ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಶುಭಾಶಯಗಳು.
ಸೂಳೇಭಾವಿ ಸ.17

ಇಂದು ಮೋದಿಜೀಯವರ ಹುಟ್ಟು ಹಬ್ಬದ ನಿಮಿತ್ಯವಾಗಿ ನಮ್ಮೂರ ಬಸ್ ನಿಲ್ದಾಣವನ್ನು ಸ್ವಚ್ಚತೆ ಮಾಡಲಾಯಿತು, ನಂತರ ಈ ಬಸ್ ನಿಲ್ದಾಣನಕ್ಕೆ ಕಂಟ್ರೋಲರ್ ನಿಯೋಜನೆಗೆ ಆಗ್ರಹಿಸಿ ಮನವಿ ನೀಡಲಾಯಿತು. ಶ್ರಮಿಕ ನಾಯಕನಿಗೆ ಶ್ರಮದಾನದ ಹಾರೈಕೆ. ವಿಶ್ವ ನಾಯಕ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಯವರ ಹುಟ್ಟು ಹಬ್ಬದ ಪ್ರಯುಕ್ತ ಸೂಳೇಭಾವಿಯ ಬಸ್ ನಿಲ್ದಾಣವನ್ನು ಸ್ವಚ್ಚತೆ ಮಾಡಲಾಯಿತು. ಸೂಳೇಭಾವಿಯ ಮೋದಿಜೀ ಅಭಿಮಾನಿಗಳು ಭಾಗಿಯಾಗಿದ್ದರು.

ನಂತರ ಎಲ್ಲರೂ ಸೇರಿ ಹೋಗಿ ಕೆ.ಎಸ್.ಆರ್.ಟಿ.ಸಿ ಸಾರಿಗೆ ನಿಯಂತ್ರಣಾಧಿಕಾರಿಗಳು ಅಮೀನಗಡ ರವರಲ್ಲಿ ಸೂಳೇಭಾವಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಬಸ್ ನಿಲ್ದಾಣಕ್ಕೆ ಕಂಟ್ರೋಲರ್ ಗಾಗಿ ಮನವಿ ಮಾಡಿ ಕೊಂಡಾಗ ಸಕಾರಾತ್ಮಕ ಸ್ಪಂದಿಸಿದರು. ನಾವು ಕೂಡಾ ಪ್ರಾಮಾಣಿಕವಾಗಿ ಹೇಳುತ್ತೇವೆ. ನೀವು ಕೂಡಾ ಸ್ವಲ್ಪ ಸಾಹೇಬರ ಗಮನ ತನ್ನಿ ಅಂತಾ ವಿಶ್ವಾಸ ಹೇಳಿದರು.ಈ ಸಂದರ್ಭದಲ್ಲಿ ನಾಗೇಶ್.ಗಂಜಿಹಾಳ. ಸೂಳೇಭಾವಿ, ಶ್ರೀ. ನಿರಂಜನ, ನೀಲಪ್ಪ. ಪೂಜಾರಿ, ಹನುಮಂತ.ನಾವಿ, ಗ್ಯಾನಪ್ಪ.ಗೋನಾಳ, ಆನಂದ. ಮೊಕಾಶಿ, ರಮೇಶ ಮಡಿವಾಳರ, ಲಕ್ಷ್ಮಣ.ಭಜಂತ್ರಿ, ಮಾರುತಿ.ಬಿ ಹೊಸಮನಿ, ಹನಮಂತ.ಎಚ್.ಭಜಂತ್ರಿ, ಶಂಕರ ಮಿಣಜಿಗಿ, ನಿಂಗಪ್ಪ ಹಣಗಿ, ಬಾಹುಬಲಿ. ಮನಿ, ಇತರರು ಇದ್ದರು.