ಕೆರೆ ಕುಂಟೆ ಹೊಡೆದು ಗ್ರಾಮಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ 24-ಕಳೆದರು ಜನರನ್ನು ಕ್ಯಾರೇ ಎನ್ನದ ಅಧಿಕಾರಿಗಳ ಭಂಡತನದ ದಿವ್ಯ ನಿರ್ಲಕ್ಷ್ಯಕ್ಕೆ – ಜನರ ಆಕ್ರೋಶ.
ಅಪ್ಪೇನಳ್ಳಿ ಅ.24

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಅಪ್ಪೇನಳ್ಳಿ ಗ್ರಾಮ ಪಂಚಾಯಿತಿಯ ಅಪ್ಪೆನಹಳ್ಳಿ ಹಾಗೂ ಮಹದೇವಪುರ ಗ್ರಾಮಗಳಲ್ಲಿ ಮಂಗಳವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಗ್ರಾಮಗಳ ಪಕ್ಕದಲ್ಲಿ ಇರುವಂತಹ ಗುಡ್ಡದ ನೀರು ಇಳಿಜಾರಿನ ಪ್ರದೇಶದ ಪಕ್ಕದಲ್ಲಿ ಚಿಕ್ಕ ಕೆರೆದಂತಿರುವ ನೀರಿನ ಹೊಂಡವು ಅಪಾರ ನೀರಿನಿಂದ ತುಂಬಿ ಹೊಡೆದ ಪರಿಣಾಮವಾಗಿ ಪಕ್ಕದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಗ್ರಾಮದ ತುಂಬೆಲ್ಲಾ ಮನೆಗಳಿಗೆ ನೀರು ತುಂಬಿದ ಪರಿಣಾಮ ಮಕ್ಕಳು, ಮಹಿಳೆಯರು, ಗರ್ಭಿಣಿ ಸ್ತ್ರೀಯರು, ವೃದ್ಧರು, ಹೀಗೆ ಅನೇಕ ಜನರು ಆತಂಕ ಗೊಂಡಿದ್ದಾರೆ. ಕೆರೆಗುಂಟೆ ಹೊಡೆದು 24 ಗಂಟೆಗಳು ಸಮಯ ಕಳೆದರು ಯಾವ ಅಧಿಕಾರಗಳು ಗ್ರಾಮಕ್ಕೆ ಬಾರದೆ ನೀರು ನುಗ್ಗಿದ ಅನೇಕ ಮನೆಗಳಲ್ಲಿ ಗುಡಿಸಲುಗಳಲ್ಲಿ ಅಪಾರ ಮಟ್ಟದ ನೀರು ತುಂಬಿರುವುದರಿಂದ ಜನರು ತಮ್ಮ ತಮ್ಮ ಮನೆಗಳಲ್ಲಿ ಜೀವನ ಮಾಡಲಿಕ್ಕೆ ಬೇಕಾದಂತಹ ಆಹಾರ ಪದಾರ್ಥಗಳು ಹಾಗೂ ಕಾಳು, ಕಡಿ, ಬಟ್ಟೆ, ಟಿವಿ ಇನ್ನಿತರ ಅನೇಕ ವಸ್ತುಗಳು, ಮಿಷನರಿ ಯಂತಹ ಸಾಮಾನುಗಳು ನೀರು ನುಗ್ಗಿ ಪರಿಣಾಮ ಹಾನಿ ಹಾಗೂ ನಷ್ಟಕ್ಕೆ ಒಳಗಾಗಿದ್ದಾರೆ, ಈ ಗ್ರಾಮದ ಜನರಿಗೆ ಕೂಡಲು ಜಾಗವಿಲ್ಲದೆ ಮಲಗಲು ಸ್ಥಳವಿಲ್ಲದೆ ಪ್ರಕೃತಿಯ ವಿಕೋಪದಿಂದ ಬೀದಿ ಪಾಲಾಗಿರುವಂತಹ ಜನರ ಸ್ಥಿತಿ ಬಹಳ ಚಿಂತಾಜನಕವಾಗಿದೆ. ಈ ವಿಷಯ ತಾಲೂಕು ಮಟ್ಟದ ಎಲ್ಲಾ ಅಧಿಕಾರಿ ವರ್ಗದವರಿಗೂ ತಿಳಿದರೂ ಸಹ ಜನರ ಗೋಳನ್ನು ಕೇಳದೆ ಸಂಕಷ್ಟಗಳನ್ನು ಆಲಿಸದೆ ಇರುವಂತಹ ಅಧಿಕಾರಿಗಳ ಭಂಡತನದ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎನ್ನುವುದನ್ನು ಜನರು ಅಧಿಕಾರಿ ವರ್ಗಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ನಮ್ಮ ಸುದ್ದಿ ವಾಹಿನಿಯು ಅಪ್ಪೇನಳ್ಳಿ ಹಾಗೂ ಮಹದೇವಪುರ ಗ್ರಾಮಕ್ಕೆ ಜನರ ಹತ್ತಿರ ಹೋಗಿ ಕೇಳಿದರೆ ಜನರು ಅಧಿಕಾರಿಗಳ ಹೇಳುತ್ತಿರುವುದು ಕೇಳಿದಾಗ ನಾವು ಕೆಲವು ಅಧಿಕಾರಿಗಳಿಗೆ ಫೋನ್ ಕರೆ ಮೂಲಕ ಮಾತನಾಡಿದಾಗ ಬುಧವಾರ ಸಂಜೆ 4 ಘಂಟೆ ಸಮಯಕ್ಕೆ ಗ್ರಾಮಕ್ಕೆ ತಾಲೂಕು ತಹಶೀಲ್ದಾರ್ ಹಾಗೂ ಕಾರ್ಯನಿರ್ವಕ ಅಧಿಕಾರಿಗಳು ವೀಕ್ಷಣೆಗೆ ಧಾವಿಸಿದ್ದಾರೆ, ಎಂಬುದು ತಿಳಿದು ಬಂದಿದೆ. ಜನರ ಸಂಕಷ್ಟಗಳು ಜನರು ಹೇಳಿರುವ ದೃಶ್ಯಗಳ ಮೂಲಕ ವೀಕ್ಷಕರು ನೋಡಬಹುದು ಅದು ಏನೇ ಇರಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವಂತಹ ಈ ಗ್ರಾಮಗಳಿಗೆ ಜನರಿಗೆ ರಕ್ಷಣೆ ಹಾಗೂ ಸುರಕ್ಷತೆಯನ್ನು ಕಾಪಾಡುವ ಹೊಣೆ ಸರ್ಕಾರದ್ದು ಸರ್ಕಾರದ ಅಧಿಕಾರಿಗಳು ಬೇಗನೆ ಈ ಗ್ರಾಮಗಳ ಜನಗಳಿಗೆ ಮಲಗಲಿಕ್ಕೆ ಸ್ಥಳಾವಕಾಶ ಹಾಗೆ ಹೊಟ್ಟೆಗೆ ಗಂಜಿ ಕೇಂದ್ರವಾದರೂ ತೆರೆದು ಮನುಷ್ಯನಿಗೆ ಬೇಕಾದಂತ ಪ್ರಥಮ ಹಂತದ ಸೌಕರ್ಯಗಳನ್ನಾದರೂ ಒದಗಿಸಲಿ ಎಂಬುವುದು ನಮ್ಮ ಸಾಮಾಜಿಕ ಕಳಕಳಿಯ ಕಾಳಜಿಯಾಗಿದೆ. ಈ ಗ್ರಾಮಗಳಲ್ಲಿ ಅಪಾರ ಜನರಿಗೆ ಊಟಕ್ಕೂ ತೊಂದರೆ ಆಗಿರುವ ಪರಿಸ್ಥಿತಿಯನ್ನು ಕಾಣಬಹುದು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳು ಹಾಗೂ ತಾಲೂಕ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಶಾಸಕರು ಇವರ ಸಂಕಷ್ಟಕ್ಕೆ ಸ್ಪಂದಿಸ ಬೇಕಾಗಿದ್ದು ಅತೀ ಜರೂರು ಆಗಬೇಕಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ರಾಘವೇಂದ್ರ.ಬಿ. ಸಾಲುಮನೆ.ಕೂಡ್ಲಿಗಿ.ವಿಜಯನಗರ