ರಂಗಯ್ಶನ ದುರ್ಗ ಜಲಾಶಯಕ್ಕೆ ಕ್ರಮಬದ್ಧವಾಗಿ – ಬಾಗಿನ ಅರ್ಪಿಸಿದ ಶಾಸಕರು.

ಬೊಮ್ಮಲಿಂಗನ ಹಳ್ಳಿ ಅ.30

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಹಾನಗಲ್ ಗ್ರಾಮ ಪಂಚಾಯತಿ ಸೇರಿದ ಬೊಮ್ಮಲಿಂಗನ ಹಳ್ಳಿ ಹತ್ತಿರ ರಂಗಯ್ಯನ ದುರ್ಗ ಜಲಾಶಯವಿದ್ದು ಈ ಜಲಾಶಯವು ತುಂಬಿ ಭರ್ತಿಯಾಗಿದ್ದು ಇದಕ್ಕೆ ಮೊಳಕಾಲ್ಮೂರು ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಬಾಗಿನ ಅರ್ಪಿಸಿ ಸಭೆಯ ಮುಖಾಂತರ ಮಾತನಾಡಿದರು. ಬಾಗಿನ ಅರ್ಪಿಸಲು ಅದಕ್ಕೆ ಒಂದು ಟೈಮು ಇರುತ್ತೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಚಿತ್ರದುರ್ಗ ಅಸಿಸ್ಟೆಂಟ್ ಕಮಿಷನರ್ ಮತ್ತು ಸಣ್ಣ ನೀರಾವರಿ ಇಲಾಖೆ ಅಣ್ಣಪ್ಪ ಎಡಬ್ಲ್ಯೂ ತಹಸಿಲ್ದಾರ್ ಜಗದೀಶ್ ರಮೇಶ್ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಸಿದ್ದಯ್ಯನ ಕೋಟೆ ಬಸವಲಿಂಗ ಸ್ವಾಮಿಗಳು ಬಟ್ರಳ್ಳಿ ಅಯ್ಯಣ್ಣ ಮಾಜಿಪಟ್ಟಣ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಮೊಳಕಾಲ್ಮೂರ ಖಾದರ್ ಕಲೀಮುಲ್ಲಾ ಸುಭಾನ್ ಸಾಬ್ ಮಾರನಾಯಕ ಪಟೇಲ್ ಪಾಪನಾಯ್ಕ ಬೊಮ್ಮಲಿಂಗನಹಳ್ಳಿ ನಂಜಪ್ಪ ತಿಪ್ಪೇರುದ್ರಪ್ಪ ಬೊಮ್ಮಲಿಂಗನಹಳ್ಳಿ ರಾಯಪುರ ಸುತ್ತ ಮುತ್ತಲಿನ ಗ್ರಾಮದ ಗ್ರಾಮಸ್ಥರು ಮುಖಂಡರುಗಳು ಕಮೀಟಿ ಮುಖಂಡರು ಸೇರಿ ಕ್ರಮಬದ್ಧವಾಗಿ ಮಾಡಿದರೆ ಆ ಗಂಗಾಮಾತೆಗೆ ಬಾಗಿನ ಅರ್ಪಿಸಿದಂತಾಗುತ್ತದೆ ಎಂದು ಶಾಸಕರು ತಿಳಿಸಿದರು ಈ ರಂಗನದುರ್ಗ ಜಲಾಶಯವು ತಳವಾರಳ್ಳಿ ಚಿಕ್ಕೇರಳ್ಳಿ ಭಟ್ರಳ್ಳಿ ಅಮಕುಂದಿ ಅಶೋಕ್ ಸಿದ್ದಾಪುರ ದೇವ್ ಸಮುದ್ರ ಹಾನಗಲ್ ಈ ಗ್ರಾಮಗಳಿಗೆಲ್ಲ ರಂಗಯ್ಯನ ದುರ್ಗದ ಜಲಾಶಯವು ರೈತರಿಗೆ ಅನುಕೂಲವಾಗುತ್ತದೆ ಮತ್ತು ಕೆರೆಗಳಿಗೂ ಸಹ ನೀರು ತುಂಬಿಸಲು ಅನುಕೂಲ ಈ ರಂಗಯ್ಯನ ದುರ್ಗ ಜಲಾಶಯಕ್ಕೆ ತುಂಗಭದ್ರ ಡ್ಯಾಮಿನಿಂದ ನಾನು ಕೂಡ್ಲಿಗಿ ಶಾಸಕನಾಗಿದ್ದಾಗ ಕೂಡ್ಲಿಗಿ ಕ್ಷೇತ್ರಕ್ಕೆ 74 ಕೆರೆಗಳಿಗೆ ನೀರು ತುಂಬಿಸುವ ಸುಮಾರು 850 ಕೋಟಿ ಯೋಜನೆ ನಾನು ರೂಪಿಸಿದ್ದೇನೆ ಅದರಲ್ಲಿ ಈ ರಂಗಯ್ಯನದುರ್ಗ ಜಲಾಶಯಕ್ಕೂ ಸಹ ಪೈಪ್ ಲೈನ್ ಎನ್ ವೈ ಗೋಪಾಲಕೃಷ್ಣ ಶಾಸಕರು ಮಾಡಿಸಿರುತ್ತಾರೆ ಈ ಜಲಾಶಯವು ಎರಡು ಮೂರು ಜಿಲ್ಲೆಗೆ ಶಾಶ್ವತ ನೀರು ಒದಗಿಸಿಕೊಡುತ್ತದೆ ಮತ್ತು ನಾನು ಹಿಂದೆ ಶಾಸಕನಾಗಿದ್ದಾಗ ಈ ರಂಗಯ್ಯನ ದುರ್ಗ ಜಲಾಶಯ ಕೆರೆ ಏರಿ ಹಾಕಲಕ್ಕೆ ಅನುದಾನ ಮಂಜೂರು ಮಾಡಿಸಿ ಕಾಮಗಾರಿಗಳು ಕಾಲುವೆ ಬ್ರಿಡ್ಜ್ ರಸ್ತೆಗಳು ಮತ್ತು ಮೊಳಕಾಲ್ಮೂರು ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಸುಮಾರು ಹದಿಮೂರು ಕಿಲೋ ಮೀಟರ್ ಪೈಪ್ ಲೈನ್ ಮುಖಾಂತರ ನೀರನ್ನು ಹರಿಸಿ ಮೊಳಕಾಲ್ಮುರು ಪಟ್ಟಣದ ಹತ್ತಿರ ಈ ನೀರನ್ನು ಫಿಲ್ಟರ್ ಮಾಡಿ ಮೊಳಕಾಲ ಮೂರು ಪಟ್ಟಣದಾದ್ಯಂತ ಎಲ್ಲಾ ನಾಗರಿಕರಿಗೆ ಕುಡಿಯುವ ನೀರನ್ನು ಒದಗಿಸಿದಂತ ಶಾಸಕರು ಮತ್ತು ಆಗಿನ ಸರ್ಕಾರದ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಿಸಿ ಕೆಲಸಗಳು ಮಾಡಿಸಿದ್ದೆ ಮತ್ತು ಬೊಮ್ಮಲಿಂಗನ ಹಳ್ಳಿ ರೈತರಿಗೆ ಓಡಾಡಲು ಸೇತುವೆ ಇಲ್ಲದ ಕಾರಣ ಸೇತುವೆ ಮಾಡಿಸಿ ಕೊಡುತ್ತೇನೆ ಎಂದು ಶಾಸಕರು ಸಭೆಯಲ್ಲಿ ಮಾತನಾಡಿದರು ಈ ಜಲಾಶಯವು ಸುಮಾರು ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ ಈ ವರ್ಷ ತುಂಬಿ ಭರ್ತಿ ಆಗಿದ್ದು ರೈತರ ಮುಖದಲ್ಲಿ ಸಂತಸ ತಂದಿದೆ ಮತ್ತು ರೈತರು ಈ ವರ್ಷ ಬೇಸಿಗೆ ಟೈಮಲ್ಲಿ ಬತ್ತಗಳು ನಾಟಿ ಮಾಡಿಕೊಂಡು ಬೆಳೆಯಬಹುದು ನೀರು ಇರುತ್ತದೆ ವೇಸ್ಟ್ ಮಾಡ ಬದಲು ರೈತರಿಗೆ ಬತ್ತಕ್ಕೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬಹುದೆಂದು ರೈತರು ಅಂದುಕೊಳ್ಳುತ್ತಾರೆ ಇದನ್ನು ಮನಗೊಂಡು ಶಾಸಕರು ರೈತರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಈ ಸುತ್ತಮುತ್ತಲ ಗ್ರಾಮದ ರೈತರೆಲ್ಲ ಶಾಸಕರಿಗೆ ಮನವಿ ಮಾಡುತ್ತಾರೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ. ಹೊಂಬಾಳೆ.ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button