ವಿಜಯದಶಮಿ ನಿಮಿತ್ತ ಸಡಗರ ಸಂಭ್ರಮ ದಿಂದ ಭಕ್ತರ ಸಮ್ಮುಖದಲ್ಲಿ – ಬನ್ನಿ ಮುಡಿದರು.
ಕೊಟ್ಟೂರು ಅ.12

ಪಟ್ಟಣದ ಸಾವಿರಾರು ಭಕ್ತರ ಆರಾಧ್ಯ ದೇವರು ಶ್ರೀ ಗುರು ಬಸವೇಶ್ವರ ಸ್ವಾಮಿಯ ದೇಗುಲದಲ್ಲಿ ವಿಜಯದಶಮಿ ನಿಮಿತ್ತ ಶನಿವಾರ ಸಡಗರ ಸಂಭ್ರಮ ದಿಂದ ಭಕ್ತರ ಸಮುಖದಲ್ಲಿ ಬನ್ನಿ ಮುಡಿದರು .ಪ್ರತಿ ವರ್ಷ ಪದ್ಧತಿಯಂತೆ ಶ್ರೀ ಮಠದಲ್ಲಿ ಸ್ವಾಮಿಗೆಸಕಲ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಕೊಂಡು ಬರಲಾಗುತ್ತಿದ್ದು. ಅಕ್ಬರ್ ಬಾದಷಾನು ಕೊಟ್ಟಿರುವ ಖಡ್ಗಯನ್ನು ಹೊನ್ನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಶ್ರೀ ಸ್ವಾಮಿಯ ಆಯಗಾರರು ಮತ್ತು ಧರ್ಮಕರ್ತರು ಸಹ ಧರ್ಮಕರ್ತರು, ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿ, ಭಕ್ತರು ಸ್ವಾಮಿಯ ಬಿರುದಾವಳೆಗಳಘೋಷಣೆ ಯೊಂದಿಗೆ ಬನ್ನಿ ಮಂಟಪಕ್ಕೆ ಸಾಗಿದರು.ಶ್ರೀ ಸ್ವಾಮಿಯ ಪಲ್ಲಕ್ಕಿ ಮುಂದೆ ಕೊಟ್ಟೂರೇಶ್ವರ ಸ್ವಾಮಿಯಕ್ರೀಯಾ ಮೂರ್ತಿಗಳು ಆರ್.ಎಂ ಶಿವಪ್ರಕಾಶ ಸ್ವಾಮಿಗಳುಸಾನಿಧ್ಯದಲ್ಲಿ ಚಾಲನೆ ನೀಡಿದರು. ಪ್ರಧಾನ ಧರ್ಮಕರ್ತ ಶೇಖರಯ್ಯ ಹಾಗೂ ಅರ್ಚಕರು ಸಮಳ, ಮೇಳ ಮತ್ತು ನಂದಿಕೋಲು ಸಕಲ ವಾದ್ಯಗಳೊಂದಿಗೆ ಶ್ರೀ ಸ್ವಾಮಿಯ ಉತ್ಸವ ಮೂಲಕ ಸ್ವಾಮಿಯೊಂದಿಗೆ ಬನ್ನಿ ಮಂಟಪಕ್ಕೆ ಸಾಗಿದರು. ನಂತರ ಕ್ರೀಯಾ ಮೂರ್ತಿಗಳು ಖಡ್ಗವನ್ನು ಬನ್ನಿ ಮರಕ್ಕೆ ಸ್ಪರ್ಶಿಸಿ ಪೂಜೆ ಸಲ್ಲಿಸಿದರು. ನಂತರ ಆರ್.ಎಂ ಶಿವ ಪ್ರಕಾಶ ಸ್ವಾಮಿಗಳು ದೇವರಿಂದ ಭಕ್ತದಿಗಳು ಬನ್ನಿ ಪತ್ರೆ ಪಡೆದು ನಮಸ್ಕರಿಸಿ ಅಶೀರ್ವಾದ ಪಡೆದು ಕೊಂಡರು. ಭಕ್ತರು ಬನ್ನಿ ಮುಡಿದು ಬನ್ನಿ ಮಂಟಪದಿಂದ ಹಿಂತಿರುಗುತ್ತಿದ್ದಂತೆ ಪ್ರೀತಿ ಮತ್ತು ಬಾಂಧವ್ಯದ ಸಂಕೇತವಾದ ಬನ್ನಿಯನ್ನು ವಿನಿಮಯ ಮಾಡಿಕೊಂಡು ‘ಬನ್ನಿ ಕೊಟ್ಟು ಬಂಗಾರದಂತೆ ಇರಲಿ’ ಎಂದು ಶುಭ ಕೋರಿದರು. ಪಲ್ಲಕ್ಕಿಯನ್ನು ಶ್ರೀ ಸ್ವಾಮಿಯ ಮಠಕ್ಕೆ ಸಾಗಿಸಿ ಶ್ರೀ ಸ್ವಾಮಿಗೆ ಮಂಗಳಾರತಿ ಮೂಲಕ ಸಂಭ್ರಮ ಮುಕ್ತಾಯ ಗೊಂಡಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು