ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ವಿಜೇತ ಜಾಂಬ್ರೆಗೆ ಸನ್ಮಾನ.
ಬೇವೂರ ಅ.10

ಬೇವೂರಿನ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಬಿ.ಎ. ವಿದ್ಯಾರ್ಥಿ ಜ್ಯೋತಿಭಾ ಜಾಂಬ್ರೆ ಇತ್ತಿಚೀಗೆ ಜರುಗಿದ ಕುಸ್ತಿ ಕ್ರೀಡಾ ಕೂಟಗಳ ಪೈಕಿ ಬಾಗಲಕೋಟೆ ಜಿಲ್ಲಾ ಮಟ್ಟದ, ಹಾಗೂ ಬೆಳಗಾವಿ ವಲಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಆಯ್ಕೆಗೊಂಡು ನಾಡಿನ ಹೆಮ್ಮೆಯ ಮೈಸೂರಿನ ದಸರಾ ಪ್ರಯುಕ್ತ ಮೈಸೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ದಸರಾ ಕ್ರೀಡಾ ಕೂಟದ ಪುರುಷರ ವಿಭಾಗದ ೭೦ ಕೆ.ಜಿ ಕುಸ್ತಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಗೋಲ್ಡ್ ಮೆಡಲ್ ಹಾಗೂ ಪ್ರಶಸ್ತಿ ಪತ್ರ ಪಡೆದು ಗ್ರಾಮೀಣ ವಿಭಾಗದ ಪ್ರತಿಷ್ಠಿತ ವಿದ್ಯಾ. ಸಂಸ್ಥೆಯಾದ ಆದರ್ಶ ವಿದ್ಯಾವರ್ಧಕ ಸಂಘಕ್ಕೆ ಹಾಗೂ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ದಸರಾ ಕ್ರೀಡಾ ಕೂಟವನ್ನು ಯಶಸ್ವಿಯಾಗಿ ಪೂರೈಸಿ ಮಹಾವಿದ್ಯಾಲಯಕ್ಕೆ ಆಗಮಿಸಿದ ಕ್ರೀಡಾ ವಿಜೇತ ಜ್ಯೋತಿಭಾ ಜಾಂಬ್ರೆಯವರಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಿ. ಜಿ. ಮಾಗನೂರ ವಕೀಲರು ಗೌರವ ಸನ್ಮಾನವನ್ನು ನೇರವೇರಿಸಿ ಕ್ರೀಡಾ ವಿಜೇತ ವಿದ್ಯಾರ್ಥಿಯಿಂದ ನಿರಂತರವಾಗಿ ಕುಸ್ತಿ ವಿಭಾಗದಲ್ಲಿ ಸಾಧನೆಗಳು ಹೊರ ಹೊಮ್ಮಲಿ ಎಂದು ಶುಭ ಹಾರೈಸಿದರು. ಈ ಸನ್ಮಾನ ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ, ಜಗದೀಶ ಗು. ಭೈರಮಟ್ಟಿ, ಹಿರಿಯ ಉಪನ್ಯಾಸಕರಾದ ಬಿ.ಬಿ ಬೇವೂರ, ಹಿರಿಯ ಉಪನ್ಯಾಸಕರಾದ ಶ್ರೀ ಎಸ್.ಎಸ್. ಆದಾಪೂರ ಕನ್ನಡ ಉಪನ್ಯಾಸಕರಾದ ಡಾ, ಸಂಗಮೇಶ ಹಂಚಿನಾಳ, ಎನ್.ಎಸ್. ಎಸ್ ವಿಭಾಗದ ಯೋಜನಾಧಿಕಾರಿ ಶ್ರೀ ಜಿ.ಎಸ್ ಗೌಡರ ಇಂಗ್ಲೀಷ ಉಪನ್ಯಾಸಕ ಡಿ.ವಾಯ್. ಬುಡ್ಡಿಯವರ, ಇತಿಹಾಸ ಉಪನ್ಯಾಸಕ ಡಾ, ಎ.ಎಂ. ಗೊರಚಿಕ್ಕನವರ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ನಾಗಲಿಂಗೇಶ ಬೆಣ್ಣೂರ ಸೇರಿದಂತೆ ಭೋಧಕೇತರ ಸಿಬ್ಬಂದಿ ವರ್ಗದವರಾದ ಶ್ರೀ ಆರ್.ಬಿ. ಕರಡಿಗುಡ್ಡ, ಶಿವು ಕಟಗಿ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಜ್ಯೋತಿಬಾ ಜಾಂಬ್ರೆ ದಸರಾ ಕ್ರೀಡಾ ಕೂಟದಲ್ಲಿ ಆಯ್ಕೆ ಯಾಗಿದ್ದಕ್ಕಾಗಿ ಬೇವೂರಿನ ಆ.ವಿ.ವ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯ ಬಳಗ ಸಿಬ್ಬಂದಿವರ್ಗ ವಿದ್ಯಾರ್ಥಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ : ಅಮರೇಶ ಮ.
ಗೊರಚಿಕ್ಕನವರ.