ವಿದ್ಯಾರ್ಥಿಗಳ ಪ್ರಶ್ನೆಗೆ ಕಾಲೇಜು ಆಡಳಿತ ಮಂಡಳಿ – ಕಕ್ಕಾಬಿಕ್ಕಿ.
ಮಾನ್ವಿ ಅ.19

ಕಲ್ಮಠ ಆಯುರ್ವೇದಿಕ್ ಮೆಡಿಕಲ್ ಕಾಲೇಜಲ್ಲಿ ಬಡ್ಡಿ ರೂಪದಲ್ಲಿ ಹಣ ಪಡೆಯಲಾಗುತ್ತದೆ ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಪಂಡೀತರಾಧ್ಯ ಸ್ವಾಮೀಜಿ ಪ್ರತಿಕ್ರಿಯಿಸಿ ಕೂಡಲೇ ಉಮಾ ಶಂಕರನನ್ನು ಕೆಲಸದಿಂದ ತೆಗೆದು ಹಾಕಲಾಗುವುದು ಎಂದರು.

ರಾಯಚೂರು ಜಿಲ್ಲೆಯ ಮಾನ್ವಿ ಕಲ್ಮಠದ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಸೌಲಭ್ಯಗಳಿಲ್ಲ ತಡವಾಗಿ ಪ್ರವೇಶ ಶುಲ್ಕ ಕಟ್ಟಿದರೆ ಬಡ್ಡಿ ರೂಪದಲ್ಲಿ ಹಣ ಕೀಳುತ್ತಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದರೆ ಕಾಲೇಜು ಆಡಳಿತ ಮಂಡಳಿಯ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು.

ಪೋಷಕರು ಹಾಗು ವಿದ್ಯಾರ್ಥಿಗಳು ಉಮಾ ಶಂಕರನನ್ನು ತಡೆದು ಹಿಗ್ಗಾಮುಗ್ಗ ಉಗಿದು ಬಡ ವಿದ್ಯಾರ್ಥಿಗಳ ಹೆಸರಲ್ಲಿ ಲೂಟಿ ಮಾಡುತ್ತೀಯಾ ನಿಮ್ಮ ಮಕ್ಕಳಿಗೆ ಅನ್ಯಾಯವಾದರೆ ಸುಮ್ಮನಿರುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಕಲ್ಮಠ ಸ್ವಾಮೀಜಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರ ನೀಡದೆ ಎದ್ದು ನಡೆದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ