ಡಾ, ಅಂಬೇಡ್ಕರ್ ಅವರ ಭಾವ ಚಿತ್ರವಿರುವ ಧ್ವಜದ ಕಟ್ಟೆಯ – ಪುನರ್ ನಿರ್ಮಾಣ ಮಾಡಿದರು.

ಕಬ್ಬಲಗೇರಿ ನ.06

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಬ್ಬಲಗೇರಿ ಗ್ರಾಮದ ದಲಿತ ಕಾಲೋನಿಯ ಹತ್ತಿರ ಇತ್ತೀಚಿಗೆ ಪೊಲೀಸ್ ಇಲಾಖೆಯಿಂದ ಡಾ, ಅಂಬೇಡ್ಕರ್ ಭಾವ ಚಿತ್ರವಿರುವ ದ್ವಜದ ಕಟ್ಟೆಯನ್ನು ದಲಿತರ ಪ್ರತಿರೋಧದ ಮಧ್ಯೆಯು ಅದನ್ನು ತೆರವು ಗೊಳಿಸಲಾಗಿತ್ತು. ಹಾಗೂ ಆ ಸಂದರ್ಭದಲ್ಲಿ ದಲಿತ ಯುವಕರ ಮೇಲೆ ಹಲ್ಲೆಯನ್ನು ನಡೆಸಲಾಗಿತ್ತು. ಈ ವಿಷಯದ ಕುರಿತು ನಿನ್ನೆ ದಿನ ಕೆಲವು ಸಂಘಟನೆ ಮುಖಂಡರು ಗ್ರಾಮದಲ್ಲಿ ಉಂಟಾದ ವಾಲ್ಮೀಕಿ ಮತ್ತು ಮಾದಿಗ ಸಮುದಾಯದ ಮಧ್ಯದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿ ಸಾಮರಸ್ಯತೆಯಿಂದ ಇರಲು ತಿಳಿ ಹೇಳಿದ್ದರು.

ಅದೇ ರೀತಿ ಇಂದು ಗ್ರಾಮಕ್ಕೆ ಭೇಟಿ ನೀಡಿದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷರಾದ ವೈ.ಸಿ ಕಾಂಬಳೆ ವಕೀಲರ ನೇತೃತ್ವದಲ್ಲಿ ಎಐಬಿಎಸ್‌ಪಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಗುರುಶಾಂತಪ್ಪ ಮದಿನಕರ ಮತ್ತು ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷರಾದ ಕಾಂತಿಚಂದ್ರ ಜ್ಯೋತಿ ಹಾಗೂ ಸಿಂಧೂರ ಲಕ್ಷ್ಮಣ ಯುವಸೇನೆ ತಾಲೂಕಾಧ್ಯಕ್ಷರಾದ ಗಿರೀಶ ತಳವಾರ ರವರು ಎರಡು ಸಮುದಾಯದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪುನಃ ಅದೇ ಸ್ಥಳದಲ್ಲಿ ಸಂವಿಧಾನ ಶಿಲ್ಪಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ ಅವರ ಭಾವ ಚಿತ್ರವಿರುವ ಧ್ವಜದ ಕಟ್ಟೆಯನ್ನು ಸಿಮೆಂಟ್ ನಿಂದ ಪುನರ್ ನಿರ್ಮಾಣ ಗೊಳಿಸಲಾಯಿತು.

ತದನಂತರ ಡಾ, ಅಂಬೇಡ್ಕರ ರವರ ಭಾವಚಿತ್ರ ಹಾಗೂ ಕಟ್ಟೆಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಾದಾಮಿಯ ಕ್ರೈಂ ಪಿಎಸ್ಐ ಶ್ರೀ ವಿಜಯಕುಮಾರ ರಾಠೋಡ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮದ ಬಾಲಪ್ಪ ಮಾದರ, ವೆಂಕಟೇಶ ಮಾದರ, ಬಸವರಾಜ ಮಾದರ ಮುಂತಾದ ನೂರಾರು ಜನ ಗ್ರಾಮಸ್ಥರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button