ನೂಲು ಹುಣ್ಣಿಮೆಯ ಪ್ರಯುಕ್ತ ಸಾಮೂಹಿಕ ಜನಿವಾರ ಧಾರಣೆ.
ಮಸ್ಕಿ ಆ.21

ಪಟ್ಟಣದ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ನೂಲು ಹುಣ್ಣುಮೆಯ ನಿಮಿತ್ಯವಾಗಿ ಪದ್ಮಶಾಲಿ (ನೇಕಾರ) ಸಮಾಜದಿಂದ ಸಾಮೂಹಿಕ ಜನಿವಾರ ಧಾರಣೆ ಕಾರ್ಯಕ್ರಮ ಸೋಮವಾರ ಯಶಸ್ವಿಯಾಗಿ ಜರುಗಿತು. ಪುರೋಹಿತರ ಮಂತ್ರ ಘೋಷಗಳ ನಡುವೆ ಸಮುದಾಯದವರು ಸಾಮೂಹಿಕ ಜನಿವಾರ ಧಾರಣೆಯನ್ನು ಮಾಡಿ ಕೊಂಡರು.ಸಂಜೆ ಮಹಿಳೆಯರು ಕಳಸ ಹಾಗೂ ಡೊಳ್ಳಿನ ಕುಣಿತದೊಂದಿಗೆ ಮಾರ್ಕಂಡೇಶ್ವರರ 53 ನೇ. ಪಲ್ಲಕ್ಕಿ ಉತ್ಸವವು ದೇವಸ್ಥಾನ ದಿಂದ ಪ್ರಾರಂಭವಾಗಿ ಸಂತೆ ಬಜಾರ ಮುಖಾಂತರ ಮಸ್ಕಿಯ ಆರಾಧ್ಯ ದೈವವಾಗಿರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳಿತು. ಸಮಾಜದ ಅಧ್ಯಕ್ಷ ಲಕ್ಷ್ಮಣ ಕರ್ಲಿ ನೂಲು ಹುಣ್ಣಿಮೆ ಅಂಗವಾಗಿ ಪದ್ಮಶಾಲಿ ಸಮಾಜ ಹಮ್ಮಿಕೊಂಡಿದ್ದ ಸಾಮೂಹಿಕ ಜನಿವಾರ ಧಾರಣೆ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ನಂತರ ಮಾತನಾಡಿ ನಮ್ಮ ಕುಲದೈವವಾದ ಮಾರ್ಕಂಡೇಯ ಮುನಿಗಳು ಭಕ್ತಿ ಪರಕಾಷ್ಠೆಯಲ್ಲಿ ಅಗ್ರ ಮಾನ್ಯರಾಗಿದ್ದರು ಹಾಗಾಗೀಯೇ ಅವರು ಇಂದಿಗೂ ಚಿರಂಜೀವಿ ಗಳಾಗಿಯೇ ಉಳಿದಿದ್ದಾರೆ.

ಅಂತಹ ದೈವವನ್ನು ಪಡೆದ ನಾವುಗಳೇ ಧನ್ಯರು ಎಂದರು. ಹಾಗೂ ಬೋರವೆಲ್ ದಾನಿಗಳಾದ ಮಸ್ಕಿ ಪುರಸಭೆಯ ಸದಸ್ಯರಾದ ಮಲ್ಲಿಕಾರ್ಜುನ ಬ್ಯಾಳಿ ಮತ್ತು ಗೀತಾ ಗಂ ಶಿವರಾಜ ಸಮಾಜದ ವತಿಯಿಂದ ಸನ್ಮಾನ ಮತ್ತು ಹೂವಿನ ಹರಾಜು ಕಾರ್ಯಕ್ರಮ ನಡೆಯಿತು. ಅದೇ ರೀತಿ ಸಮಾಜದ ಹಿರಿಯರಾದ ಮಲ್ಲಯ್ಯ ಪಗಡೇಕಲ್, ಯಮನಪ್ಪ ದೇವರೆಡ್ಡಿ, ಗೌರವಾಧ್ಯಕ್ಷ ಡಾ, ಶಂಕರ ಕರ್ಲಿ,ಉಪಾಧ್ಯಕ್ಷ ಪರಶುರಾಮ ಕೊಡಗುಂಟಿ ಕಾರ್ಯಕ್ರಮದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯದರ್ಶಿ ವೆಂಕಟೇಶ ಪಗಡೇಕಲ, ಸಹ ಕಾರ್ಯದರ್ಶಿ ಈರಪ್ಪ ಆಂದೇಲಿ, ವಿರೇಶ ಪೂಜಾರ, ರಾಘವೇಂದ್ರ ಚಿನ್ನಿ ಮಲ್ಲಿಕಾರ್ಜುನ ಶ್ಯಾಸಲ್, ನಾಗರಾಜ ಕರ್ಲಿ, ಮತ್ತು ನೇಕಾರ ಒಕ್ಕೂಟದ ಪದಾಧಿಕಾರಿಗಳು ಹಾಗೂ ಪದ್ಮಶಾಲಿ ಸಮಾಜದ ಎಲ್ಲಾ ಕುಲ ಬಾಂಧವರು ಭಾಗವಹಿಸಿದ್ದರು. ಮಹೇಶ್ವರಿ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಿದರೇ ಶ್ರೀಮತಿ ತನುಜಾ ನಿರೂಪಿಸಿದರು. ಮೇಘನಾ ಸ್ವಾಗತಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ