ನಶೆಯಲ್ಲಿ ನಡೆಯಿತು – ವರುಣ್ ಕೊಲೆ.
ತರೀಕೆರೆ ಜೂನ್.4

ಕುರುಬ ಸಮಾಜದಿಂದ ಮತ್ತು ಅಭಿಮಾನಿಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾನಮತ್ತರಾಗಿ ಬಂದ ಯುವಕರ ಗಲಾಟೆಯು ವರುಣ್ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಶಾಸಕ ಜಿ. ಹೆಚ್. ಶ್ರೀನಿವಾಸ್ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಪಟ್ಟಣದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಆರ್ಕೆಸ್ಟ್ರಾದಲ್ಲಿ ಹಾಡು ಬದಲಿಸುವ ವಿಚಾರದಲ್ಲಿ ವೇದಮೂರ್ತಿ ಮತ್ತು ವರುಣ್ ಮಧ್ಯೆ ಸಣ್ಣ ಜಗಳವಾಗಿದೆ. ಹಿರಿಯರು ಬುದ್ಧಿ ಹೇಳಿ ಕಳುಹಿಸಿರುತ್ತಾರೆ ಆದರೆ ರಾತ್ರಿ ಸುಮಾರು 9:30 ಸಮಯದಲ್ಲಿ ಕಂಬದ ಬೀದಿ ಶಾಲೆಯ ಬಳಿ ಇರುವ ಎಲ್ಲಮ್ಮನ ದೇವಸ್ಥಾನದ ಬಳಿ ಮತ್ತೆ ಸೇರಿದ ಯುವಕರ ಗುಂಪು ಕತ್ತಲಲ್ಲಿ ವರುಣನಿಗೆ ಭರ್ಜಿಯಿಂದ ತಿವಿಯಲಾಗಿತ್ತು, ತೀವ್ರ ರಕ್ತಸ್ರವದಲ್ಲಿ ಇದ್ದ ವರುಣನನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿರುತ್ತಾನೆ. ಗಲಾಟೆ ಮಾಡಿಕೊಂಡಿರುವ ಯುವಕರೆಲ್ಲರೂ ನನ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ನನಗೆ ತುಂಬಾ ಬೇಕಾದವರು. ಯಾರೇ ತಪ್ಪಿತಸ್ಥರಿದ್ದರೂ ಅವರ ಮೇಲೆ ಕಾನೂನು ಕ್ರಮ ಆಗಲಿ. ನಿಧನರಾದ ವರುಣ್ ಕುಟುಂಬಕ್ಕೆ ದುಃಖವನ್ನು ತಡೆಯುವ ಶಕ್ತಿಯನ್ನು ಆ ದೇವರು ಕೊಡಲಿ ಎಂದು ಹೇಳಿದರು. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಆಗಮಿಸಿ ವಿಚಾರಣೆ ನಡೆಸಿದ್ದಾರೆ.ಆರೋಪಿಗಳಾದ ವೇದಮೂರ್ತಿ,ಮಂಜುನಾಥ,ನವೀನ,ಧನುಷ್, ಅರ್ಚಿತ್,ಪರಮೇಶ್, ನಿತಿನ್,ಲೋಹಿತ್, ಸಂಜಯ್, ಗಗನ್, ಈಶ, ಶರತ್ ಎಂಬುವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಕಿರಣ್ ಕುಮಾರ್ ರವರ ದೂರಿನ ಮೆರೆಗೆ ಮೊಕದ್ದಮೆ ನಂ 138/2023. ರಂತೆ ಪ್ರಕರಣ ದಾಖಲಿಸಿಕೊಂಡು ತರಿಕೆರೆ ಪೊಲೀಸ್ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸು ಅಧೀಕ್ಷಕರಾದ ಕೃಷ್ಣಮೂರ್ತಿ, ಡಿ ವೈ ಎಸ್ ಪಿ ನಾಗರಾಜ್, ಪಿ ಐ ವೀರೇಂದ್ರ, ಪಟ್ಟಣದಲ್ಲಿ ಸೂಕ್ತ ಬಂದೋಬಸ್ತು ಮಾಡಲಾಗಿದೆ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಶಾಂತಿಯುತವಾಗಿ ಶವಸಂಸ್ಕಾರ ಮಾಡಲಾಯಿತು. ಶಾಸಕ ಜಿ. ಹೆಚ್. ಶ್ರೀನಿವಾಸ್ ವರುಣ್ ಕೊಲೆಗೆ ಕಂಬನಿ ಮಿಡಿದರು. ಯುವಕರೆಲ್ಲರೂ ಮದ್ಯಪಾನ ಅಮಲಿನ ನಶೆಯಲ್ಲಿ ನಡೆದೇ ಹೋಯಿತು ವರುಣ್ ಕೊಲೆ ಎಂದು ದುಃಖ ತಪ್ತರಾದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ