ವಲಯ ಮಟ್ಟದ ಕ್ರೀಡಾಕೂಟದಲ್ಲಿ ಗೋಲಗೇರಿ ಕೆ. ಬಿ. ಎಂ. ಪಿ.ಎಸ್ ಶಾಲೆಯ ವಿಜಯೋತ್ಸವ.
ಗೋಲಗೇರಿ ಸ.10

ಸಿಂದಗಿ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಗೋಲಗೇರಿ KBMPS ಶಾಲೆಯ ಮಕ್ಕಳು ಗುಂಪು ಆಟಗಳಾದ ಕಬಡ್ಡಿ ಆಟದಲ್ಲಿ ಪ್ರಥಮ ಹಾಗೂ ರಿಲೇ ಓಟದಲ್ಲಿ ಪ್ರಥಮ ಹಾಗೂ ವಯಕ್ತಿಕ ಆಟಗಳಾದ ಚಕ್ರ ಎಸೆತದಲ್ಲಿ ಪ್ರಥಮ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ತಾಲ್ಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗೋಲಗೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಶರಣು.ಚಟ್ಟಿ,ಮುಖ್ಯ ಗುರುಗಳಾದ ಪಿ. ಎಮ್. ಶೇಖ್, ಗುರುಗಳಾದ ಬಸಯ್ಯ. ಮಠ, ಯಮನಪ್ಪ. ಗುಡಿಮನಿ, ಗ್ರಾಮಸ್ಥರು ಹಾಗೂ ಶಿಕ್ಷಣ ಪ್ರೇಮಿಗಳಾದ ಮಲ್ಕಣ್ಣ. ಗಡೆಗೆನ್ನವರ,ರುಕುಮ್ಮುದ್ದಿನ.ಪಟೇಲ ಹಳಿಮನಿ, ಮಡಿವಾಳ. ನಾಯ್ಕೋಡಿ ಹರ್ಷ ವ್ಯಕ್ತಪಡಿಸಿ. ಅಭಿನಂದಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಮನಗೂಳಿ.ತಾಳಿಕೋಟೆ