ನಾಗಮೋಹನ್ ದಾಸ್ ವರದಿ ವಿರುದ್ಧ ಬಲಗೈ ಜಾತಿಗಳ ಒಕ್ಕೂಟದ – ಪ್ರತಿಭಟನೆ ಘೋಷಣೆ.

ಮಾನ್ವಿ ಆ.18

ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಒಳಮೀಸಲಾತಿ ಏಕಸದಸ್ಯ ಆಯೋಗದ ವರದಿಯ ವಿರುದ್ಧವಾಗಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟವು ಆಗಸ್ಟ್ 18ರಂದು ಬೆಳಿಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಮಹಾಪ್ರತಿಭಟನೆ ನಡೆಸಲು ಘೋಷಿಸಿದೆ.

ಒಕ್ಕೂಟದ ಆರೋಪ ಪ್ರಕಾರ:-

ಸಮೀಕ್ಷೆಯಿಂದ 40 ಲಕ್ಷಕ್ಕೂ ಹೆಚ್ಚು ಜನರನ್ನು ಹೊರಗಿಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ 45% ಸಮೀಕ್ಷೆ ಮಾಡದೇ, ಜನ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ.

ಸರ್ಕಾರದ ನಿಬಂಧನೆಗೆ ವಿರುದ್ಧವಾಗಿ “ಪ್ರವರ್ಗ-ಎ” ಎಂಬ ಗುಂಪನ್ನು ಸೃಷ್ಟಿಸಲಾಗಿದೆ.

ಹಲವಾರು ಬಲಗೈ/ಹೊಲೆಯ/ಛಲವಾದಿ ಜಾತಿಗಳನ್ನು ಉದ್ದೇಶ ಪೂರ್ವಕವಾಗಿ ಇತರೆ ಜಾತಿಗಳಿಗೆ ಸೇರಿಸಿ ಸಂಖ್ಯೆ ಕಡಿಮೆ ಮಾಡಲಾಗಿದೆ.

👉 ಒಕ್ಕೂಟದ ಎಚ್ಚರಿಕೆ:-

ಸರ್ಕಾರವು ಆಗಸ್ಟ್ 19 ರಂದು ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಅಂಗೀಕರಿಸಿದರೆ, ಪರಿಶಿಷ್ಟ ಜಾತಿಯ ಬಲಗೈ ಸಮುದಾಯ ರಾಜ್ಯ ವ್ಯಾಪಿ ಉಗ್ರ ಹೋರಾಟ ನಡೆಸಲಿದೆ.ನ್ಯಾಯಮೂರ್ತಿ ನಾಗಮಹನ್ ದಾಸ್ ಅವರ ವರದಿ ಅಂಗೀಕರಿಸಿದ್ದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಎಲ್ಲಾ ಸಚಿವರು ಹಾಗೂ ಶಾಸಕರು ರಾಜೀನಾಮೆ ಕೊಡುವ ವರೆಗೂ ರಾಜ್ಯದ ಉಗ್ರ ಹೋರಾಟ ನಡೆಯುವುದು.

✊ “ಬಲಗೈ ಸಮುದಾಯದ ಹಕ್ಕು:-

ನ್ಯಾಯಕ್ಕಾಗಿ ಹೋರಾಟ ತಪ್ಪದು” ಎಂದು ಒಕ್ಕೂಟ ಎಚ್ಚರಿಸಿದೆ.

ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ತಾಲೂಕು ಸಮಿತಿ ಸಂಚಾಲಕರಾದ ಕೆ.ನಾಗಲಿಂಗಸ್ವಾಮಿ ವಕೀಲರು, ತಿಪ್ಪಣ್ಣ ಬಾಗಲವಾಡ ವಕೀಲರು, ಶಿವರಾಜ ಜಾನೇಕಲ್, ಶಿವರಾಜ ಉಮಳಿ ಹೊಸೂರು, ಲಕ್ಷ್ಮಣ ಜಾನೇಕಲ್, ನರಸಪ್ಪ ಜೂಕೂರು, ಹನುಮಂತ ಸೀಕಲ್, ಹನುಮಂತ ಉದ್ಬಾಳ್, ವಿಶ್ವನಾಥ ನಂದಿಹಾಳ್, ದತ್ತಾತ್ರೇಯ ಕೋಟ್ನೆಕಲ್, ಗಣೇಶ ಕುರ್ಡಿ, ಹನುಮಂತರಾಯ ಕಪಗಲ್, ಮಹೇಶ ಕೋಟ್ನೆಕಲ್, ಶ್ರೀನಿವಾಸ ನಂದಿಹಾಳ್, ರಮೇಶ ಮಂದಕಲ್, ಹುಸೇನಪ್ಪ ನಂದಿಹಾಳ್, ಈರಣ್ಣ ಕುರ್ಡಿ, ಕಿರಣ್ ಕುಮಾರ ಉದ್ಬಳ್, ಸಂಗನಬಸವ ಹಿರೇಬದರದಿನ್ನಿ, ನರಸಿಂಹ ಸೀಕಲ್ ಸೇರಿದಂತೆ ಇನ್ನಿತರರು ಇದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button