ಅತಿಥಿ ಉಪನ್ಯಾಸಕರ ಗೌರವ ಧನ ಕಡಿತ – ಡಿ.ಡಿ ಯವರಿಗೆ ಮನವಿ.
ಇಂಡಿ ಜನೇವರಿ.6

ಸರಕಾರಿ ಪದವಿ ಪೂರ್ವ ಅತಿಥಿ ಉಪನ್ಯಾಸಕರ ಅಗಸ್ಟ್, ಸೆಪ್ಟೆಂಬರ್, ಹಾಗೂ ಅಕ್ಟೋಬರ್ ತಿಂಗಳ ಗೌರವ ಧನ ಬಿಡುಗಡೆಯಾಗಿದೆ ಈಗಾಗಲೇ 4055 ಪದವಿ ಪೂರ್ವ ಅತಿಥಿ ಉಪನ್ಯಾಸಕರ ಈ ಮೂರು ತಿಂಗಳ ಸಂಪೂರ್ಣ ಗೌರವ ಧನವನ್ನು ಸರ್ಕಾರ ಬಿಡುಗಡೆ ಮಾಡಿದೆ ಆದರೆ ಪದವಿ ಪೂರ್ವ ಇಲಾಖೆಯ ಸುತ್ತೋಲೆಯ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಉಪನ್ಯಾಸಕರ ಕಾಯ೯ ನಿವ೯ಹಿಸಿದ ದಿನಗಳಿಗೆ ಮಾತ್ರ ವೇತನ ನೀಡಬೇಕೆಂದು ಆದೇಶಿಸಿದೆ ಇದರಿಂದ ಅತಿಥಿ ಉಪನ್ಯಾಸಕರಿಗೆ ಪೂರ್ಣ ಪ್ರಮಾಣದ ಗೌರವ ಧನ ದೊರೆಯುತ್ತಿಲ್ಲ ದಸರಾ ಮಧ್ಯಂತರ ರಜೆಗಳನ್ನು ಪರಿಗಣಿಸಿ ಗೌರವ ಧನ ಕಡಿತ ಗೊಳಿಸುತ್ತಿರುವದು ಅತಿಥಿ ಉಪನ್ಯಾಸಕರಿಗೆ ಮಾಡುವ ಅನ್ಯಾಯವಾಗಿದೆ ಶಾಲಾ ಅತಿಥಿ ಶಿಕ್ಷಕರಿಗೆ ಹಾಗೂ ಪದವಿ ಅತಿಥಿ ಉಪನ್ಯಾಸಕರಿಗೆ ಸರ್ಕಾರವೆ ಪೂರ್ಣ ವೇತನ ನೀಡಿದೆ ಆದರೆ ಅತಿಥಿ ಉಪನ್ಯಾಸಕರಿಗೆ ಗೌರವ ಧನ ಕಡಿತ ವಾಗುತ್ತಿರುವದು ಎಲ್ಲರಿಗೂ ನೋವನ್ನುಂಟು ಮಾಡಿದೆ ದಯವಿಟ್ಟು ಅಕ್ಟೋಬರ್ ತಿಂಗಳ ಪೂರ್ಣ ಪ್ರಮಾಣದ ಗೌರವ ಧನವನ್ನು ಬಿಡುಗಡೆ ಮಾಡಬೇಕೆಂದು ಪದವಿ ಪೂರ್ವ ಇಲಾಖೆಗೆ ಆದೇಶ ನೀಡಬೇಕೆಂದು ಉಪ ನಿರ್ದೇಶಕರು ಪದವಿ ಪೂರ್ವ ಇಲಾಖೆ ಇವರಿಗೆ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ರಾದ ನಿಜಲಿಂಗಪ್ಪ ಕಾಳೆ.ಕಾಯ೯ದಶಿ೯ ಜಟ್ಟಿಂಗರಾಯ ಹೊಸುರ.ರಾಜಕುಮಾರ ದ್ಯಾಮಗೊಂಡ.ಮಲ್ಲಣ್ಣಾ ಬಬಲಾದ.ವಿಜಯಕುಮಾರ ಪಾಟೀಲ್.ಭೀಮಾಶಂಕರ ಸಪಳಿ.ಮಹಾವಿರ ಹೊಸಮನಿ.ಸಿದ್ದರಾಮ ಹೊಟಗಿ ದಾನಪ್ಪ ಸಾರವಾಡ.ಅರವಿಂದ ಕಾಂಬಳೆ.ಸಾವಿತ್ರಿ ದ್ಯಾಮಗೊಂಡ ಮನವಿ ಪತ್ರವನ್ನು ಸಲ್ಲಿಸಿದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ