ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳಿಗೆ – ಪ್ರೇರಣಾ ಕಾರ್ಯಗಾರ.

ಸಿರುಗುಪ್ಪ ಫೆ.04

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ತೆಕ್ಕಲಕೋಟೆ ಪಟ್ಟಣದಲ್ಲಿ ಇತ್ತೀಚಿಗೆ ನಡೆದ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ನೂತನ ಕೊಠಡಿಗಳ ಉದ್ಘಾಟನೆ ಹಾಗೂ ಪ್ರೇರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೂತನ ಕೊಠಡಿಗಳನ್ನು ಉಧ್ಘಾಟಿಸಿದ ಸಿರುಗುಪ್ಪ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ಎಂ ನಾಗರಾಜ್ ರವರು ಉದ್ಘಾಟಿಸಿದರು, ಕಾರ್ಯಕ್ರಮದ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗುರ್ರಪ್ಪ ಹಾಗೂ ಶಾಲೆಯ ಎಸ್.ಡಿ.ಎಂ.ಸಿ ಸರ್ವ ಸದಸ್ಯರು ಮುಖ್ಯ ಗುರುಗಳಾದ ಶ್ರೀ ಮಂಜುನಾಥ್ ಸಾಮದೇಶಿ ಹಾಗೂ ಶಾಲಾ ಶಿಕ್ಷಕರು ಮಾನ್ಯ ಶಾಸಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತಾನಾಡಿದ ಮಾನ್ಯ ಶಾಸಕರು ತಮ್ಮ ಉದ್ಘಾಟನಾ ಭಾಷಣದಲ್ಲಿ ಸಿರುಗುಪ್ಪ ತಾಲೂಕು ಶೈಕ್ಷಣಿಕವಾಗಿ ಹಿಂದುಳಿದಿದ್ದು ಶಿಕ್ಷಣ ಇಲಾಖೆಯು ಶಿಕ್ಷಣಕ್ಕೆ ಒತ್ತು ಕೊಟ್ಟು ಇಂತಹ ಫಲಿತಾಂಶ ಸುಧಾರಣಾ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಂಡು ಮಕ್ಕಳ ಶೈಕ್ಷಣಿಕ ಗುಣ ಮಟ್ಟವನ್ನು ಹೆಚ್ಚಿಸುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು, ಹಾಗೆಯೇ ಶಾಲೆಯ ಅನೇಕ ಅವಶ್ಯಕತೆಗಳನ್ನು ಸದ್ಯದಲ್ಲೇ ಪೂರೈಸುವುದಾಗಿ ಭರವಸೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಿರುಗುಪ್ಪ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಗುರಪ್ಪ ರವರು ಮಾತನಾಡಿ ಮಾನ್ಯ ಶಾಸಕರ ಮಾರ್ಗದರ್ಶನದಲ್ಲಿ ಇಲಾಖೆಯು ಉತ್ತಮವಾಗಿ ಕೆಲಸ ಮಾಡುತ್ತಿದ್ದು ಈಗ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಅನೇಕ ಶಾಲೆಗಳಲ್ಲಿ ಆಯೋಜಿಸಿ ಮಕ್ಕಳನ್ನು ಪರೀಕ್ಷೆಗೆ ಅಣಿ ಗೊಳಿಸುತ್ತಿರುವುದಾಗಿ ತಿಳಿಸಿದರು.

ಈ ಕಾರ್ಯಕ್ರಮವನ್ನು ಮಕ್ಕಳು ಸದುಪಯೋಗ ಪಡಿಸಿ ಕೊಂಡು ಉತ್ತಮ ಫಲಿತಾಂಶವನ್ನು ಪಡೆಯುವಂತೆ ತಿಳಿಸಿದರು, ಪಂಚಾಯತಿಯ ಸದಸ್ಯರಾದ ಶ್ರೀಯುತ ನರೇಂದ್ರ ಸಿಂಹ ರವರು ಮಾತನಾಡಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ತನಕ ಈ ಭಾಗದ ಅಭಿವೃದ್ಧಿ ಸಾಧ್ಯವಿಲ್ಲ ಶೈಕ್ಷಣಿಕವಾಗಿ ಹೆಣ್ಣು ಮಕ್ಕಳನ್ನು ಸದೃಢ ಗೊಳಿಸಿದಾಗ ಮಾತ್ರ ಸಮಾಜವು ಸದೃಢ ಗೊಳ್ಳುತ್ತದೆ ಎಂದು ಹೇಳಿದರು, ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಮಂಜುನಾಥ ಸಾಮದೇಶಿ ರವರು ಪ್ರಸ್ತಾವಿಕವಾಗಿ ಭಾಷಣದಲ್ಲಿ ಮಾತನಾಡಿ ಶಾಲೆಯ ಅಗತ್ಯತೆಗಳನ್ನು ಪೂರೈಸುವುದರಿಂದ ಈ ಶಾಲೆಯು ವಿಶೇಷವಾದ ವಿಶಿಷ್ಟವಾದ ಶಾಲೆಯಾಗಿ ಮಾರ್ಪಾಡಾಗಿ ಈ ಭಾಗದ ಉತ್ತಮ ಶಾಲೆಯಾಗಿ ಇನ್ನಷ್ಟು ಬಡ ಹಿಂದುಳಿದ ಸಮಾಜದ ಕೆಳ ಹಂತದ ಹೆಣ್ಣು ಮಕ್ಕಳಿಗೆ ಶೈಕ್ಷಣಿಕವಾಗಿ ಸಧೃಡ ಗೊಳ್ಳುವ ಅವಕಾಶ ನೀಡುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಅವಶ್ಯಕತೆಗಳನ್ನು ಪೂರೈಸುವಂತೆ ಮಾನ್ಯ ಶಾಸಕರಿಗೆ ಶಾಲೆಯ ಎಸ್ ಡಿ ಎಂ ಸಿ ಸದಸ್ಯರ ಜೊತೆಯಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು.ಕಾರ್ಯಕ್ರಮದ ಕೇಂದ್ರ ಬಿಂದುವಾದ ರಾಜ್ಯ ಸಂಪನ್ಮೂಲ ವ್ಯಕ್ತಿಗಳು, ಪ್ರೇರಣಾ ಕಾರ್ಯಕ್ರಮದ ಪ್ರೇರಕರು ಆದ ಡಾ, ಚಂದ್ರಕಲಾ ಪ್ರಕಾಶ್ ರವರು ಮಾತನಾಡಿ ಶಾಲೆಯ ವಿದ್ಯಾರ್ಥಿ ಜೀವನವು ಅಮೂಲ್ಯವಾದದ್ದು ಈ ವಿದ್ಯಾರ್ಥಿ ಜೀವನದಲ್ಲಿ ಸಾಧಿಸುವುದು ಬಹಳಷ್ಟು ಇರುತ್ತದೆ. ಸಾಧನೆಯ ಹಾದಿಯನ್ನು ಉತ್ತಮ ಪಡಿಸಿ ಕೊಳ್ಳಲು ಶೈಕ್ಷಣಿಕ ಫಲಿತಾಂಶ ಒಂದು ಮೆಟ್ಟಿಲು ಎಂದು ತಿಳಿಸುತ್ತಾ ವಿದ್ಯಾರ್ಥಿಯು ಈ ಸಮಯದಲ್ಲಿ ವಿದ್ಯಾರ್ಥಿ ಜೀವನದ ಮಾನಸಿಕ ಹಾಗೂ ದೈಹಿಕ ತುಮುಲಗಳನ್ನು ಹೇಗೆ ಎದುರಿಸಿ ಜೀವನದಲ್ಲಿ ಸ್ಥಿರತೆಯನ್ನು ಸಾಧಿಸಿ ಉತ್ತಮ ಫಲಿತಾಂಶದ ಕಡೆಗೆ ಸಾಗಬಹುದು ಎಂದು ತಿಳಿಸಿದರು.ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುವುದು ಹೇಗೆ..? ಎಂಬ ವಿಷಯಕ್ಜೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಜೊತೆಗೆ ಸಂವಾದಿಸಿ ಮಕ್ಕಳಿಗೆ ಪರಿಹಾರಗಳನ್ನು ಸೂಚಿಸಿದರು, ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಎಸ್ ಡಿ ಎಂ ಸಿ ಯ ಅಧ್ಯಕ್ಷರು, ಸದಸ್ಯರು, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರು, ಶಿಕ್ಣಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ವಿಶೇಷ ಆಹ್ವಾನಿತರಾಗಿ ಪ್ರೇರಕರಾಗಿ ಆಗಮಿಸಿದ್ದ ಪ್ರೇರಣಾ ಕಾರ್ಯಕ್ರಮದ ಪ್ರೇರಕರಾದ ಶ್ರೀಮತಿ ಚಂದ್ರಕಲಾ ಪ್ರಕಾಶ್ ರವರನ್ನು , ವೇದಿಕೆಯನ್ನು ಉತ್ತಮವಾಗಿ ಸಜ್ಜುಗೊಳಿಸಿ ಉತ್ತಮವಾದ ಕಾರ್ಯಕ್ರಮ ಮೂಡಿ ಬರಲು ವೇದಿಕೆಯನ್ನ ಸಜ್ಜು ಗೊಳಿಸಲು ಕಾರಣರಾದ & ದಾನಿಗಳಾದ ಪ. ಪಂಚಾಯತಿಯ ಸದಸ್ಯರಾದ ಶ್ರೀಮತಿ ಶ್ರೀ ಎಸ್ ಪೂರ್ಣಿಮಾ ಎಸ್ ನರೇಂದ್ರ ಸಿಂಹ ರವರನ್ನು ಹಾಗೂ ಕಳೆದ ವರ್ಷ ಶಾಲೆಗೆ ಹಾಗೂ ಸಿರುಗುಪ್ಪ ತಾಲೂಕಿಗೆ ಎರಡನೇ ಸ್ಥಾನವನ್ನು ಗಳಿಸಿದ ಶಾಲೆಯ ವಿದ್ಯಾರ್ಥಿನಿ ಕುಮಾರಿ ಶಕುಂತಲಾ ತಂದೆ ಮಂಜುನಾಥ ರವರನ್ನು ವಿಶೇಷವಾಗಿ ಸನ್ಮಾನಿಸಿದರು. ಹಾಗೆಯೇ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ಆನಂದಪ್ಪ ರವರನ್ನು ಹಾಗೂ ಪ.ಪಂಚಾಯತಿಯ ಸದಸ್ಯರನ್ನು ಊರಿನ ಗಣ್ಯ ಮಾನ್ಯರನ್ನು ಇದೇ ಸಂದರ್ಭದಲ್ಲಿ ಮಾನ್ಯ ಶಾಸಕರು ಸನ್ಮಾನಿಸಿದರು. ಕಾರ್ಯಕ್ರಮದ ಆಯೋಜಕ ದಾನಿಗಳಾದ ಶ್ರೀ ಎಂ ರಾಮಚಂದ್ರ ಬೆಂಗಳೂರು ನಗು ಫೌಂಡೇಶನ್ ಹಾಗೂ ಕರ್ನಾಟಕ ಸೀ ಫೇರರ್ಸ ಚಾರಿಟಬಲ್ ಟ್ರಸ್ಟ್ ಬೆಂಗಳೂರು ಇವರ ಅನುಪಸ್ಥಿತಿಯಲ್ಲಿ ಸಂಯೋಜಕರಾದ ಶ್ರೀ ಮೋಹನ್ ರೆಡ್ಡಿ ಅಗಸನೂರು ರವರನ್ನು ಇದೇ ಸಂದರ್ಭದಲ್ಲಿ ಶಾಸಕರು ಸನ್ಮಾನಿಸಿದರು. ಈ ಕಾರ್ಯಕ್ರಮವನ್ನು ಶಾಲೆಯ ಹಿರಿಯ ಶಿಕ್ಷಕಿಯಾದ ಶ್ರೀಮತಿ ಅಕ್ಕಮಹಾದೇವಿ ರವರು ನಿರ್ವಹಿಸಿದರು ಶಾಲೆಯ ಮತ್ತೋರ್ವ ಹಿರಿಯ ಶಿಕ್ಷಕರು ಹಾಗೂ ವಿಶೇಷ ಶಿಕ್ಷಕರಾದ ಶ್ರೀ ದೊಡ್ಡಯ್ಯ ಕಲ್ಲೂರ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗಣ್ಯ ಮಾನ್ಯರೆಲ್ಲರಿಗೂ ವಂದನೆಗಳನ್ನು ಮತ್ತು ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅತ್ಯಂತ ಪರಿಣಾಮಕಾರಿ ಯಾಗಿತ್ತು, ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ,ಚಿತ್ರದುರ್ಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button