“ಸಿಹಿ ಕಹಿ ಅನುಭವದ ಅಮೃತ ಸವಿ ನಗೆ”…..

ಜಗದ ನಿತ್ಯ ಬೆಳಗು ಸೂರ್ಯ ಚಂದ್ರರು
ಕತ್ತಲು ಬೆಳಕಿನಾಟದಿ ಅವಿರತ ಚಲನೆ
ದಾನವ ಮಾನವ ಜೀವನ ಕಂಗೋಳಸಿ
ಕಷ್ಠ ನಷ್ಠ ಸುಖ ದುಃಖ ನೋವು ನಲಿವು
ಅಳು ನಗು ಹಾನಿ ಲಾಭ ಒಲವು ಗೆಲವು
ಅಪಮಾನ ಸನ್ಮಾನ ಮಾನ್ಯ ಸಾಮಾನ್ಯ
ಸಿಹಿ ಕಹಿ ಅನುಭವದ ಅಮೃತ ಸವಿ ನಗೆ
ಸಾಧನೆ ದಿಬ್ಬಣ ಸರ್ವ ಕುಲ ಸ್ನೇಹ ಬಂಧು
ಕಲಿತು ನಲಿತು ಹರುಷದ ಹಬ್ಬ ಹೊಗಳಿಕೆತೆ
ಗಳಿಕೆ ಅರಿಕೆ ಮರಿಚಿಕೆ ಕುಣಿದು ನಲಿದು
ಇದ್ದವರು ಸರಿದು ಅಂತರಗತ ಪಾರಂಗತ
ಋಣಾನು ಬಂಧ ಭೂ ಮಾತೆಯ ಮನುಜ
ನಿತ್ಯ ಹೋರಾಟ ಕಾಲಾಂತರ ನಿರಂತರ
-ಶ್ರೀ ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.