ಆಡಳಿತ ವ್ಯವಸ್ಥೆ ಕುಸಿದಿದ್ದರಿಂದ ದಂಧೆ ಹೆಚ್ಚುತ್ತಿದೆ – ವೆಲ್ಫೇರ್ ಪಾರ್ಟಿಯಿಂದ ತಹಶೀಲ್ದಾರ್ ಗೆ ಮನವಿ.
ಮಾನ್ವಿ ಫೆ.05

ಮಾನ್ವಿ ತಾಲೂಕಲ್ಲಿ ಆಡಳಿತ ವ್ಯವಸ್ಥೆ ಕುಸಿದಿದ್ದರಿಂದ ಮರಳು ಮಾಫಿಯಾ ದಂಧೆ ಮದ್ಲಾಪುರ, ಚೀಕಲಪರ್ವಿ , ಯಡಿವಾಳದಿಂದ ನಿತ್ಯ ಹಗಲು ರಾತ್ರಿ ಎನ್ನದೆ ಟಿಪ್ಪರ್ ಗಳ ಮೂಲಕ ನಡೆಯುತ್ತಿದ್ದು, ನಿಯಂತ್ರಣ ಮಾಡಬೇಕೆಂದು ವೆಲ್ಫೇರ್ ಪಾರ್ಟಿಯಿಂದ ಮಾನ್ವಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಮರಳು ಖದೀಮರು ದೇಶದ ಸಂಪತ್ತು ಲೂಟಿ ಮಾಡಿ ನಿತ್ಯ ಹಗಲು ಮತ್ತು ರಾತ್ರಿ ಟಿಪ್ಪರ್ ಗಳು ಜುಮ್ಮಲದೊಡ್ಡಿ ಹಾಗು ಸಿಮೆಂಟ್ ರೋಡ್ ಮೂಲಕ ಬರುತ್ತಿದ್ದರಿಂದ ಧೂಳಿಗೆ ಜನರು ರೋಶಿ ಹೋಗಿದ್ದು, ಏನಾದರು ಅನಾಹುತವಾದರೆ ಇದಕ್ಕೆ ಯಾರು ಹೊಣೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನ್ವಿಯಲ್ಲಿ ಆಡಳಿತ ವ್ಯವಸ್ಥೆ ಕುಸಿದಿದ್ದರಿಂದ ಮೀಸೆ ಮೂಡದ ಪುಡಿ ಯುವಕರು ಟಿಪ್ಪರ್ ಚಾಲನೆ ಮಾಡಿಕೊಂಡು ಶರವೇಗದಲ್ಲಿ ಬರುತ್ತಿದ್ದರಿಂದ ಜೀವನ ಮಾಡಲು ಕಷ್ಟಕರವಾಗಿದೆ. ಏನಾದರು ಸಾವು ನೋವು ಸಂಭವಿಸಿದರೆ ಇದಕ್ಕೆಲ್ಲ ಸರಕಾರವೇ ಹೊಣೆ ಎಂದು ವೆಲ್ಫೇರ್ ಪಾರ್ಟಿ ನೇರವಾಗಿ ಹೇಳುತ್ತದೆ ಎಂದು ಕಿಡಿಕಾರಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ