ಮುಖಂಡರ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ – ತಹಶೀಲ್ದಾರ್ ರಾಜು ಪಿರಂಗಿ.
ಮಾನ್ವಿ ಅ.17

ಮಹರ್ಷಿ ವಾಲ್ಮೀಕಿ ಆಚರಣೆಗೆ ಅಧಿಕಾರಿಗಳು ಇರಬೇಕು. ಆದರೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದ ಮಹರ್ಷಿ ಜಯಂತಿಗೆ ಅಧಿಕಾರಿಗಳು ಗೈರಾಗಿದ್ದರಿಂದ ಮುಖಂಡರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ವಾಲ್ಮೀಕಿ ಜಯಂತಿಗೆ ತಾಲೂಕ ಮಟ್ಟದ ಅಧಿಕಾರಿಗಳು ಇಲ್ಲವೆಂದ ಮೇಲೆ ಯಾಕಾದರು ಕಾರ್ಯಕ್ರಮ ಮಾಡುತ್ತೀರಾ, ಅಧಿಕಾರಿಗಳ ಕ್ರಮ ಜರುಗಿಸಬೇಕು ಎಂದಾಗ ತಹಸೀಲ್ದಾರ್ ರಾಜು ಪಿರಂಗಿಯವರು ಕಕ್ಕಾಬಿಕ್ಕಿಯಾದರು.

ಪೂರ್ವಭಾವಿ ಸಭೆಯಲ್ಲಿಯೂ ಸಹ ತಾಲೂಕ ಮಟ್ಟದ ಅಧಿಕಾರಿಗಳು ಇರಬೇಕು ಎಂದು ಸೂಚಿಸಿದ್ದರು ಸಹ ಅಧಿಕಾರಿಗಳು ಬಂದಿಲ್ಲ ಅಂದಮೇಲೆ ನಮ್ಮ ಧಿಕ್ಕಾರ ಎಂದು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತಹಸೀಲ್ದಾರ್ ರಾಜು ಪಿರಂಗಿ ಏನು ತಿಳಿಯದವರಾಗೆ ನಿಂತಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ