ನೆಲ ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು – ಬಗ್ಗೆ ಕೃಷಿ ತರಬೇತಿ ಕಾರ್ಯಕ್ರಮ.
ನರೇಗಲ್ ಡಿ.31

ರೋಣ ತಾಲೂಕಿನ ನರೆಗಲ್ಲ ವಲಯದ ನರೇಗಲ್ಲ ಪಟ್ಟಣದಲ್ಲಿ ನೆಲ ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ಬಗ್ಗೆ ಕೃಷಿ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು.ಸಂಪನ್ಮೂಲ ವ್ಯಕ್ತಿಗಳಾಗಿ ನಿರ್ಮಲ ಶಿವಾನಂದಯ್ಯ ಹಿರೇಮಠ ರವರು ಮಳೆ ನೀರು ಸಂರಕ್ಷಣೆಯ ಬಗ್ಗೆ ಚಾವಣಿಯ ನೀರನ್ನು ಸಂಗ್ರಹಿಸಿವ ಬಗ್ಗೆ ಮತ್ತು ಹಿಂಗು ಗುಂಡಿ ರಚನೆಯ ಬಗ್ಗೆ ಹೊಲದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡುವ ಬಗ್ಗೆ ಮಾಹಿತಿ ನೀಡಿದರು.

ಕೃಷಿ ಮೇಲ್ವಿಚಾರಕರಾದ ಶಂಭುಲಿಂಗ ರವರು ಇತರೆ ಪಶು ಸಂಗೋಪನೆ ಮತ್ತು ಹೂವು ಹಣ್ಣಿನ ಬೇಸಾಯ ಮತ್ತು ಸಿರಿಧಾನ್ಯ ಬೇಸಾಯದ ಮತ್ತು ಸಮುದಾಯ ಅಭಿವೃದ್ಧಿ ವಿಭಾಗದಿಂದ ನಮ್ಮೂರ ನಮ್ಮ ಕೆರೆಯ ಹೂಳೆತ್ತುವ ದೇವಸ್ಥಾನದ ಜೀರ್ಣೋದ್ಧಾರಗಳ ಜನಮಂಗಲ ಕಾರ್ಯಕ್ರಮದ ಅನುದಾನಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.ಕಾರ್ಯ ಕ್ಷೇತ್ರದ ಸೇವಾ ಪ್ರತಿ ನಿಧಿಯಾದ ಸುಮಲತಾ ಅವರು ನಿರೂಪಿಸಿ ಸ್ವಾಗತ ಮಾಡಿದರು. ಗ್ರಾಮದ ಪ್ರಗತಿಪರ ರೈತರಾದ ಚಂದ್ರಯ್ಯ ಹಡಪದ ಒಕ್ಕೂಟದ ಅಧ್ಯಕ್ಷರು ಪ್ರಗತಿ ಬಂದು ಸ್ವಸಹಾಯ ಸಂಘಗಳ ಸರ್ವ ಸದಸ್ಯರು ಗ್ರಾಮದ ರೈತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ. ಗದಗ