ಗ್ರಾಮದ ಮೂವರು ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಸಚಿವ ಭೇಟಿ – ಸಾಂತ್ವನ, ಪರಿಹಾರ ವಿತರಣೆ.
ಕುಮತಿ ಅ.10

ಕೂಡ್ಲಿಗಿ ತಾಲೂಕಿನ ಕುಮತಿ ಗ್ರಾಮದ ಜಯಣ್ಣ ಹಾಗೂ ಸೋಮಣ್ಣ ಕುಟುಂಬದ ಮೂವರು ಮಕ್ಕಳು ಚಿನ್ನಹಗರಿ ಹಳ್ಳದಲ್ಲಿ ಕಳೆದೆರಡು ದಿನಗಳ ಹಿಂದೆ ಮುಳುಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ವಸತಿ ಹಾಗೂ ವಕ್ಪ್ ಖಾತೆಯ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಶಾಸಕ ಡಾ, ಎನ್.ಟಿ. ಶ್ರೀನಿವಾಸ್, ಡಿ.ಸಿ ಎಂ.ಎಸ್. ದಿವಾಕರ್ ಇವರೊಡನೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಸಾಂತ್ವನ ಹೇಳಿ ಸಚಿವ ಜಮೀರ್ ಅವರು ವೈಯಕ್ತಿಕ 5 ಲಕ್ಷ ನಗದು ಹಾಗೂ ಸಿಎಂ ಪರಿಹಾರ ನಿಧಿ ೨ ಲಕ್ಷ ರೂ. ಚೆಕ್ ನೀಡಿದರು. ಒಟ್ಟು:15ಲಕ್ಷ, 2 ಲಕ್ಷದ ಮೂರು ಚೆಕ್‌ಗಳನ್ನು ಕುಟುಂಬಸ್ಥರಿಗೆ ವಿತರಿಸಿ ಮಾತನಾಡಿದರು. ಪರಿಹಾರವಾಗಿ ಧನ ಸಹಾಯ ನೀಡಬಹುದು. ಆದರೆ ಮಕ್ಕಳು ಕಳೆದುಕೊಂಡು ನೋವು, ಸಂಕಟ, ಭಾದೆಯನ್ನು ತಡೆಯಲಾಗದು, ಎಂದು ಸಾಂತ್ವನ ಹೇಳಿದರು. ಕುಟುಂಬದ ಕೋರಿಕೆಯನ್ನು ಆಲಿಸಿದ ಸಚಿವರು ವಸತಿ ನಿಲಯಗಳನ್ನು ಯಾವುದಾದರೊಂದು ಹುದ್ಧೆಯನ್ನು ನೀಡುವಂತೆ ಪರಿಶೀಲಿಸಲಾಗುವುದು, ಕ್ರಮ ತೆಗೆದು ಕೊಳ್ಳುವಂತೆ ಡಿ.ಸಿ ಎಂ.ಎಸ್. ದಿವಾಕರ್ ಅವರಿಗೆ ತಿಳಿಸಿದರು.

ಶಾಸಕ ಡಾ, ಎನ್.ಟಿ. ಶ್ರೀನಿವಾಸ್ ಮಾತನಾಡಿ, ಸಂತೃಪ್ತಿ ಮಳೆಯಾಗಿ, ಕ್ಷೇತ್ರದ ಹಲವಾರು ಕೆರೆಗಳು ತುಂಬಿದ ಸಂತೋಷ ಒಂದೆಡೆಯಾದರೆ, ಕುಮತಿ ಗ್ರಾಮದ ಮೂವರು ವಿದ್ಯಾರ್ಥಿಗಳ ಸಾವು ಬರ ಸಿಡಿಲನಂತೆ ಅಪ್ಪಳಿಸಿದೆ. ಕುಟುಂಬಸ್ಥರಿಗೆ ಅಂದೇ ಸಾಂತ್ವನ ಹೇಳಿ, ಸಿ.ಎಂ ಅವರನ್ನು ಭೇಟಿಯಾಗಿ, ಪರಿಹಾರ ನಿಧಿಯಾಗಿ ತಲಾ 2 ಲಕ್ಷ ರೂ. ಗಳನ್ನು ಬಿಡುಗಡೆ ಗೊಳಿಸಿದ್ದೇನೆ. ಉಸ್ತುವಾರಿ ಸಚಿವರ ಕಾರ್ಯಕ್ಷಮತೆಯನ್ನು ಕೊಂಡಾಡಿದರು. ಪರಿಹಾರ ಮೊತ್ತವನ್ನು ಸಾರ್ಥಕ ಕಾರ್ಯಗಳಿಗೆ ಬಳೆಸಿ ಕೊಳ್ಳುವಂತೆ ತಂದೆ, ತಾಯಿಗಳಿಗೆ ತಿಳಿಸಿದರು. ಮುಖ್ಯ ಕಾರ್ಯನಿರ್ವಾಹಣಧಿಕಾರಿ ನೋಂಗ್ಡಾಯ್ ಮಹಮ್ಮದ್ ಅಕ್ರಮ್ ಅಲಿ ಶಾ, ಗ್ರೇಡ್-2 ತಹಶೀಲ್ದಾರ್ ವಿ.ಕೆ. ನೇತ್ರಾವತಿ, ಮಾಜಿ ಜಿಪಂ ಸದಸ್ಯ ಕೆ.ಎಂ. ಶಶಿಧರ, ಕೂಡ್ಲಿಗಿ ಪ.ಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ, ಕೂಡ್ಲಿಗಿ ಬ್ಲಾಕ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಹೊಸಹಳ್ಳಿ ಬ್ಲಾಕ್ ಅಧ್ಯಕ್ಷ ಕುಮಾರ ಗೌಡ ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ, ಎಸ್. ದುರುಗೇಶ್, ಕಂದಗಲ್ಲು ಪರಶುರಾಮ, ಬಿ.ಟಿ. ಗುದ್ದಿ ದುರುಗೇಶ್, ಗುಣಸಾಗರ ಕೃಷ್ಣಪ್ಪ, ಎಳೆನೀರು ಗಂಗಣ್ಣ, ಬಂಡೆ ರಾಘವೇಂದ್ರ,ಬಿ. ಒಬಣ್ಣ ಸೇರಿದಂತೆ ಹಲವಾರು ಮುಖಂಡರು ಇದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ