ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ಆಗ್ರಹಿಸಿ – ಕೆ.ಡಿ.ಆರ್ ವೇದಿಕೆಯಿಂದ ಮನವಿ.
ಹೊಸಪೇಟೆ ಅ.18

ಒಳ ಮೀಸಲಾತಿಯನ್ನು ನೀಡುವ ಸಂವಿಧಾನಿಕ ಅಧಿಕಾರವನ್ನು ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟಿನ ಸಂವಿಧಾನಿಕ ಪೂರ್ಣಪೀಠವು ಅ 1 ರಂದು ಮಹತ್ವದ ತೀರ್ಪು ನೀಡಿದ್ದು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡುವಲ್ಲಿ ಮೀನಾಮೇಶ ನಿರ್ಲಕ್ಷ್ಯ ಧೋರಣೆ ವಹಿಸಿಕೊಂಡು ಜಾರಿ ಗೊಳ್ಳಿಸುವಲ್ಲಿ ಮುಂದಾಗುತ್ತಿಲ್ಲ ಒಳ ಮೀಸಲಾತಿ ಅಸ್ಪೃಶ್ಯತೆ ಸಮುದಾಯಗಳಜನರನ್ನು ದಿಕ್ಕು ತಪ್ಪಿಸುವ ಕೆಲಸ ನಿಲ್ಲಿಸದೆ ಇದ್ದರೆ ಮುಂದಿನ ನಡೆಯುವ ಉಪ ಚುನಾವಣೆಗಳಲ್ಲಿ ಸಂಡೂರು ಸಿಗ್ಗಾಂವಿ ಚನ್ನಪಟ್ಟಣ ಈ ಉಪ ಚುನಾವಣೆಗಳಲ್ಲಿ ಒಳ ಮೀಸಲಾತಿಯ ಸಮುದಾಯದ ಜನರು ಸೇರಿಕೊಂಡು ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸ ಬೇಕಾಗುತ್ತದೆ.

ಈಗ ನಾವು ಯಾರಿಗೆ ಹೆದರಬೇಕಾಗಿಲ್ಲ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನಾವು ಹೋರಾಟಕ್ಕೆ ಮುನ್ನುಗ್ಗ ಬೇಕಾಗಿದೆ ಇಲ್ಲದಿದ್ದರೆ ನಮಗೆ ನಿರ್ಲಕ್ಷಿಸಿ ಅನ್ಯಾಯಕ್ಕೆ ಒಳ ಪಡಿಸುತ್ತಿರುವಂತ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಾಗಿದೇ ಈಗ ರಾಜ್ಯ ಕಾಂಗ್ರೆಸ್ ಸರ್ಕಾರವು ಸಚಿವ ಸಂಪುಟದಲ್ಲಿ ಚರ್ಚಿಸುವುದಾಗಿ ಹೇಳುವುದನ್ನು ಸರಿಯಲ್ಲ ಏಕೆಂದರೆ ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚಿಸಿಯೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು ಹಾಗೂ ಕಾಂಗ್ರೆಸ್ ಪಕ್ಷದ ಚುನಾವಣೆಯ ಪ್ರಣಾಳಿಕೆಯಲ್ಲಿಯೇ ಒಳ ಮೀಸಲಾತಿ ನೀಡುವುದಾಗಿ ಘೋಷಿಸಲಾಗಿತ್ತು. ಒಳ ಮೀಸಲಾತಿಯನ್ನು ಜಾರಿ ಗೊಳಿಸುವವರು ನಾವೇ ಎಂದು ಹೇಳಿದ್ದರು.

ಈ ಮಾತುಗಳಿಗೆ ನಂಬಿ ಒಳ ಮೀಸಲಾತಿಗೆ ಒಳಪಟ್ಟಂತ ಸಮುದಾಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿ ಗೆಲ್ಲಿಸಿ ಜನಾಧಿಕಾರ ನಮ್ಮಗಳ ಸಮುದಾಯಗಳು ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಲಿಕ್ಕೆ ನಾವೇ ಕಾರಣವಾಗಿದ್ದು ಪರಿಶಿಷ್ಟ ಜಾತಿಗಳು ಸಾಮಾಜಿಕವಾಗಿ ನ್ಯಾಯಮೂರ್ತಿಗಳ ನ್ಯಾಯ ಪೀಠವು ತೀರ್ಪು ನೀಡುವ ಮೂಲಕ ಒಟ್ಟು 565 ಪುಟಗಳ ಒಮ್ಮತದ ತೀರ್ಪು ನೀಡಿದೆ ಹೀಗಿದ್ದರೂ ಸಹ ಒಳ ಮೀಸಲಾತಿ ಜಾರಿ ಕುರಿತು ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದನ್ನು ಕೂಡಲೇ ಕೈಬಿಟ್ಟು ಆದಷ್ಟು ಬೇಗನೆ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಒಂದು ಮಹತ್ವದ ಒಳ ಮೀಸಲಾತಿಯನ್ನು ಜಾರಿ ಗೊಳಿಸಿ ಅಸ್ಪೃಶ್ಯತಾ ಸಮುದಾಯಗಳ ಜನರಿಗೆ ಅನುಕೂಲ ಮಾಡಿ ಕೊಡಬೇಕೆಂದು ಈ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ತಮಗೆ ಮನವಿ ಪತ್ರವನ್ನು ಸಲ್ಲಿಸಲಾಗುತ್ತದೆ ಎಂದು ಕೆ ಶಂಕರ್ ನಂದಿಹಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು ನಾಗರಾಜ್ ಸಂಗನಕಲ್ ದಲಿತ ಮುಖಂಡರು ಮಲ್ಲಿಕಾರ್ಜುನ ಬಿ ಗೋನಾಳ ದಲಿತ ಮುಖಂಡರು ಪತ್ರಿಕಾ ಮಾಧ್ಯಮಕ್ಕೆ ತಿಳಿಸಿದ್ದಾರೆ.