ಫೈನಾನ್ಸ್ ಕಂಪನಿಗಳ ಹಾಗೂ ಧರ್ಮಸ್ಥಳ ಸಂಘದಿಂದ ಸಾಲ ಪಡೆದ ರೈತ – ಅವರ ಕಿರುಕುಳಕ್ಕೆ ಮನನೊಂದು ತೊಗರಿ ಎಣ್ಣೆ ಕುಡಿದು ಆತ್ಮಹತ್ಯೆ.
ಸಲಾದಳ್ಳಿ ಫೆ.07

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಸಲಾದಳ್ಳಿ ಗ್ರಾಮದ ಬಸನಗೌಡ ಹನುಮಂತರಾಯಗೌಡ ಬಿರಾದಾರ್ ವಯಸ್ಸು 52. ಫೈನಾನ್ಸ್ ಕಂಪನಿ ಅವರ ಮತ್ತು ಧರ್ಮಸ್ಥಳ ಸಂಘದ ವರಿಂದ ಈ ಸಂಘದಲ್ಲಿ ಸಾಲ ಮಾಡಿ ಅನೇಕ ಫೈನಾನ್ಸ್ ಕಂಪನಿಯಲ್ಲಿ ಸಾಲವನ್ನು ಮಾಡಿದ ಸಾಲ ತುಂಬುವುದು ಆಗದ ಕಾರಣ ಇವರು ದಿನ ನಿತ್ಯ ಬಂದು ಬಹಳ ಮಾನಸಿಕ ಕಿರುಕುಳ ಕೊಟ್ಟಿದ್ದಕ್ಕೆ ಬಾಧೆ ತಾಳಲಾರದೆ ತೊಗರಿ ಎಣ್ಣೆಯನ್ನು ಕುಡಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ ಇವರ ಧರ್ಮಪತ್ನಿಯಾದ ಮಹಾದೇವಿ ಬಸನಗೌಡ ಬಿರಾದಾರ್ ನನ್ನ ಗಂಡನ ಸಾವಿಗೆ ಫೈನಾನ್ಸ್ ಕಂಪನಿಯವರು ಮತ್ತು ಧರ್ಮಸ್ಥಳ ಸಂಘದ ಇವರೆಲ್ಲರೂ ದಿನ ನಿತ್ಯ ಬಂದು ಅವರಿಗೆ ಕಿರಿಕಿರಿ ಮಾಡಿ ಸಾಲ ತುಂಬದಿದ್ದರೆ ನಿನ್ನ ಮನೆ ಬೀಗ ಹಾಕುತ್ತೇವೆ ನಿನ್ನ ಮನೆ ಹರಾಜು ಹಾಕುತ್ತೇವೆ ಮತ್ತು ನಿನ್ನ ಮಾನವನ್ನು ಹರಾಜು ಹಾಕುತ್ತೇವೆ ಎಂದು ಬೆದರಿಕೆ ಹಾಕಿದರು ಎಂದು ತಿಳಿಸಿದರು.

ಇದೇ ವೇಳೆ ಊರಿನ ಹಿರಿಯರಾದಂತಹ ಹಳೆಪ್ ಗೌಡ್ರು ಫೈನಾನ್ಸ್ ಕಂಪನಿಯವರು ಮತ್ತು ಧರ್ಮಸ್ಥಳ ಸಂಘದವರು ದಿನ ನಿತ್ಯ ಅವರಿಗೆ ಮಾನಸಿಕ ಕಿರುಕುಳ ಕೊಟ್ಟಿದ್ದಾರೆ ಆದ್ದರಿಂದ ಸರಕಾರ ದವರು ತಕ್ಷಣ ಇವರ ಮೇಲೆ ಕ್ರಮ ಕೈಗೊಳ್ಳ ಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು. ಮೈಕ್ರೊ ಫೈನಾನ್ಸ್ ಕಂಪನಿಯವರ ಕಿರುಕುಳ ತಾಳಲಾರದೆ ರೈತ ತೊಗರಿ ಬೆಳೆಗೆ ಹೊಡೆಯುವ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲ್ಲೂಕಿನ ಸಲಾದಹಳ್ಳಿ ಗ್ರಾಮದ ಬಸನಗೌಡ ಹಣಮಂತ್ರಾಯಗೌಡ ಬಿರಾದಾರ (52) ತೊಗರಿ ಬೆಳೆಗೆ ಹೊಡೆಯುವ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ಸುಮಾರು 8 ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದ. ಸಾಲ ಪಾವತಿ ಮಾಡುವಂತೆ ಫೈನಾನ್ಸ್ ಸಿಬ್ಬಂದಿಯವರ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತರ ಪತ್ನಿ ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 8 ಮೈಕ್ರೋ ಫೈನಾನ್ಸ್‌ಗಳಲ್ಲಿ ಲಕ್ಷ-ಲಕ್ಷ ಸಾಲ, ರೈತ ಬಸನಗೌಡ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ 3.5 ಲಕ್ಷ ರೂಪಾಯಿ ಸಾಲ ಪಡೆದು ಸುಮಾರು 4.2 ಎಕರೆ ಜಮೀನಿನಲ್ಲಿ ಜಿ.ಆರ್.ಜಿ ತೋಗರಿ ಬೆಳೆದಿದ್ದ. ಬೆಳೆ ಕೈ ಕೊಟ್ಟ ಕಾರಣ ಮನನೊಂದಿದ್ದು. ಉಪ ಜೀವನಕ್ಕೆ ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಮಾಡಿ ಸಾಲ ತೀರಿಸಲು ಕೆಂಭಾವಿಯ ವಿವಿಧ ಕಂಪನಿಗಳಲ್ಲಿ ಅಂದರೆ, ಕೆಂಭಾವಿಯ ಮೈಕ್ರೋ ಫೈನಾನ್ಸ್ ನಲ್ಲಿ 1 ಲಕ್ಷ, ಎಲ್.ಆಂಡ್.ಟಿ ನಲ್ಲಿ 1.10 ಲಕ್ಷ, ನವಚೇತನ ನಲ್ಲಿ 1 ಲಕ್ಷ ಈ.ಎಸ್.ಎಫ್.ಎಸ್ ನಲ್ಲಿ 75 ಸಾವಿರ, ಚೇತನ್ಯ ನಲ್ಲಿ 1 ಲಕ್ಷ ಸುಗ್ಮಯ್ಯಾ ನಲ್ಲಿ 50 ಸಾವಿರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ನಲ್ಲಿ 1 ಲಕ್ಷ, ಆರ್.ಬಿ.ಎಲ್. ತಾಳಿಕೋಟಿನಲ್ಲಿ 1 ಲಕ್ಷ ರೂಪಾಯಿ ಹೀಗೆ ಒಟ್ಟು-7.35 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ