ಶ್ರೀ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ – ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ.

ಕೊಟ್ಟೂರು ಮಾ.08

ಶ್ರೀ ಕೊಟ್ಟೂರೇಶ್ವರ ಮಹಾ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜೆ.ಸಿ.ಐ ಕೊಟ್ಟೂರು ಐ.ಕ್ಯೂ.ಎ.ಸಿ ಸೈನ್ಸ್ ಫೋರಂ ಆರ್.ಎನ್.ಡಿ ಎನ್.ಸಿ.ಸಿ, ಎನ್.ಎಸ್.ಎಸ್ ಮಹಿಳಾ ಘಟಕ ಸಂಯೋಗ ದೊಂದಿಗೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಸಿಗೆ ನೀರು ಹಾಕುವುದರ ಮುಖಾಂತರ ಉದ್ಘಾಟಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ, ಎಂ.ರವಿಕುಮಾರ್ ಪ್ರಚಲಿತ ವಿದ್ಯಮಾನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವದ ವಿಷಯಗಳಾದಂತಹ ಮಹಿಳೆಯರ ಸಬಲೀಕರಣ, ವಿದ್ಯಾಭ್ಯಾಸ, ಆರ್ಥಿಕ ಸಬಲೀಕರಣ ಮತ್ತು ಲೈಂಗಿಕ ಕಿರುಕುಳ ವಿಶೇಷವಾಗಿ ದೇಶಕ್ಕಾಗಿ ವಿಜ್ಞಾನ, ಸಾಮಾಜಿಕ ಮತ್ತು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರ ಪಾತ್ರವನ್ನು ಬಹಳ ವಿಸ್ತಾರವಾಗಿ ವಿದ್ಯಾರ್ಥಿನಿಯರಿಗೆ ಮನ ಮುಟ್ಟುವಂತೆ ತಿಳಿಸಿ ಕೊಟ್ಟರು. ಸದೃಢವಾದ ಸಮಾಜಕ್ಕೆ ಕುಟುಂಬದ ಅವಶ್ಯಕತೆ ಇದೆ. ಕುಟುಂಬದ ನಿರ್ವಹಣೆಗೆ ಮಹಿಳೆಯರ ಪಾತ್ರ ಎಷ್ಟು ಪ್ರಾಮುಖ್ಯವಾದುದು ಮತ್ತು ತೊಟ್ಟಿಲನ್ನು ತೂಗಿದ ಕೈ ಇಡೀ ಪ್ರಪಂಚವನ್ನು ತೂಗುಬಲ್ಲದು, ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ, ಎನ್ನುವಂತಹ ಅನೇಕ ಉದಾಹರಣೆಯನ್ನು ಕೊಡುವುದರ ಮುಖಾಂತರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹಿಳೆಯರ ಕೊಡುಗೆಯ ಬಗ್ಗೆ ಸಹ ವಿಸ್ತಾರವಾಗಿ ಹೇಳಿದರು.ಕೊಟ್ಟೂರಿನ ಪ್ರಸಿದ್ಧ ಮೂಗಬಸವೇಶ್ವರ ಆಸ್ಪತ್ರೆಯ ಮಹಿಳಾ ವೈದ್ಯಯಾದ ಶ್ರೀಮತಿ ಸಿಂಧೂ ಮೂರ್ತಿರವರು ಮಹಿಳೆಯರು ತಮ್ಮ ದೈನಂದಿನ ಕಾರ್ಯ ಚಟುವಟಿಕೆ ಜೊತೆ ಜೊತೆಗೆ ತಮ್ಮ ವೈಯಕ್ತಿಕ ಶುಚಿತ್ವ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವುದರಿಂದ ಆಗುವ ಉಪಯೋಗಗಳ ಬಗ್ಗೆ ವೈಜ್ಞಾನಿಕವಾಗಿ ಮಕ್ಕಳಿಗೆ ವರ್ಷಕ್ಕೊಮ್ಮೆ ಮತ್ತು ಆರು ತಿಂಗಳಿಗೊಮ್ಮೆ ಪರೀಕ್ಷೆಯನ್ನು ಮಹಿಳಾ ವೈದ್ಯರ ಮುಖಾಂತರ ಮಾಡಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳುವಂತೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಹಿಂದಿನ ಕಾಲದಲ್ಲಿ ಅವೈಜ್ಞಾನಿಕ ಪದ್ಧತಿ ಬಳಕೆಯಿಂದ ಆಗುತ್ತಿದ್ದಂತ ಗುಪ್ತ ರೋಗಗಳ ಬಗ್ಗೆ ಮಕ್ಕಳಿಗೆ ಅರಿವನ್ನು ಮೂಡಿಸಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಜೆ.ಸಿ.ಐ ಕೊಟ್ಟೂರು ಅಧ್ಯಕ್ಷರಾಗಿರುವ ಡಾ, ಬಸವನಗೌಡ ದಂತ ವೈದ್ಯರು ಮಹಿಳೆಯರ ಆರೋಗ್ಯದ ಮಹತ್ವ ಕುರಿತು ಮಕ್ಕಳಿಗೆ ವಿವರಿಸಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಐ.ಕ್ಯೂ .ಎ.ಸಿ. ಸಂಯೋಜಕರಾದ ಡಾ, ಪೃಥ್ವಿರಾಜ್.ಸಿ ಬೆಡ್ಜರಗಿ. ಜೆ.ಸಿ.ಐ ಸದಸ್ಯರಾಗಿರುವಂತ ಶ್ರೀಮತಿ ಮಂಗಳ ಮತ್ತು ಜಲಾಜಾಕ್ಷಿ ಅವರು ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಉಪನ್ಯಾಸಕಿಯರಾದ ಶ್ರೀಮತಿ ಶ್ವೇತ, ಗಗನ ಶ್ರೀ, ರಶ್ಮಿ, ಭವಾನಿ, ಶ್ರೀಮತಿ ಶಂಕ್ರಮ್ಮ, ಪೂಜಾ, ರೂಪ. ಉಪನ್ಯಾಸಕರುಗಳಾದ ಡಾ, ಶಿವಕುಮಾರ್ ಕೊಟ್ರೇಶ್, ಬಸವರಾಜ್ ಬಣಕಾರ್, ಭಾಗವಹಿಸಿದರು.ಈ ಕಾರ್ಯಕ್ರಮದ ಪ್ರಾರ್ಥನೆಯನ್ನು ಶ್ರೀಮತಿ ರಹಿಂಬಿ, ಸ್ವಾಗತ ಪೂಜಾ, ವಂದನಾರ್ಪಣೆಯನ್ನು ಶ್ರೀಮತಿ ಪ್ರತಿಮಾ. ಎಂ.ಎಸ್, ನೆರವೇರಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಅನುಪಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button