ಪರಿಶಿಷ್ಟ ಪಂಗಡಗಳ ಇಲಾಖೆಯಲ್ಲಿ – ಚೇರ್ ಗಳು ಖಾಲಿ.
ಮಾನ್ವಿ ಅ.10

ಸರಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇರಬೇಕು. ಆದರೆ ರಾಯಚೂರು ಜಿಲ್ಲೆಯ ಮಾನ್ವಿ ಪರಿಶಿಷ್ಟ ಪಂಗಡ ಇಲಾಖೆಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲದ ಕಾರಣ ಅಧಿಕಾರಿಗಳ ಚೇರ್ ಗಳು ಖಾಲಿ ಖಾಲಿ. ಪರಿಶಿಷ್ಟ ಪಂಗಡ ಇಲಾಖೆಯಲ್ಲಿ ಅಧಿಕಾರಿಗಳು ಯಾವಾಗ ಬರುತ್ತಾರೆನ್ನುವುದು ತಿಳಿಯದಾಗಿದೆ, ಅಮಾಯಕರು ನಿತ್ಯ ಅಲೆದರು ಬಡವರಿಗೆ ಸಿಗಬೇಕಾದ ಯೋಜನೆಗಳು ಉಳ್ಳವರ ಪಾಲಾಗುತ್ತಿವೆ ಎಂದು ಮಾಜಿ ಯೋಧ ಆಂಜಿನೇಯರ ಆರೋಪವಾಗಿದೆ.

ಮಾನ್ವಿಯಲ್ಲಿ ಆಡಳಿತ ವ್ಯವಸ್ಥೆ ಸರಿಯಿಲ್ಲದ ಕಾರಣ ಅಧಿಕಾರಿಗಳು ಆಡಿದ್ದೇ ಆಟವಾಗಿದೆ, ರಾಯಚೂರು ಜಿಲ್ಲಾಧಿಕಾರಿ ಸಾಹೇಬ್ರೆ ಮಾನ್ವಿ ಪರಿಶಿಷ್ಟ ಪಂಗಡ ಇಲಾಖೆಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಮಾಜಿ ಯೋಧ ಆಂಜಿನೇಯನ ಕೂಗಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ