ಠಾಣಾ ಆವರಣದಲ್ಲಿ ಗಿಡ ಬೆಳೆಸಿದ ಪಿಎಸ್ಐ ಅಶೋಕ ನಾಯಕ.
ಇಂಡಿ ಜೂನ್.4

ಇಂಡಿಯ ಗ್ರಾಮೀಣ ಪಿಎಸ್‌ಐ ಅಶೋಕ ನಾಯಕ ರವರು ಠಾಣಾ ಆವರಣದಲ್ಲಿ ಹಲವಾರು ಬಗೆಯ ಗಿಡಗಳನ್ನು ಹಚ್ಚಿ ಪ್ರತಿದಿನ ಅವುಗಳಿಗೆ ನೀರು ಹಾಕಿ ಅವುಗಳ ಪೋಷಣೆ ಮಾಡುತ್ತಿದ್ದಾರೆ.ಅಶೋಕ ರವರು ಎರಡು ವರ್ಷಗಳ ಹಿಂದೆ ಇಂಡಿಗೆ ವರ್ಗವಾಗಿ ಬಂದಾಗ ಪೋಲಿಸ ಠಾಣೆ ಹೊಸದಾಗಿ ನಿರ್ಮಿಸಲಾಗಿತ್ತು. ಹೀಗಾಗಿ ಅವರು ಹೆಚ್ಚಿನ ಆಸಕ್ತಿ ವಹಿಸಿ ಪೋಲಿಸ ಠಾಣಾ ಆವರಣ ಸುಂದರವಾಗಿ ಕಾಣಲು ಹೂ ಮತ್ತು ಹಣ್ಣಿನ ಮತ್ತು ಸಾಮಾನ್ಯ ಗಿಡಗಳನ್ನು ಬೆಳೆಸಿದ್ದಾರೆ.ಮಹಾಗನಿ, ಚಾರಕೋಲ, ಪೇರಲ, ಸಪೋಟ, ಸೀತಾಫಲ, ತೆಂಗು ಸೇರಿದಂತೆ ವಿವಿಧ ಬಗೆಯ ಗಿಡ ಕಾಣಲು ಸಿಗುತ್ತದೆ.ಪ್ರತಿದಿನ ಬೆಳಗ್ಗೆ 6 ಗಂಟೆಗೆ ಅರ್ಧ ತಾಸು ಗಿಡಗಳಿಗೆ ನೀರು ಹಾಕುವದು, ಅವು ಮಳೆ ಗಾಳಿಗೆ ಬೀಳದಂತೆ ಕಟ್ಟಿಗೆ ಹಾಕಿ ಸುತ್ತಳಿ ಅಥವಾ ದಾರದಿಂದ ಕಟ್ಟುವದು ಸೇರಿದಂತೆ ಹಲವಾರು ಪರಿಸರ ಪೂರಕ ಕೆಲಸ ಮಾಡುತ್ತಾರೆ. ಅವರ ಪೋಲಿಸ ಸಿಬ್ಬಂದಿಯ ಪ್ರತಿಯೊಬ್ಬರು ಇವರ ಪರಿಸರ ಕಾರ್ಯಕ್ಕೆ ಸಹಕಾರ ನೀಡುತ್ತಾರೆ.ಠಾಣೆಗೆ ಹಿರಿಯ ಅಧಿಕಾರಿಗಳು ಬಂದಾಗ ಅವರಿಂದ ಸಸಿ ನೆಡಿಸಿ ಬೆಳೆಸುತ್ತಿದ್ದಾರೆ. ಈ ಹಿಂದೆ ಅಶೋಕ ನಾಯಕ ರವರು ಹುನಗುಂದ ಮತ್ತು ಮಹಾಲಿಂಗಪುರದಲ್ಲಿದ್ದಾಗ ಅಲ್ಲಿಯೂ ಇದೇ ರೀತಿಯ ಗಿಡಗಳನ್ನು ಬೆಳೆಸಿದ್ದಾರೆ.ಠಾಣೆ ಬರುವ ಜನ ಇವರ ಪರಿಸರ ಪ್ರೇಮ ಮೆಚ್ಚಿ ಇವರಿಗೆ ಅಭಿನಂದಿಸುತ್ತಾರೆ.

ಕೊಟ್.ಪಿಎಸ್‌ಐ ಅಶೋಕರವರ ಕಾರ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗ ಮತ್ತು ಠಾಣೆ ಬರುವ ಗ್ರಾಮಸ್ಥರು ಪ್ರಶಂಸಿಸುತ್ತಾರೆ. ಅವರ ಕಾರ್ಯ ಪ್ರಶಂಸನೀಯಚಂದ್ರಕಾಂತ ನಂದರೆಡ್ಡಿ ಡಿ.ವಾಯ್.ಎಸ್.ಪಿ ಇಂಡಿಕೋಟ್-ಅಶೋಕ ನಾಯಕ ರವರು ನಮ್ಮ ಹೊಲದ ಹತ್ತಿರ ಬಂದಾಗ ನನಗೆ ಗಿಡ ಬೆಳೆಸಲು ಪ್ರೇರಣೆ ನೀಡಿದರು. ಇಂದು ನನ್ನ ಹೊಲದಲ್ಲಿ ಶ್ರೀಗಂಧ, ಮಹಾಗನಿ,ಸಾಗವಾನಿ,ತೆಂಗು,ಮಾವಿನಹಣ್ಣು ಸೇರಿದಂತೆ ಎಲ್ಲ ರೀತಿಯ ಹಣ್ಣಿನ ಗಿಡ ಬೆಳೆಸಿದ್ದೇವೆ. ಭವಿಷ್ಯದಲ್ಲಿ ನಾನು ಅರ್ಥಿಕವಾಗಿ ಸಬಲನಾಗಬಹುದು ಮತ್ತು ಉತ್ತಮ ಪರಿಸರ ಸಿಗಲಿದೆ.ಡಾ|| ವಿಫುಲ್ ಕೋಳೆಕರ ಚಿಕ್ಕ ಮಕ್ಕಳ ತಜ್ಞರು ಸರಕಾರಿ ಆಸ್ಪತ್ರೆ ಇಂಡಿ ಇನ್ನಿತರರು ಉಪಸ್ಥಿತರಿದ್ದರು.