ನಿಧನ ವಾರ್ತೆ:ಶ್ರೀ ಮತಿ ಸಿ. ಸಾವಿತ್ರಮ್ಮ ಗಂಡ ದಿ, ಸಾಹುಕಾರ ಸಿದ್ಲಿಂಗಪ್ಪ ಜರ್ಮಲಿ.
ಜರ್ಮಲಿ ಅ.12

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಜರ್ಮಲಿ ಗ್ರಾಮದ, ದಿವಂಗತ ಸಾಹುಕಾರ ಸಿದ್ದಲಿಂಗಪ್ಪ ರವರ ಧರ್ಮಪತ್ನಿ ಯವರಾದ, ಶ್ರೀಮತಿ ಸಿ.ಸಾವಿತ್ರಮ್ಮ (79 ವರ್ಷ). ಅಕ್ಟೋಬರ್ 12 ರಂದು ಬೆಳಿಗ್ಗೆ 5:30 ಗಂಟೆಗೆ, ಜರ್ಮಲಿ ಗ್ರಾಮದ ತಮ್ಮ ಸ್ವ ಗೃಹದಲ್ಲಿ ನಿಧನರಾಗಿರುತ್ತಾರೆ. ಅವರು ಬಹು ದಿನಗಳಿಂದ, ವಯೋಸಹಜ ಖಾಯಿಲೆ ದಿಂದ ಬಳಲುತಿದ್ದರು. ಸಿ. ಸಾವಿತ್ರಮ್ಮನವರು ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಹೊಂದಿವರಾಗಿದ್ದರು.ಅವರ ಪುತ್ರರಾದ:- ಸಿ. ರಾಜಶೇಖರ್ (ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶರು) ಜೆ. ಸಿ.ಧನುಂಜಯ (ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರು) ಸಿ. ಸಿದ್ದೇಶ್ವರ (ವರ್ತಕರು)ಜೆ.ಸಿ. ಶಶಿಧರ (ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರು) ಮತ್ತು ಸೊಸೆಯಂದಿರು ಮೊಮ್ಮಕ್ಕಳು ಹಾಗೂ ತುಂಬು ಕುಟುಂಬದ, ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಅಂತ್ಯ ಸಂಸ್ಕಾರ:- ಮೃತರ ಅಂತ್ಯ ಸಂಸ್ಕಾರವನ್ನು ಅಕ್ಟೋಬರ್ 13 ರಂದು ಭಾನುವಾರ ಮೃತರ ಸ್ವ ಗ್ರಾಮ ಜರ್ಮಲಿ ಗ್ರಾಮದಲ್ಲಿ ಬೆಳಿಗ್ಗೆ 10:00 ಗಂಟೆಗೆ ಜರುಗಿಸಲಾಗುವುದು. ಸಂತಾಪ:- ಮೃತ ಸಿ. ಸಾವಿತ್ರಮ್ಮರ ಅಗಲಿಗೆ ಅವರ ಕುಟುಂಬ, ಹಾಗೂ ಜರ್ಮಿಲಿ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಕ್ಷೇತ್ರದ ಶಾಸಕರಾದ ಡಾ, ಎನ್.ಟಿ ಶ್ರೀನಿವಾಸ್. ಜರ್ಮಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಸರ್ವ ಸದಸ್ಯರು, ಸೇರಿದಂತೆ ವಿವಿಧ ಜನ ಪ್ರತಿನಿಧಿಗಳು. ಗಣ್ಯ ಮಾನ್ಯರು, ಹಿರಿಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ. ಹೊಸಹಳ್ಳಿ