ರಾಜ್ಯದಲ್ಲಿ ಜಿಲ್ಲೆಗಳ ವಿಂಗಡಣೆಯಾದಲ್ಲಿ ಇಂಡಿ ಪ್ರತ್ಯೇಕ ಜಿಲ್ಲೆಯಾಗಬೇಕೆಂದು ಕನಸು ಕಂಡಿದ್ದೇನೆ. ಈಡೇರಿಕೆಗಾಗಿ ತಾವು ನನಗೆ ಮತದ ರೂಪದಲ್ಲಿಆಶೀರ್ವದಿಸಿ ಎಂದು ಯಶವಾಂತರಾಯಾಗೌಡ ಪಾಟೀಲ್ ವಿನಂತಿ
ಭುಯ್ಯಾರ ಏ.20
ಕಳದ ಅವಧಿಯಲ್ಲಿ ಇಂಡಿ ಪ್ರತೇಕ ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಇಂಡಿ ನಗರ ಜಿಲ್ಲಾ ಕೇಂದ್ರಕ್ಕೆ ಇರಬೇಕಾದ ಮೂಲಭೂತ ಸೌಲಭ್ಯ ಕಲ್ಪಿಸಿಕೊಟ್ಟಿದ್ದೆನೆ. ಮುಂದೆ ಎಂದಾದರೂ ರಾಜ್ಯದಲ್ಲಿ ಜಿಲ್ಲೆಗಳ ವಿಂಗಡಣೆಯಾದಲ್ಲಿ ಇಂಡಿ ಕೂಡಾ ಜಿಲ್ಲೆಯಾಗಬೇಕು ಎಂಬ ಕನಸ್ಸು ಕಂಡಿದ್ದೆನೆ ಇದನ್ನು ಈಡೇರಿಸಬೇಕಾದರೆ ತಾವು ನನಗೆ ಮತದ ರೂಪದಲ್ಲಿ ಆಶೀರ್ವಾದ ಮಾಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ವಿನಂತಿಸಿದರು.
ಅವರು ತಾಲೂಕಿನ ಭುಯ್ಯಾರ ಗ್ರಾಮದಲ್ಲಿ ಇಂಡಿ ವಿಧಾನಸಭಾ ಮತಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದ ಕಟ್ಟ ಕಡೆಯ ಗಡಿ ಭಾಗದ ಇಂಡಿ ತಾಲೂಕು ನಂಜುಡಪ್ಪ ವರದಿಯ ಪ್ರಕಾರ ಅತೀ ಹಿಂದುಳಿದ, ಸದಾ ಬರಗಾಲಕ್ಕೆ ತುತ್ತಾಗಿ ಅಭಿವೃದ್ದಿ ವಂಚಿತವಾಗಿತ್ತು. ಇಂದು ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ ಸಹಕಾರದಿಂದ ಇಂದು ಜಿಲ್ಲಾ ಕೇಂದ್ರಕ್ಕೆ ಈರಬೇಕಾದ ಎಲ್ಲ ಮಾನದಂಡಗಳು ಇಂಡಿನಗರ ಹೊಂದಿ ಸಶಕ್ತವಾಗಿದೆ ಎಂದರು.

ಇಂಡಿ ಪ್ರತೇಕ ಜಿಲ್ಲೆಯಾದಲ್ಲಿ ಮೆಡಿಕಲ್ ಕಾಲೇಜ್, ಇಂಜಿನೀಯರಿಂಗ್ ಕಾಲೇಜ್, ಸೇರಿದಂತೆ ಜಿಲ್ಲಾಮಟ್ಟದ ಎಲ್ಲಾ ಇಲಾಖೆಗಳು ಕಾರ್ಯನಿರ್ವಸುತ್ತವೆ. ಹೀಗಾಗಿ ಇಂಡಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸಾಧ್ಯ. ನಮ್ಮಕ್ಕಿಂತಲೂ ಭೌಗೋಳಿಕವಾಗಿ, ವಿಸ್ತೀರ್ಣದಲ್ಲಿ ನಮ್ಮಕ್ಕಿಂತಲೂ ಕಡಿಮೆ ಇರುವಂತ ಉಡುಪಿ, ಯಾದಗಿರಿ, ವಿಜಯನಗರ ಜಿಲ್ಲೆಗಳಾಗಿವೆ. ಇಂಡಿ ಎಲ್ಲ ವಿಧದಲ್ಲು ಚೌಕಟ್ಟಿನಲ್ಲಿದ್ದು ಜಿಲ್ಲೆ ಯಾಕೇ ಆಗಬಾರದು. ಈಗಾಲೆ ಈ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತು ಮೂಲಕ ಛಾಪು ಮುಡಿಸಿದ್ದೆನೆ. ಯಾವುದೆ ಕಾರಣಕ್ಕು ಇಂಡಿ ಜಿಲ್ಲೆ ಮಾಡೆ ತಿರುತ್ತೆನೆ. ಅದಕ್ಕಾಗಿ ಮತ್ತೊಮ್ಮೆ ನನಗೆ ಆಶಿರ್ವಾದ ರೂಪದಲ್ಲಿ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳಿ ಗ್ರಾಮದ ವಿವಿಧ ಪಕ್ಷಗಳಿಂದ ನೂರಾರು ಕಾರ್ಯಕರ್ತರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕೆಪಿಸಿಸಿ ವಕ್ತಾರ ಎಸ್.ಎಮ್.ಪಾಟೀಲ ಗಣಿಹಾರ, ಎಮ್.ಆರ್.ಪಾಟಿಲ, ರಾಜಶೇಖರ ಗುಡದಿನ್ನಿ, ಕೆಂಪೆಗೌಡ, ಜಟ್ಟೆಪ್ಪ ರವಳಿ, ಮಾಜಿ ಜಿಪಂ ಸದಸ್ಯ ಮಹಾದೇವ ಪೂಜಾರಿ, ಜಾವಿದ ಮೋಮಿನ, ಧರ್ಮರಾಜ ವಾಲಿಕಾರ, ಹಣಮಂತ ಖಂಡೆಕಾರ, ಅಣ್ಣಪ್ಪ ಬಿದರಕೊಟಿ, ಪ್ರಶಾಂತ ಕಾಳೆ, ಬಿ.ಕೆ.ಪಾಟೀಲ, ಹುಚ್ಚಪ್ಪ ತಳವಾರ, ಶಂಕರ ಹೊನ್ನವಾಡ, ಶ್ರೀಶೈಲ ಲಾಳಸಂಗಿ, ಪರಶೂರಾಮ ನಾಟೀಕಾರ, ತುಕಾರಾಮ ಅರಕೇರಿ, ಶಿತಾರಾಮ ಲಾಳಸಂಗಿ, ಶಂಭು ಕೊರಚಗಾಂವ, ಜಗದೀಶ ಹಲ್ಯಾಳ, ಭಾಗಣ್ಣ ನಾಯಕೊಡಿ, ಮಾಳು ಪುಜಾರಿ, ಸದಾಶಿವ ನಾಯಕೊಡಿ ಸೇರಿದಂತೆ ಅನೇಕರು ಮತಯಾಚನೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು: ಬೀ ಎಸ್ ಹೊಸೂರ್. ವಿಜಯಪುರ