ಪಟ್ಟಣ ಪಂಚಾಯಿತಿ ಯಿಂದ “ನಮ್ಮ ನಡೆ ವಾರ್ಡಿನ ಕಡೆ”.
ಮರಿಯಮ್ಮನಹಳ್ಳಿ ಅ. 24

ಪಟ್ಟಣ ಪಂಚಾಯತಿಯ ಅಧ್ಯಕ್ಷರು, ಮುಖ್ಯಾಧಿಕಾರಿಗಳು, ಸಿಬ್ಬಂದಿಗಳು, ಸ್ಥಾಯಿ ಸಮಿತಿ ಅಧ್ಯಕ್ಷರು, ವಾರ್ಡಿನ ಸದಸ್ಯರು ಸೇರಿ ಪಟ್ಟಣದಲ್ಲಿ ಇಂದು ವಿನೂತನವಾಗಿ ಅಭಿವೃದ್ಧಿಗಾಗಿ “ನಮ್ಮ ನಡೆ ವಾರ್ಡಿನ ವಾರ್ಡಿನ ಕಡೆ” ಎನ್ನುವ ಘೋಷ ವಾಕ್ಯದೊಂದಿಗೆ ಹೊಸ ಪ್ರಯೋಗವನ್ನು ಪ್ರಾರಂಭಿಸಿದ್ದಾರೆ.ಅಭಿವೃದ್ಧಿಗಾಗಿ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಯಿಂದ ವಿನೂತನ ಪ್ರಯೋಗ ಪ್ರಾರಂಭವಾಗಿದೆ. ಮೊದಲನೇ ದಿನ ದಂದು 1, 2, ಮತ್ತು 15 ನೇ ವಾರ್ಡ್ ಗಳಿಗೆ ಭೇಟಿ ನೀಡಿ ರಸ್ತೆ, ಚರಂಡಿ, ಕುಡಿಯುವ ನೀರಿನ ಸಂಪರ್ಕ ವೀಕ್ಷಿಸಿದರು, ರಸ್ತೆ, ಚರಂಡಿಗಳು ಒತ್ತುವರಿ ಯಾಗಿದ್ದನ್ನು ಮತ್ತು ಸ್ವಚ್ಛತೆ ಇಲ್ಲದಿರುವುದನ್ನು, ನಳ ಹಾಕಿಕೊಂಡ ತೆರೆದ ಕೊಳವೆ ಬಾವಿಯಿಗಳ ಗುಂಡಿಯಲ್ಲಿ ನಿಂತ ಕೊಳಕು ನೀರನ್ನು ಕಂಡು ಅಧ್ಯಕ್ಷರಾದ ಹುಸೇನ್ ಭಾಷ ಅವರು ಕೆಂಡಮಂಡಲವಾಗಿ ಬೇಸರ ವ್ಯಕ್ತಪಡಿಸಿ, ನಮ್ಮ ಮನೆಗಳ ಮುಂದೆ ನಾವೇ ಸ್ವಚ್ಛತೆಯನ್ನು ಕಾಪಾಡಿ ಕೊಳ್ಳಬೇಕು. ಈ ರೀತಿಯ ಸ್ವಚ್ಛತೆ ಇಲ್ಲದಿದ್ದರೆ, ಆರೋಗ್ಯ ಕಾಪಾಡಿ ಕೊಳ್ಳಲು ಹೇಗೆ ಸಾಧ್ಯ, ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ನಮ್ಮ ಸುತ್ತಮುತ್ತ ಪರಿಸರವನ್ನು ನಾವೇ ಸ್ವಚ್ಛವಾಗಿಟ್ಟು ಕೊಳ್ಳಬೇಕು ಮತ್ತು ಖಾಲಿ ನಿವೇಶನಗಳಲ್ಲಿ ಗಿಡ ಗಂಟೆಗಳು ಬೆಳೆದಿದ್ದನ್ನು ಗಮನಿಸಿ ಅವುಗಳನ್ನು ಕತ್ತರಿಸಿ ಸ್ವಚ್ಛವಾಗಿಟ್ಟು ಕೊಳ್ಳಲು ಮಾಲೀಕರಿಗೆ ತಿಳಿಸಿದರು.ಅಧ್ಯಕ್ಷ ಹುಸೇನ್ ಭಾಷ ಮಾತನಾಡಿ 1, 2 ಮತ್ತು 15 ವಾರ್ಡಗಳು ಅಭಿವೃದ್ಧಿಯಿಂದ ಹಿಂದಿವೆ ಹಾಗಾಗಿ ಈ ವಾರ್ಡ್ ಗಳಿಗೆ ಮೊದಲು ಭೇಟಿ ನೀಡುತ್ತಿದ್ದು . ಫಾರಂ 3 ಕೊಡಲು ತುಂಬಾ ಕಷ್ಟವಾಗುತ್ತಿತ್ತು ನೈಜತೆಯನ್ನು ಅರಿತು ನೀಡಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಅಮೃತ 2 ಯೋಜನೆ ಕುಡಿಯುವ ನೀರು ಪೈಪ್ ಹಾಕಲು ಸ್ಥಳಾವಕಾಶ ವಿಲ್ಲದೆ ರಸ್ತೆ ಚರಂಡಿಗಳನ್ನು ಒತ್ತುವರಿ ಮಾಡಿದ್ದಾರೆ. ನಂತರ ಯು.ಜಿ.ಡಿ ಸಹ ಬರುತ್ತದೆ ಆಗ ಇನ್ನೂ ಸಮಸ್ಯೆ ಉದ್ಭವವಾಗುತ್ತದೆ. ಹಾಗಾಗಿ ಸೋಮವಾರ ಪೈಪ್ ಲೈನ್ ಕಾಮಗಾರಿ ಪ್ರಾರಂಭಿಸಲಾಗುವುದು. ಅಂತಹ ಸಂದರ್ಭದಲ್ಲಿ ಅಡ್ಡಿಯಾದಂತಹ ಕಟ್ಟಡಗಳನ್ನು ತೆರವು ಗೊಳಿಸಲು ಸೂಚಿಸಲಾಗಿದೆ. ಪ್ರೆಶರ್ ಫಿಲ್ಟರ್ ನಾವು ಮಾಡಿಸಿದ್ದೇವೆ. ಎಂದು ಯಾರೋ ಹೇಳುತ್ತಿದ್ದಾರೆ. ಅದನ್ನು ಯಾರು ಮಾಡಿಸಿಲ್ಲ ಸ್ಥಳೀಯ ಪಂಚಾಯಿತಿಯಿಂದ 2019 ರಿಂದ ಇಲ್ಲಿಯವರೆಗೂ 51.60 ಲಕ್ಷದ ಉಳಿತಾಯದ ಹಣ ನಮ್ಮಲ್ಲಿದೆ. ಪ್ರೆಶರ್ ಫಿಲ್ಟರ್ ಗಾಗಿ 70 ಲಕ್ಷ ಬೇಕಾಗಿದೆ. ಹೆಚ್ಚಿನ ಹಣಕ್ಕಾಗಿ, ಜಿಲ್ಲಾಧಿಕಾರಿಗಳು ಮತ್ತು ಯೋಜನಾ ನಿರ್ದೇಶಕರ ಗಮನಕ್ಕೆ ತಂದಿದ್ದು ಹೆಚ್ಚುವರಾಗಿ 20 ಲಕ್ಷವನ್ನು ಒದಗಿಸಿ ಕೊಡುತ್ತೇವೆ ಕೂಡಲೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿ ಎಂದು ಹೇಳಿದ್ದಾರೆ. ಹಾಗಾಗಿ ಒಂದು ತಿಂಗಳಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.ಮುಖ್ಯಾಧಿಕಾರಿ ಖಾಜಾ ಮೈನುದ್ದೀನ್ ಮಾತನಾಡಿ ನಾವು ಕಚೇರಿಯಲ್ಲಿ ಕುಳಿತು ಕೊಂಡು ಪರಿ ಪೂರ್ಣವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ, ಪ್ರಮಾಣಿಸಿದರು ಪ್ರತ್ಯಕ್ಷವಾಗಿ ನೋಡು ಎನ್ನುವ ಗಾದೆ ಹಾಗೆ ನಾವು ಕಚೇರಿಯನ್ನು ಬಿಟ್ಟು ಸ್ಥಳಕ್ಕೆ ಬಂದು ಪರಿಶೀಲಿಸಿ ನೋಡಿದಾಗ ಸಮಸ್ಯೆಗಳ ಅರಿವಾಗುತ್ತದೆ. ಹಾಗಾಗಿ ಅಧ್ಯಕ್ಷರು ಸದಸ್ಯರು ಮತ್ತು ನಮ್ಮ ಸಿಬ್ಬಂದಿ ಗಳೊಂದಿಗೆ ವಾರ್ಡ್ ವೀಕ್ಷಣೆ ಮಾಡಿ, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲು ಮತ್ತು ಸಮಸ್ಯೆಗಳನ್ನು ತಕ್ಷಣದಲ್ಲೇ ಬಗೆಹರಿಸುವುದಕ್ಕೆ ಪ್ರಯತ್ನ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ನಮ್ಮ “ನಡೆ ವಾರ್ಡ್ ಕಡೆ” ಎನ್ನುವ ಘೋಷ ವಾಕ್ಯದೊಂದಿಗೆ ವಾರ್ಡ್ ವೀಕ್ಷಣೆ ಮಾಡುತ್ತಿದ್ದೇವೆ ಈ ಸಂದರ್ಭದಲ್ಲಿ ಕಂಡು ಬಂದಿದ್ದು ಪ್ರಮುಖವಾಗಿ ಮಹಿಳೆಯರಿಗೆ ಶೌಚಾಲಯದ ಕೊರತೆ ಇದೆ. ಶೌಚಾಲಯ ನಿರ್ಮಾಣಕ್ಕಾಗಿ 15 ಲಕ್ಷ ರುಪಾಯಿಗಳ ಟೆಂಡರ್ ಆಗಿದೆ ಅದನ್ನು ಕೂಡಲೇ ಕಾಮಗಾರಿ ಪ್ರಾರಂಭಿಸಲು ಸೂಚಿಸುತ್ತೇವೆ. ಸ್ವಚ್ಛ ಭಾರತ್ ಮಿಷನ್ ನಲ್ಲಿ ಶೌಚಾಲಯ ವ್ಯವಸ್ಥೆ ಮಾಡಲಾಗುವುದು. ಮತ್ತು ಫಾರಂ- 3 ಕೊಡುವ ವಿಚಾರದಲ್ಲಿ ಸ್ಥಳವನ್ನು ವೀಕ್ಷಿಸಲಾಗಿ ಸಮಸ್ಯೆಗಳನ್ನು ಗಮನಿಸಲಾಗಿದೆ. ಸರಿಯಾದ ದಾಖಲೆಗಳಿದ್ದರೆ ದಾಖಲೆಗಳ ಪ್ರಕಾರ ನಿಯಮಾನು ಸಾರವಾಗಿ ನೀಡಲು ಮೇಲಧಿಕಾರಿಗಳ ಗಮನಕ್ಕೆ ತಂದು ಫಾರಂ 3 ಕೊಡಲಾಗುವುದು. ತೆರವು:- ಸೋಮವಾರ ಪೈಪ್ ಲೈನ್ ಕಾಮಗಾರಿ ಪ್ರಾರಂಭಿಸಲಾಗುವುದು. ರಸ್ತೆ ಮತ್ತು ಚರಂಡಿಗಳು ಬಹುತೇಕವಾಗಿ ಒತ್ತುವರಿಯಾಗಿದ್ದು. ಅಮೃತ 2 ಯೋಜನೆಯಲ್ಲಿ ಮನೆ ಮನೆಗೂ ಕುಡಿಯುವ ನೀರಿನ ಪೈಪ್ ಮತ್ತು ನಳ ಹಾಕುವುದಕ್ಕೆ ತೊಂದರೆ ಯಾಗುತ್ತದೆ. ಹಾಗಾಗಿ ಅಭಿವೃದ್ಧಿಯ ದೃಷ್ಟಿಯಿಂದ ಅನಧಿಕೃತವಾಗಿ ಒತ್ತುವರಿಯಾಗಿರುವ ಕಟ್ಟಡಗಳನ್ನು ಅನಿವಾರ್ಯವಾಗಿ ತೆರವು ಗೊಳಿಸಲಾಗುವುದು ಎಂದರು.ಮನವಿ:- ಸಮತಾ ಸೈನಿಕ ದಳ ಸಂಘಟನೆಯ ಕಾರ್ಯದರ್ಶಿಯಾದ ಎಲ್. ಸ್ವಾಮಿ ಇವರು ಅಧ್ಯಕ್ಷರ ಪರವಾಗಿ 15 ವಾರ್ಡಿನ 9 ನೇ. ಅಂಗನವಾಡಿ ಕೇಂದ್ರಕ್ಕೆ ಪಟ್ಟಣ ಪಂಚಾಯಿತಿ ಯಿಂದ ನಿವೇಶನ ಗುರುತಿಸಲು ಮನವಿ ಕೊಡಲಾಯಿತು. ಮತ್ತು ಎಂ. ದುರುಗಪ್ಪ ನೇತೃತ್ವದಲ್ಲಿ ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯ ನಿರ್ಮಿಸಲು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಎಲ್ ವಸಂತ. ಮರಡಿ ಸುರೇಶ, ಎಲ್. ಪರುಶುರಾಮ, ಮುಖಂಡರಾದ ಹುಲಿಗಿ ಬಾಯಿ ರುದ್ರ ನಾಯಕ್, ಜೊತಿ ಸುರೇಶ, ಮಂಜುನಾಥ, ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಎಲ್. ಮಂಜುನಾಥ, ಊರಿನ ಮುಖಂಡರಾದ ಎಲ್. ನಾಗರಾಜ, ಬಿ. ಆನಂದಪ್ಪ, ಎಂ. ದುರುಗಪ್ಪ, ಸರದಾರ, ಸ್ವಾಮಿ ಇತರರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ