ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಘಟಕದ ಅಧಿಕಾರಿಗಳಾದ ಅಶೋಕ್ ಕುಮಾರ್ ಇವರಿಗೆ – ದ.ವಿ.ಪ ಯಿಂದ ಮೂಲಭೂತ ಹಾಗೂ ನಾಗರಿಕ ಸೌಕರ್ಯಗಳಿಗೆ ಆಗ್ರಹಿಸಿ ಮನವಿ ಸಲ್ಲಿಸಿದರು.

ತಾಳಿಕೋಟೆ ಫೆ.05

ಇಂದು ತಾಳಿಕೋಟೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಘಟಕ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆ ಯಿಂದ ಅಧಿಕಾರಿಗಳಾದ ಅಶೋಕ್ ಕುಮಾರ್ ಭೋವಿ ಇವರಿಗೆ ಮನವಿಯನ್ನು ಸಲ್ಲಿಸಿದರು. ಅತೀ ಶೀಘ್ರದಲ್ಲೇ ಕಲಕೇರಿ ಬಸ್ ಸ್ಟ್ಯಾಂಡ್ ನಲ್ಲಿ ಮೂಲಭೂತ ಸೌಕರ್ಯ ಹಾಗೂ ನಾಗರಿಕ ಸೌಲಭ್ಯಗಳನ್ನು ಒದಗಿಸಿ ಸೂಕ್ತ ಬಸ್ ಸಂಚಾರ ವ್ಯವಸ್ಥೆ ಮಾಡಿ ಕೊಡಬೇಕೆಂದು ಕಾಶಿನಾಥ್ ತಾಳಿಕೋಟಿ ಹೇಳಿದರು. ತಾಳಿಕೋಟೆಯ KSRTC ಘಟಕ ವ್ಯವಸ್ಥಾಪಕರಿಗೆ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯಿಂದ ಮನವಿ ಸಲ್ಲಿಸಿದರು. ಈಸಂಧರ್ಭದಲ್ಲಿ ತಾಳಿಕೋಟೆಯ ಪೂಲೀಸ್ ಠಾಣೆಯ ಪಿ.ಎಸ್.ಐ ವಿದ್ಯಾರ್ಥಿ ಯುವ ಸಂಘದವರಿಗೆ ಅವರ ಸಮಸ್ಯೆಗಳನ್ನು ಆಲಿಸಿದರು. ಕಲಕೇರಿಯ ಬೃಹತ್ ಮಟ್ಟದ ವಿದ್ಯಾ ಕೇಂದ್ರವಾಗಿದ್ದು 16. ಗ್ರಾಮಗಳಿಂದ ವಿದ್ಯಾರ್ಥಿಗಳು 4 ಶಾಲಾ ಕಾಲೇಜುಗಳಿಗೆ ಬರುತಿದ್ದು, ಸಾರಿಗೆ ಇಲಾಖೆಯ ನಿರ್ಲಕ್ಷ್ಯದಿಂದ ಬಸ್ಟ್ ಸ್ಟ್ಯಾಂಡ್ ನಲ್ಲಿ ಮೂಲಭೂತ ಹಾಗೂ ನಾಗರಿಕ ಸೌಕರ್ಯಗಳ ಕೊರತೆ ಎದ್ದು ಕಾಣುವಂತಾಗಿದೆ ಇಂದರಿಂದಾಗಿ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರಿಗೆ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ ತತಕ್ಷಣ ಇಲ್ಲಿಯ ಜ್ವಲಂತಗಳ ವಿವಿಧ ಬೇಡಿಕೆಗಳಾದ 1) ವಿದ್ಯಾರ್ಥಿನಿಯರಿಗೆ/ಮಹಿಳೆಯರಿಗೆ ವಿಶೇಷ ವಿಶ್ರಾಂತಿ ಕೋಣೆ ನಿರ್ಮಾಣವಾಗಬೇಕು, ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಬಸ್ ಸ್ಟ್ಯಾಂಡ್ ನಲ್ಲಿ ಬಂದು ಸೇರುತ್ತಾರೆ ಆದರೆ ವಿಶೇಷ ವಿಶ್ರಾಂತಿ ಕೋಣೆ ಇಲ್ಲದ ಕಾರಣದಿಂದ ಹಲವಾರು ಸಮಸ್ಯೆಗಳನ್ನ ಎದುರಿಸ ಬೇಕಾಗಿದೆ. 2) CCTV ಕ್ಯಾಮೆರಾ ವ್ಯವಸ್ಥೆ ಮಾಡಿ ಕೊಡಬೇಕು, ಕಿಡಿ ಗೇಡಿಗಳಿಂದ ಅಹಿತಕರ ಘಟನೆಗಳನ್ನು ತಪ್ಪಿಸಲು ಹಾಗೂ ಉಪಧ್ಯಾಪಿ ಜನರಿಂದ ವಿದ್ಯಾರ್ಥಿನಿಯರಿಗೆ ಹಲವು ತೊಂದರೆಗಳಾಗುತ್ತಿದ್ದು. ಕೂಡಲೇ CCTV ವ್ಯವಸ್ಥೆ ಆಗಬೇಕು. 3) ಶುದ್ಧ ಕಿಡಿಯುವ ನೀರಿನ ಘಟಕ ವ್ಯವಸ್ಥೆ ಆಗಬೇಕು, ಸಾವಿರಾರು ಸಂಖ್ಯೆಯಲ್ಲಿ ಜನರು ಬಸ್ ಸ್ಟ್ಯಾಂಡ್ ನಲ್ಲಿ ಬಂದು ಸೇರುತ್ತಾರೆ ಆದರೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ 4) ವನಕಿಹಾಳ ಮತ್ತು ಬೂದಿಹಾಳ ಗ್ರಾಮಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಸಮಯದಲ್ಲಿ ಸೂಕ್ತ ಬಸ್ ವ್ಯವಸ್ಥೆ ಮಾಡಿ ಕೊಡಬೇಕೆಂದು ಈ ಎಲ್ಲಾ ಬೇಡಿಕೆಗಳು ಆದಷ್ಟು ಬೇಗ ಈಡೇರಿಸಬೇಕು ಇಲ್ಲದಿದ್ದರೆ ಕೂಡಲೇ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಊರಿನ ಹಿರಿಯರೊಂದಿಗೆ ಬೃಹತ್ ಮಟ್ಟದ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಈ ಸಂಧರ್ಭದಲ್ಲಿ ದ.ವಿ.ಪ ತಾಳಿಕೋಟೆ ತಾಲೂಕ ಅಧ್ಯಕ್ಷ ಗುರುಪ್ರಸಾದ್ B.G ದ.ವಿ.ಪ. ದೇವರ ಹಿಪ್ಪರಗಿ ತಾಲೂಕ ಅಧ್ಯಕ್ಷ ಕಾಶಿನಾಥ್ ತಾಳಿಕೋಟಿ, ಕಲಕೇರಿ ವಲಯ ಅಧ್ಯಕ್ಷ ಅರುಣ್ ಪೂಜಾರಿ, ಪ್ರಮೋದ್, ಯಮನೂರಪ್ಪ, ಪ್ರವೀಣ ಹಾಗೂ ವಿದ್ಯಾರ್ಥಿ ಯುವ ಜನರು ಉಪಸ್ಥಿತರಿದ್ದರು.

ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button