“ಅಮ್ಮನ ನಿಶ್ವಾರ್ಥ ಭಾವವು ಜಲಧಿ ಅಧಿಕ ಬೆಳಕು”…..

ಅಮ್ಮನ ನಿಸ್ವಾರ್ಥಭಾವವು

ಜಲಧಿ ಅಧಿಕ ಬೆಳಕು

ಬಾಳಲಿ ಬಡತನ ಸಿರಿತನವಿರಲಿ

ನಿತ್ಯ ಶ್ರಮದ ಕಾಯಕ ಮಾಡುವ

ವಂಶವೃಕ್ಷ ಕುಡಿಗಳ ಸಲಹುವ

ಮಹಾಮಾತೆಯು ಸುಖ ಬಯಸದೆ

ಕಂದಮ್ಮಗಳ ಹೆತ್ತು ಹೊತ್ತು

ಮಮತೆ ಮಮಕಾರದಿ ಸಲಹುವ

ಕೊರತೆ ನೀಗಿಸಿ ಸಂತೋಷದಿ

ಹರಷದಿ ಬೆಳಸುವ ಮಹಾತ್ಮೆ

ಬಾಳ ನೌಕೆ ಪಯಣ ವನವಾಸದಲಿ

ಕರುಳ ಕುಡಿ ಬೆಳಸಲು ದೇವರ

ಹಿರಿಯರ ನಾಮ ಸ್ಮರಸಿ

ಉಪವಾಸವ ಮಾಡಿ

ಮಕ್ಕಳ ಹಸಿವು ನೀಗಿಸುವ

ಅವಿರತ ಸಮಯ ಸ್ವಾರ್ಥಕೆ ಬಳಸದೆ

ಮಕ್ಕಳ ಏಳ್ಗೇಗೆ ದುಡಿವ

ಸಂತಸದಿ ಸಂತಾನ ಬೆಳಸುವ

ಶ್ರಮದ ಕಾಯಕ ನಿರಂತರವು

ಸಂಬಂಧ ಸ್ನೇಹಿಗಳ ಸಹಾಯ ಕೇಳದವಳು

ಬೀಗುಮಾನದ ಸ್ವಾಭಿಮಾನದವಳಾದೆ

ನೀ ಮಾಡಿದ ಪುಣ್ಯದ ಕಾಯಕ

ದೇವನಲಿ ಇರಿಸಿದ ಫಲ ಸಫಲ

ಬೆಳದ ಜೀವಗಳು ಸಾಧಕರಾದರು

ನಿನ್ನಯ ಗುಣಗಳ ಬೆಳಸಿಕೊಂಡು

ತಾಯಿ ದೇವರ ಹೆಸರು ಅಜರಾಮರ

ಜೀವನ ಸಾರ್ಥಕವು

ಅಮ್ಮನ ಬಾಳ ಪಯಣವು

ನಿಶ್ವಾರ್ಥ ಕಾಯಕಜೀವಿಯಾದೆ

ಸ್ವರ್ಗದ ಸಿರಿ ಮನೆತನದ

ಹಿರಿಮೆಗೆ ಗರಿಮೆಯಾದೆ

ಸ್ವಾಭಿಮಾನ ನಿಸ್ವಾರ್ಥಭಾವಗಳ

ಕೈ೦ಕರ್ಯ ವಿಶ್ವವೇ ಮೆಚ್ಚುವದು

ಅಮ್ಮನಿಗೆ ಶತಕೋಟ ನಮನಗಳು

-ಶ್ರೀದೇಶಂಸು

ಶ್ರೀಸುರೇಶ ಶಂಕ್ರೆಪ್ಪ ಅಂಗಡಿ

ಬಾಗಲಕೋಟ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button