ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು – ಡಾ, ಕೆ.ಜೆ ಕಾಂತರಾಜ್.
ತರೀಕೆರೆ ಅ.31
ಗೃಹಭಾಗ್ಯ ಯೋಜನೆಯಡಿ ತರೀಕೆರೆ ಪುರಸಭೆ ಯಿಂದ 16 ಜನ ಪೌರ ಕಾರ್ಮಿಕರಿಗೆ ವಸತಿ ಸೌಕರ್ಯ ನೀಡಲಾಗಿದೆ, ಆದರೆ ಇನ್ನುಳಿದ ನೇರ ಪಾವತಿ ಮತ್ತು ಹಂಗಾಮಿ ಪೌರ ಕಾರ್ಮಿಕರಿಗೆ ಹಾಗೂ ಕಡೂರು, ಅಜ್ಜಂಪುರ, ಬೀರೂರು, ಎನ್ ಆರ್ ಪುರದ ಪೌರಕಾರ್ಮಿಕರಿಗೂ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಉಪ ವಿಭಾಗ ಅಧಿಕಾರಿ ಡಾ, ಕೆ.ಜೆ ಕಾಂತರಾಜ್ ಹೇಳಿದರು. ಅವರು ಬುಧವಾರ ತಾಲೂಕು ಆಡಳಿತ ಸೌಧದಲ್ಲಿ ಕರೆದಿದ್ದ ಉಪ ವಿಭಾಗ ಮಟ್ಟದ ಸಪಾಯಿ ಕರ್ಮಚಾರಿಗಳ ಪುನರ್ವಸತಿ ವಿಜಿಲೆನ್ಸಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಉನ್ನತ ವ್ಯಾಸಂಗ ಮಾಡುತ್ತಿರುವ ಸಪಾಯಿ ಕರ್ಮಚಾರಿಗಳ ಅವಲಂಬಿತ ಮಕ್ಕಳಿಗೆ ಲ್ಯಾಪ್ ಟಾಪ್ ವಿತರಿಸಬೇಕು ಎಂದು ಹೇಳಿದರು. ಸಮಿತಿ ಸದಸ್ಯರಾದ ತರೀಕೆರೆ ಎನ್. ವೆಂಕಟೇಶ್ ರವರು ಮಾತನಾಡಿ ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಾಣ ಮಾಡಬೇಕು ಉಪ ವಿಭಾಗ ಮಟ್ಟದ ಬೀರೂರು, ಕಡೂರು,ಅಜ್ಜಂಪುರ, ಎನ್ ಆರ್ ಪುರ, ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ಸಪಾಯಿ ಕರ್ಮಚಾರಿ ಗುರುತಿನ ಚೀಟಿ ಕೊಡಬೇಕು, ಲಕ್ಕವಳ್ಳಿ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರನ್ನು ಖಾಯಂ ನೇಮಕಾತಿ ಮಾಡಲು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು. ಸಮಿತಿ ಸದಸ್ಯರಾದ ಕೆ ನಾಗರಾಜ್ ಮಾತನಾಡಿ ಪ್ರತಿ ಮೂರು ತಿಂಗಳಿಗೊಮ್ಮೆ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯನ್ನು ಮಾಡಿಸಬೇಕು ಎಂದು ಹೇಳಿದರು. ಸಭೆಯಲ್ಲಿ ತರೀಕೆರೆ ತಾಶಿಲ್ದಾರರಾದ ವಿಶ್ವಜಿತ್ ಮೆಹ್ತಾ, ಎನ್ ಆರ್ ಪುರ ತಹಶೀಲ್ದಾರದ ತನುಜ ಸವದತ್ತಿ, ಅಜ್ಜಂಪುರ ತಾಸಿಲ್ದಾರ್ರಾದ ಶಿವಕುಮಾರ್ ಕಟ್ಟೋಳಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಯದ ಡಾ, ದೇವೇಂದ್ರಪ್ಪ, ಪೊಲೀಸ್ ಉಪ ಅಧೀಕ್ಷಕರಾದ ಹಾಲುಮೂರ್ತಿ ರಾವ್, ಪೊಲೀಸು ನಿರೀಕ್ಷೆಕರಾದ ರಾಮಚಂದ್ರ ನಾಯಕ್, ಉಪ ನಿರೀಕ್ಷಕರಾದ ನಾಗೇಂದ್ರ ನಾಯಕ್, ಎನ್ ಆರ್ ಪುರ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಯದ ಮಂಜುನಾಥ್ ಸಮಾಜ ಕಲ್ಯಾಣ ಅಧಿಕಾರಿಯದ ನಟರಾಜ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು