಾಸ್.
ಕೂಡ್ಲಿಗಿ ಅ.08

ಕ್ಷೇತ್ರದ ಮಾನ್ಯ ಶಾಸಕರಾದ ಡಾ, ಶ್ರೀನಿವಾಸ್ ಎನ್. ಟಿ. ಅವರು ದಿ; 08-10-2024 ರಂದು ಗಂಡು ಬೊಮ್ಮನಹಳ್ಳಿ ಕೆರೆ, ಕೂಡ್ಲಿಗಿ ದೊಡ್ಡ ಕೆರೆಗಳಿಗೆ ಬಾಗಿನ ಅರ್ಪಿಸಿ ಗಂಗಾ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು. ಬರದ ನಾಡಿನಲ್ಲಿ ಒಳ್ಳೆಯ ಮಳೆಯಾಗಿ ಕೆರೆ- ಕಟ್ಟೆಗಳು ತುಂಬಿ ಹರಿಯುತ್ತಿರುವುದರಿಂದ ಸಮೃದ್ಧಿ ಬೆಳೆಗಳನ್ನು ಬೆಳೆಯಲು ರೈತರಲ್ಲಿ ಹರ್ಷ ತಂದಿದೆ. ಕೆರೆಯ ಸಂರಕ್ಷಣೆ, ಮೀನುಗಾರಿಕೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಅನುದಾನಗಳನ್ನು ಹುಡುಕಿ ಕೆಲಸ ಮಾಡಬೇಕು. ಜನ ಪ್ರತಿನಿಧಿಗಳು, ಸಂಘ ಸಂಸ್ಥೆ, ಅಧಿಕಾರಿ ಗಳೊಂದಿಗೆ ವಿಚಾರ ಮಾಡಿದ ಶಾಸಕರು ಮೀನುಗಾರಿಕೆಯ ಜೀವ ಸಂಕುಲ ಉಳಿಸಲು ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ ಎಂಬುದನ್ನು ಚರ್ಚಿಸಿದರು. ಜಿಲ್ಲಾ- ತಾಲೂಕಿನ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸುವ ಜೊತೆಗೆ ಸ್ಥಳೀಯ ಕುಂದು ಕೊರತೆಗಳನ್ನು ಬಗೆಹರಿಸಬೇಕು ಎಂದರು.ಬಳ್ಳಾರಿ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರ ಧರ್ಮ ಪತ್ನಿಯಾದ ಶ್ರೀಮತಿ ಅನ್ನಪೂರ್ಣ ಈ.ತುಕಾರಾಂ ಅವರು ಕೆರೆಗೆ ಬಾಗಿನ ಅರ್ಪಿಸಿ ಮಾತನಾಡುತ್ತಾ, ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗಾಗಿ ಸಹಕಾರ ಇರುತ್ತದೆ ಎಂದು ಹೇಳಿದರು. ಒಟ್ಟಿನಲ್ಲಿ, ಜನರ ಜೀವನಾಡಿಯಾದ ಕೆರೆಗಳಲ್ಲಿ ಜನ ಪ್ರತಿನಿಧಿಗಳು, ಮುಖಂಡರು ಮತ್ತು ಸಾರ್ವಜನಿಕರು ಈ ದಿನ ಸೇರಿರುವಂತದ್ದು ಎಲ್ಲರಲ್ಲೂ ಸಂಭ್ರಮಕ್ಕೆ ಮನೆ ಮಾಡಿತ್ತು.

ಈ ಸಂದರ್ಭದಲ್ಲಿ ಮೀನುಗಾರಿಕೆಯ ಇಲಾಖೆಯ ಅಧಿಕಾರಿಗಳಾದ ಮಂಜುನಾಥ ಕೆ.ಎನ್, ಮಲ್ಲೇಶ, ಮಲ್ಲನಾಯಕ, ಶ್ರೀ ಆಂಜನೇಯ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷರಾದ ಕಾಕಿ ಬಸಣ್ಣ, ಉಪಾಧ್ಯಕ್ಷರಾದ ಕೃಷ್ಣಪ್ಪ, ಕಾರ್ಯದರ್ಶಿ ಚೆನ್ನಪ್ಪ, ಸರ್ವ ಸದಸ್ಯರು ಮತ್ತು ನಿರ್ದೇಶಕರು, ಕೂಡ್ಲಿಗಿ ಪ.ಪಂ ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪ ನಾಯಕ, ಉಪಾಧ್ಯಕ್ಷರಾದ ಲೀಲಾವತಿ ಕೆ. ಪ್ರಭಾಕರ್, ಸ್ಥಾಯಿ ಸಮಿತಿಯ ಸದಸ್ಯರಾಗಿ ಸಯ್ಯದ್ ಶೂಕರ್ ಅಹಮದ್, ಕೂಡ್ಲಿಗಿ ಬ್ಲಾಕ್ ಅಧ್ಯಕ್ಷರಾದ ಶ್ರೀ ಗುರುಸಿದ್ದನಗೌಡ, ಪ.ಪಂ ಸರ್ವ ಸದಸ್ಯರು, ಗಂಡಬೊಮ್ಮನಹಳ್ಳಿ ಗ್ರಾ. ಪಂ. ಅಧ್ಯಕ್ಷರಾದ ಓಬಮ್ಮ, ಉ.ಅ. ಬಸವರಾಜ, ಸರ್ವ ಗ್ರಾ. ಪಂ ಸದಸ್ಯರು, ಬೆಳಗಟ್ಟ ಗ್ರಾ. ಪಂ. ಅಧ್ಯಕ್ಷರಾದ ಸಣ್ಣ ಓಬಮ್ಮ, ಸರ್ವ ಗ್ರಾ. ಪಂ. ಸದಸ್ಯರು, ಮುಖಂಡರಾದ ಎಸ್. ವೆಂಕಟೇಶ, ತಮ್ಮಣ್ಣ ಎನ್. ವಿ, ಗುಂಡುಮುಣುಗು ಮಂಜಣ್ಣ, ಆಶಾಲತಾ, ಗೊಂಚಿಕಾರು ಬೋರಣ್ಣ, ಜಿ. ಬಿ. ವೆಂಕಟೇಶ, ಎಂ.ಪಿ. ಚಂದ್ರಣ್ಣ, ಗೋ. ಓಬಣ್ಣ, ದ್ಯಾಮಣ್ಣ, ಬೋಸಣ್ಣ, ಹಾಲಸಾಗರ ಮಂಜಣ್ಣ, ಮಾರೇಶ, ಶರಣಪ್ಪ, ಎಸ್.ಪಿ. ಬೋರಯ್ಯ, ಅನಂತ ಕುಮಾರ್, ಸೂರ್ಯಪ್ರಕಾಶ, ವೆಂಕಟೇಶ, ಬುಡ್ಡಾರೆಡ್ಡಿ, ನಾಗರಾಜ ಹುಲಿಕುಂಟೆ, ಪೇಯಿಂಟ್ ಬಸವರಾಜ, ಪೀಲಿ ಬೋರಯ್ಯ, ಮಹಾದೇವಣ್ಣ, ಬಷೀರ್, ಹೊನ್ನೂರುಸ್ವಾಮಿ, ಎ. ನಾಗರಾಜ, ಜಿ. ಬಿ. ಓಬಣ್ಣ, ಆರ್. ಕೆ. ಬಸಣ್ಣ, ಚಿನ್ನಸ್ವಾಮಿ, ಪಸಲು ಪಾಲಯ್ಯ ಇನ್ನೂ ಮುಂತಾದವರು, ರೈತರು, ಯಜಮಾನರು, ಮಹಿಳೆಯರು, ಯುವಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್. ವೀರೇಶ.ಕೆ.ಹೊಸಹಳ್ಳಿ