ಶ್ರೀ ಧರ್ಮಸ್ಥಳ ಸಂಘದಿಂದ ದೇಗುಲ ಜೀರ್ಣೋದ್ಧಾರಕ್ಕೆ – ಚೆಕ್ ವಿತರಣೆ.
ಸಕಲಾಪುರದ ಹಟ್ಟಿ ಫೆ.09

ಖಾನಾ ಹೊಸಹಳ್ಳಿ ಹೋಬಳಿಯ ಸಕಲಾಪುರದ ಹಟ್ಟಿ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪೂಜ್ಯ ಡಾ, ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ್ದ 1. ಲಕ್ಷ ಮೊತ್ತದ ಡಿ.ಡಿ ಯನ್ನು ದೇವಸ್ಥಾನ ಅಭಿವೃದ್ಧಿ ಸಮಿತಿ ಯವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ವಿತರಿಸಿದರು. ಡಿ.ಡಿ ವಿತರಿಸಿ ಮಾತನಾಡಿದ ಅವರು ಪೂಜ್ಯರು ರಾಜ್ಯದ ಉದ್ದಗಲಕ್ಕೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ದಡಿಯಲ್ಲಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ, ಸಮುದಾಯ ಭವನ ನಿರ್ಮಾಣಕ್ಕಾಗಿ ಅನುದಾನ, ಶಾಲಾ ಕಟ್ಟಡ ರಚನೆಗೆ ಅನುದಾನ, ಜ್ಞಾನ ದೀಪ ಶಿಕ್ಷಕರ ಒದಗಣೆ, ಸುಜ್ಞಾನನಿ ಧಿ ಶಿಷ್ಯ ವೇತನ ವಿತರಣೆ, ಜನ ಮಂಗಳ ಕಾರ್ಯಕ್ರಮ ದಡಿಯಲ್ಲಿ ವೈದ್ಯಕೀಯ ಸಲಕರಣೆಗಳ ವಿತರಣೆ ಮಾಡುವ ಮೂಲಕ ಸಮಾಜ ಮುಖಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ನವೀನ್ ಕುಮಾರ, ಜಿಲ್ಲಾ ಜನ ಜಾಗೃತ ವೇದಿಕೆ ಸದಸ್ಯರಾದ ಎ.ಸಿ ಚನ್ನಬಸಪ್ಪ, ವಲಯದ ಮೇಲ್ವಿಚಾರಕ ನಾಗರಾಜ್, ಸೇವಾ ಪ್ರತಿ ನಿಧಿ ಬಾಮಾ, ಒಕ್ಕೂಟದ ಅಧ್ಯಕ್ಷೆ ಗೌರಮ್ಮ, ತಿಪ್ಪಿರಮ್ಮ, ಸ್ವ ಸಹಾಯ ಸಂಘದ ಸದಸ್ಯರು, ಹಾಗೂ ದೇವಸ್ಥಾನ ಕಮಿಟಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ