ಆತ್ಮದ ಅರಿವಿನ ತಾಯಿಯಾಗಿ ಬಸವಣ್ಣನವರ ಅನುಭವ ಮಂಟಪ ಮೊದಲನೆಯ ಸಂವಿಧಾನವಾಗಿದೆ – ಪಿ.ಬಿ.ಮುನ್ಯಾಳ.
ರಾಯಬಾಗ ಸ.17
ಬಸವಾದಿ ಶರಣರು 12 ನೇ ಶತಮಾನದಲ್ಲಿ ಸ್ಥಾಪಿಸಿದ “ಅನುಭವ ಮಂಟಪ” ಇಡೀ ವಿಶ್ವದಲ್ಲಿಯೇ ಮೊಟ್ಟ ಮೊದಲನೆಯ ಪ್ರಜಾಪ್ರಭುತ್ವ ಸಂಸ್ಥೆ ಶರಣರ ವಚನಗಳು” ಭಾರತದ ಪ್ರಥಮ ಸಂವಿಧಾನ ಈ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲವೆಂದು ನಿವೃತ್ತ ಪ್ರಾಚಾರ್ಯ ಪಿ.ಬಿ.ಮುನ್ಯಾಳ ಹೇಳಿದರು.ಅವರು ಪಟ್ಟಣದ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ಸಭಾ ಭವನದಲ್ಲಿ ವಚನ ಪಿತಾಮಹ ಡಾ, ಫ.ಗು.ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ರಾಯಬಾಗ ಆಶ್ರಯದಲ್ಲಿ ಶರಣ್ ಚೇತನ ಬಳಗ ಹಮ್ಮಿಕೊಂಡ ಮಾನಸಿಕ ಆಧ್ಯಾತ್ಮ ಜ್ಞಾನ ದಾಸೋಹ ಕಾರ್ಯಕ್ರಮದಲ್ಲಿ ಶರಣರ ವಚನ ಸಾಹಿತ್ಯ ಮತ್ತು ಭಾರತದ ಸಂವಿಧಾನ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸಂವಿಧಾನದಲ್ಲಿರುವ ಮುಖ್ಯ ಸಂಗತಿಗಳಾದ ಸ್ವಾತಂತ್ರ್ಯ, ಸಮಾನತೆ, ಈ ಮೊದಲಾದ ತತ್ವಗಳನ್ನು 12 ನೇ ಶತಮಾನದ ಬಸವಾದಿ ಶರಣರ ನುಡಿದು ನಡೆದ ಆಚರಣೆಗೆ ತಂದಿದ್ದರು. ಶರಣರ ವಚನಗಳು ಸಂವಿಧಾನದ ಎಲ್ಲಾ ಆಶಯಗಳನ್ನು ಒಳ ಗೊಂಡಿವೆಂದು ವಚನಗಳನ್ನು ಸಾಕ್ಷಿ ಗೊಳಿಸಿ ವಿವರಿಸಿದರು. ಮನುಷ್ಯನ ಬದುಕಿನಲ್ಲಿ ಏನೇ ಸಾಧಿಸ ಬೇಕಾದರು ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯ ನಿಯಮಿತ ಆಹಾರ ದೈಹಿಕ ಶ್ರಮ, ವಿಚಾರ ಕ್ರಮ- ಇವು ನಮ್ಮ ಆರೋಗ್ಯದ ಸರಳ ವಿಧಾನಗಳೆಂದು ದೈಹಿಕ ಶಿಕ್ಷಣ ಕಾಲೇಜ್ ಪ್ರಾಚಾರ್ಯ ಡಾ, ಆರ್.ಕೆ ಪಾಟೀಲ ಅಭಿಪ್ರಾಯಪಟ್ಟರು.

ಮನುಷ್ಯ ಇಂದು ಹತ್ತಾರು ಜ್ಞಾನಗಳನ್ನು ಪಡೆದು ಕೊಂಡಿದ್ದಾನೆ; ಭೂಮಿ ಮೇಲೆ ಅಷ್ಟೇ ಅಲ್ಲ ಆಕಾಶದಲ್ಲಿಯೂ ನೆಲೆಸಲು ಹೊರಟಿದ್ದಾನೆ. ವೈಜ್ಞಾನಿಕ ತಂತ್ರಗಾರಿಕೆ ಗಳಿಂದ ಜಗತ್ತನ್ನು ಅಂಗೈಯಲ್ಲಿ ಇಟ್ಟು ಕೊಂಡಿದ್ದಾನೆ. ಆದರೆ ತನ್ನ ‘ನೆಮ್ಮದಿ’ ಮರೆತಿದ್ದಾನೆ. ನೆಮ್ಮದಿ ಇಲ್ಲದ ಮನುಷ್ಯನ ಸಾಧನೆ ವ್ಯರ್ಥ ಆದ್ದರಿಂದ ಮನುಷ್ಯನಿಗೆ ಆತ್ಮ ಜ್ಞಾನ ಅತ್ಯಂತ ಮುಖ್ಯ. ಆತ್ಮ ಜ್ಞಾನ ಅಂದರೆ ಅರಿವಿನ ತಾಯಿ ಎಂದು ಟ್ರಸ್ಟ್ ಅಧ್ಯಕ್ಷ ಡಾ, ಬಿ.ಎಂ.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಕಾರ್ಯಕ್ರಮ ಆರಂಭದಲ್ಲಿ ರಮ್ಯಾ ಠಕ್ಕನ್ನವರ, ಪಾವನಿ ಮತ್ತು ಶಾಂಭವಿ ದಡವಾಡ ವಚನ ಪ್ರಾರ್ಥನೆ ಹೇಳಿದರು. ಸಂಗಮೇಶ ಹಿರೇಹಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಶರಣ ಬಂಧುಗಳಿಗೆ ‘ಸಂವಿಧಾನ ಪೀಠಿಕೆ ಪ್ರತಿಜ್ಞಾ ವಿಧಿ’ ಬೋಧಿಸಲಾಯಿತು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್.ಎ. ಭಜಂತ್ರಿ ಶರಣರು ಸಮರ್ಪಣೆ ಹೇಳಿದರು. ಜರ್ನಲಿಸ್ಟ್ ರಾಜಕುಮಾರ ಮಡಿವಾಳ, ಬಸವರಾಜ ಮಡಿವಾಳ, ಶ್ರೀಶೈಲ್ ಹೊಸೂರ, ಸದಾನಂದ ಹಳಿಂಗಳಿ, ಎಸ್.ಆರ್ ಸೊಲ್ಲಾಪುರ, ಮಲ್ಲೇಶ್ ದೊಡಮನಿ, ಎಂ.ಎಂ. ಪಾಟೀಲ್, ಎಂ.ಎಸ್. ಉಜ್ಜಯಿನಿಮಠ, ಬಸಲಿಂಗ ಟಕ್ಕನ್ನವರ, ಆರ್.ಸಿ. ತುಳಸಿಗೇರಿ, ಭಾಗ್ಯಶ್ರೀ ಹಿರೇಮಠ, ಅನ್ನಪೂರ್ಣ ಹಿರೇಮಠ, ಭಾರತಿ ಭಜಂತ್ರಿ, ಸವಿತಾ ದಿಬ್ಬದಮನಿ, ರೂಪಾ ಮಾಳಿ, ವೇದಾ ಮೇತ್ರಿ, ಪ್ರತಿಭಾ ಮಾಳಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ:ಬಸವರಾಜ.ಮಡಿವಾಳ.ರಾಯಬಾಗ