ಜಾತಿಗಣತಿ ವರದಿ ಜಾರಿಯಾಗಲಿ – ಸಂಜಯ ದೊಡ್ಡಮನಿ.
ಗದಗ ಅ.17

ರಾಜ್ಯದ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ಆರ್ಥಿಕ ಶೈಕ್ಷಣಿಕ ರಾಜಕೀಯ ನ್ಯಾಯ ಹಾಗೂ ಮೂಲ ಸೌಕರ್ಯಗಳು ಸಿಗಬೇಕಾದರೆ ಜಾತಿಗಣತಿ ವರದಿ ಜಾರಿ ಯಾಗಬೇಕಾಗಿದೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿಯ ಮಾಧ್ಯಮ ವಿಭಾಗದ ವಕ್ತಾರ ಸಂಜಯ್ ದೊಡ್ಡಮನಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಾತಿ ಗಣತಿ ವರದಿ ಜಾರಿಗೆ ಯಾವುದೇ ಬಲಾಢ್ಯ ಸಮುದಾಯಗಳು ವಿರೋಧ ವಿದ್ದರೂ ಅಂತಹ ನಾಯಕರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಲ್ಲಾ ಸಂವಿಧಾನದಡಿ ಎಲ್ಲರಿಗೂ ನ್ಯಾಯ ಸಿಗಬೇಕಾದರೆ ಜಾತಿ ಅನುಸಾರವಾಗಿ ಮತ್ತು ಜನಸಂಖ್ಯೆ ಆಧಾರದ ಮೇಲೆ ಸರ್ಕಾರದ ವತಿಯಿಂದ ಬಜೆಟ್ ಅನುದಾನ ಮೂಲ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಆದ್ದರಿಂದ ಅತಿ ಶೀಘ್ರದಲ್ಲಿ ಜಾತಿ ಗಣತಿ ಜಾರಿಯಾಗಬೇಕು ಜನಸಂಖ್ಯೆ ಆಧಾರದ ಮೇಲೆ ಮೂಲ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿಯ ವಿಭಾಗ ವತಿಯಿಂದ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಉಳಿದ ಎಲ್ಲಾ ನಾಯಕರಿಗೆ ಒತ್ತಾಯ ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ.ಗದಗ