ರೈತರಿಗೆ ನಕಲಿ ಗೊಬ್ಬರ ಮಾರಾಟ – ರೈತರಿಂದ ಅನಿರ್ದಿಷ್ಟ ಸತ್ಯಾಗ್ರಹ.
ಮಾನ್ವಿ ಅ.24

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಾಲಾಪುರ ಹೋಬಳಿಯ ಮಲ್ಲದಗುಡ್ಡ ಕ್ಯಾಂಪ್ ನಲ್ಲಿರುವ ಶ್ರೀನಿವಾಸ ಆಗ್ರೋ ಟ್ರೇಡರ್ಸ್ ಮಾಲಕ ಬಿ.ವಾಸು ನಕಲಿ ಗೊಬ್ಬರ ನೀಡಿದ್ದು, ಕೃಷಿ ಅಧಿಕಾರಿ ಗುರುನಾಥ ಅಂಗಡಿ ಪರವಾನಗಿಯನ್ನು ಕಪ್ಪು ಪಟ್ಟಿಗೆ ಸೇರಿಸ ಬೇಕೆಂದು ಆಗ್ರಹಿಸಿ ರೈತ ಸಂಘ ಹಾಗು ಕರ್ನಾಟಕ ರಾಜ್ಯ ಬೇಡರ ಸಮಿತಿ ಪದಾಧಿಕಾರಿಗಳು ಮಾನ್ವಿಯಲ್ಲಿ ಪ್ರತಿಭಟನೆ ನಡೆಸಿದರು.

ಅಮಾಯಕ ರೈತರಿಗೆ ಮೋಸ ಮಾಡಿದರು ಸಹ ನಮ್ಮನ್ನು ಯಾರು ಕೇಳುತ್ತಾರೆಂದು ಬಿ.ವಾಸು ಎಂಬ ವ್ಯಕ್ತಿ ನಕಲಿ ಗೊಬ್ಬರ ನೀಡಿರುವ ಅಂಶ ಸತ್ಯವಾಗಿದ್ದರು ಕೃಷಿ ಅಧಿಕಾರಿ ಗುರುನಾಥ ಮಾಲಕನ ಜೊತೆ ಶಾಮೀಲಾಗಿದ್ದಾರೆಂದು ರೈತರು ಕಿಡಿಕಾರಿದರು.

ಬಡ ರೈತರ ಬೆನ್ನೆಲುಬನ್ನು ಬಿ.ವಾಸು ಎಂಬಾತ ನಕಲಿ ಗೊಬ್ಬರ ನೀಡಿ ರೈತರನ್ನು ಸಾಯಿಸುವ ಕೆಲಸ ಮಾಡುತ್ತಿದ್ದರು ಸರಕಾರದ ಅಧಿಕಾರಿಗಳು ಬಡ ರೈತರ ಗೋಣು ಮುಣಿಯುತ್ತಿದ್ದಾರೆ, ನಮಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ