ಭರದಿಂದ ಸಾಗಿದೆ “ಬಯಸದೇ ಬಂದ ರಾಜಯೋಗ” ಚಿತ್ರೀಕರಣ.
ಧಾರವಾಡ ಸಪ್ಟೆಂಬರ್.8

ಅಭಿ ಕ್ರಿಯೇಷನ್ಸ್ ಗದಗ ಅವರ ಡಾ. ಕಲ್ಮೇಶ್ ಹಾವೇರಿಪೇಟ್ ಇವರ ಶುಭ ಹಾರೈಕೆಗಳೊಂದಿಗೆ, ಮಹಾಮಹಿಮ ಲಡ್ಡುಮುತ್ಯಾ ಚಲನಚಿತ್ರ ಖ್ಯಾತಿಯ ನಿರ್ದೇಶಕ ಅರವಿಂದ್ ಮುಳಗುಂದ ನಿರ್ದೇಶನದ ‘ಬಯಸದೇ ಬಂದ ರಾಜಯೋಗ’ ಕಿರು ಚಿತ್ರದ ಚಿತ್ರೀಕರಣ ಮುಹೂರ್ತ ಸಮಾರಂಭದಲ್ಲಿ ಡಾ.ಕಲ್ಮೇಶ್ ಹಾವೇರಿಪೇಟ ಕ್ಯಾಮರಾ ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು. ಯುವನಟ ಡಾ.ಕಿರಣಂದ್ರ ಮತ್ತು ನಟಿ ಅಪೂರ್ವಾ ಅವರ ನಮ್ಮಿಬ್ಬರ ಪ್ರೀತಿಗೆ ಬಯಸದೇ ರಾಜಯೋಗ ಕೂಡಿ ಬಂದಿದೆ ಎಂಬ ಸಂಭಾಷಣೆಗೆ ದಯಾನಂದ.ಜಿ, ಮೊದಲ ದೃಶ್ಯ ಚಿತ್ರೀಕರಿಸಿಕೊಂಡರು.

ಧಾರವಾಡದ ಶ್ರೀನಗರ, ಬಸವರೆಡ್ಡಿ ಕಾಲೇಜ್ ಸೇರಿದಂತೆ ,ಕೆಲಗೇರಿ, ಸಲಿಕಿನಕೊಪ್ಪ, ಡೋರಿಕೆರೆ, ಸುತ್ತಮುತ್ತ ಸುತ್ತಮುತ್ತ ದೃಶ್ಯಗಳ ಹಾಗೂ ಹಾಡಿನ ಚಿತ್ರೀಕರಣ ಭರದಿಂದ ಸಾಗಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ ಈ ಕಿರುಚಿತ್ರದಲ್ಲಿದೆ. ನಾಯಕ ನಟರಾಗಿ ವೈದ್ಯ ಡಾ.ಕಿರಣಚಂದ್ರ, ನಾಯಕಿಯರಾಗಿ ಅಪೂರ್ವ ಭರಣಿ , ಅಮೃತಾ , ಅಪೂರ್ಣ , ಸಿದ್ದುಕೃಷ್ಣ, ಎ.ಚಂದ್ರಶೇಖರ, ಕಿಶನ್ರಾವ್ ಕುಲಕರ್ಣಿ (ಆನೆಹೊಸೂರ) , ಎನ್ ಎಸ್ ಪಾಟೀಲ್ (ಹೂಲಿ), ರಾಜೇಶ್ವರಿ, ಕೀರ್ತಿ ಅರವಿಂದ್, ಲಕ್ಷ್ಮೀ ಎಸ್.ಬಿ, ರಶ್ಮಿ ಮಾಲಸೊರೆ, ಶಂಭು ಪಾಟೀಲ್, ಗಣೇಶ್ ಜಾಧವ್,ಶ್ರೇಯಸ್ ಶಿಂಧೆ, ರಾಜೇಶ್ವರಿ ಹಂಜಿ, ಅಂಕಿತ ಕುಲಕರ್ಣಿ, ರಾಮು ಕಲಾದಗಿ, ಆರ್.ಜೆ.ರಾಘವೇಂದ್ರ, ವೀರಣ್ಣ ವಿಠಲಾಪೂರ , ಪ್ರಭು ಹಂಚಿನಾಳ ಮೊದಲಾದವರು ಅಭಿನಯಿಸುತ್ತಿದ್ದಾರೆ.

ದಯಾನಂದ.ಜಿ , ಪ್ರಶಾಂತ್, ರಾಜೇಶ್ ಛಾಯಾಗ್ರಹಣ, ಕಥೆ, ಸಂಭಾಷಣೆ ಮಧು ಜೋಶಿ, ಸಾಹಿತ್ಯ ಪ್ರಮೋದ್ ಜೋಶಿ, ಪ್ರಸಾಧನ ದೇವೇಂದ್ರ ಕಮ್ಮಾರ, ಸಾಹಸ – ಸ್ಟೈಲ್ ಚಂದ್ರು, ಸಂಗೀತ ಮಲ್ಲು ಸಂಶಿ , ಹಿನ್ನಲೆಗಾಯನ ವನಿತಾ ಪರಮೇಶ್ವರ, ಸಂಕಲನ ಸಿದ್ದಾರ್ಥ್ ಜಾಲಿಹಾಳ ಎಸ್.ಎನ್.ಜಾಲ್ಸ್ ಸ್ಟುಡಿಯೋ, ಪತ್ರಿಕಾ ಸಂಪರ್ಕ ಡಾ.ವೀರೇಶ ಹಂಡಿಗಿ, ಪ್ರಚಾರಕಲೆ ಅವಿನಾಶ್ ಗಂಜಿಹಾಳ, ಸಹಕಾರ ಮಹಾಂತೇಶ ಹಳ್ಳೂರ, ಸಹ ನಿರ್ದೇಶನ ಡಾ.ಪ್ರಭು ಗಂಜಿಹಾಳ, ನೃತ್ಯ ಮತ್ತು ಸಹಾಯಕ ನಿರ್ದೇಶನ ಸುಭಾಷ್, ನಿರ್ವಹಣೆ ರಘು ತುಮಕೂರು, ಆನಂದ್ ಜೋಶಿ, ಚಿತ್ರಕಥೆ ನಿರ್ದೇಶನ ಅರವಿಂದ್ ಮುಳಗುಂದ ಅವರದಿದೆ. ಶ್ರೀಮತಿ ಸಂಗೀತಾ ಚಂದ್ರಶೇಖರ್, ಶ್ರೀಮತಿ ವಿದ್ಯಾ ಗಂಜಿಹಾಳ, ಶ್ರೀಮತಿ ರೇಖಾ ಸಿದ್ದುಕೃಷ್ಣ ಕಿರುಚಿತ್ರದ ನಿರ್ಮಾಪಕರಾಗಿದ್ದಾರೆ.
ವರದಿ
ಡಾ.ಪ್ರಭು ಗಂಜಿಹಾಳ
ಮೊ-9448775346