“ಕರುನಾಡ ಕಿರುತಿ ವಿಶ್ವದೆಲ್ಲಡೇ ನಿರಂತರ”

ಏರುತಿಹದು ಹಾರುತಿಹದು ಕನ್ನಡ ಧ್ವಜ
ಭಾರತಾಂಬೆಯ ಮಡಿಲಲಿ
ಜನ್ನ ರನ್ನ ಪಂಪ ಕುವೇಂಪು ಸುಹೃದಯ ಕನ್ನಡ
ಕಂಪು
ವಿಶ್ವದೆಲ್ಲಡೆ ನಿತ್ಯ ಸೃಷ್ಠಿ ನಿಸಾರ ನಿಸರ್ಗ ಸಿರಿ
ಸವಿ ಹಂಚುತ
ವಿಶ್ವ ಮಾನವತೆಯ ಕವಿ ಸಾರ ಜಗದಿ
ಸಾರುತಿಹದು
ಸಮಗ್ರ ಕನ್ನಡ ಕುಲಕೋಟಿ ಐತಿಹಾಸಿಕ
ಶ್ರೀಜಗಜ್ಯೋತಿ ಬಸವೇಶ್ವರರ ಅನುಭವ
ಮಂಟಪ ಸುವಚನ
ಸಮಾನತೆಯ ಪ್ರಜಾಪ್ರಭುತ್ವ ಸಾರ
ವಿಶ್ವದಿ ಬೆಳಗಿದ ಬೆಳಕು
ಬುದ್ಧ ಬಸವ ಅಂಬೇಡ್ಕರ್ ತತ್ವಾದರ್ಶ ಸಾರುತ
ಅಂದದ ಶ್ರೀಗಂಧದ ನಾಡು
ಕನ್ನಡವೇ ಸತ್ಯ ಕನ್ನಡವೇ ಸಿರಿ ನಿತ್ಯ
ವಿನೂತನವಾಗಿಸುತ
ಏರುತಿಹದು ಹಾರುತಿಹದು ಕನ್ನಡ ಧ್ವಜ
ವಿಶ್ವದಿ ಕನ್ನಡಾಂಬೆಯ ಸುಸ್ವರಗಾನ
ಪ್ರಜ್ವಲಿಸುತ
ಏರುತಿಹದು ಹಾರುತಿಹದು ಕನ್ನಡ ಧ್ವಜ
ಸರ್ವ ಜನಹಿತ ಶಾಂತಿಯ ಸಹೋದರತೆಯ
ಭಾತೃತ್ವ ಬೆಸೆಯುತ
ಏರುತಿಹದು ಹಾರುತಿಹದು ಕನ್ನಡ ಧ್ವಜ
ಸಾಧನೆ ತೋರಿದ ಸಾಧಕರ ಐತಿಹ್ಯ ಅರಿವು
ಮೂಡಿಸುತ
ಏರುತಿಹದು ಹಾರುತಿಹದು ಕನ್ನಡ ಧ್ವಜ
ಭಾರತಾಂಬೆಯ ವರ ಪುತ್ರಿ ಕರುನಾಡ ಕಿರುತಿ
ವಿಶ್ವದಲ್ಲೆಡೆ
ಹರಡುತಏರುತಿಹದು ಹಾರುತಿಹದು ಗಾನಯೋಗಿ
ಪಂಚಾಕ್ಷರಿ ಗವಾಯಿ ವಿಶ್ವ ಮೆಚ್ಚಿದ ತ್ರಿವಿಧ
ದಾಸೋಹಿ ಡಾ ಶಿವಕುಮಾರ ಮಹಾಸ್ವಾಮಿಜಿ
ಸಾರ್ಥಕ ಸೇವೆಯ ನೆನೆಯುತ ವಿಶ್ವ ಜ್ಜಾನ
ಸೂರ್ಯ ಶ್ರೀಸಿದ್ಧೇಶ್ವರ ಜ್ಜಾನದ ಜ್ಯೋತಿ
ಬೆಳಗುತ ಕನ್ನಡ ಧ್ವಜ
ಕನ್ನಡಿಗರ ಹೆಮ್ಮೆಯ ಗೌರವದ ವಂದನೆ ಕನ್ನಡ
ಧ್ವಜ ಅನವರತ ಏತ್ತರಕೆ
ಏರುತಿಹದು ಹಾರುತಿಹದು ಕನ್ನಡಧ್ವಜ
ಕರುನಾಡ ಕುಲಕೋಟಿ ಹೆಮ್ಮೆ ಕನ್ನಡಾಂಬೆಯ
ಧ್ವಜ ಏರುತಿಹದು ಹಾರುತಿಹದು ವಿಶ್ವದೆಲ್ಲೆಡ
ಕರುನಾಡ ಕಿರುತಿ ನಿರಂತರ

ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರೃತರು
ಬಾಗಲಕೋಟ