ಟಿ. ಓಂಕಾರಪ್ಪ ರವರಿಗೆ ಪಿ.ಎಚ್.ಡಿ ಗ್ರಾಮಸ್ಥರಿಂದ – ಗೌರವ ಅಭಿನಂದನೆಗಳು.
ಹುಲಿಕೆರೆ ಅ.24

ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹುಲಿಕೆರೆ ಗ್ರಾಮದ ಟಿ ಓಂಕಾರಪ್ಪ ಅವರಿಗೆ ಹಂಪಿ ವಿಶ್ವ ವಿದ್ಯಾಲಯ ಪಿ.ಎಚ್.ಡಿ ಪದವಿ ಘೋಷಿಸಿದೆ. ವಿಶ್ವವಿದ್ಯಾಲಯ ಚರಿತ್ರೆ ವಿಭಾಗದ ಡಾ, ಬಿ.ಪಿ ಕುಮಾರ್ ಮಾರ್ಗದರ್ಶನದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಒಳಗೊಂಡಂತೆ “ತುಂಗಭದ್ರಾ ಅಣೆಕಟ್ಟು ಸಮಾಜೋ ಆರ್ಥಿಕ ಅಧ್ಯಯನ” ಶೀರ್ಷಿಕೆ ಅಡಿಯಲ್ಲಿ ಮಹಾ ಪ್ರಬಂಧ ಮಂಡಿಸಿದ್ದಾರೆ. ಅದಕ್ಕಾಗಿ ಹುಲಿಕೆರೆ ಗ್ರಾಮದ ಗ್ರಾಮಸ್ಥರು ಗುರು ಹಿರಿಯರು ಅವರನ್ನು ಹೃದಯ ಪೂರ್ವಕವಾಗಿ ಗೌರವಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ