ಕ.ರ.ವೇ ತಾಲ್ಲೂಕು ಅಧ್ಯಕ್ಷರಾಗಿ – ಶಿವಪುತ್ರ ಬಗಲಿ ಆಯ್ಕೆ.
ಇಂಡಿ ಮಾ.15

ಪಟ್ಟಣದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ತಾಲ್ಲೂಕು ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಜಿಲ್ಲಾ ಅಧ್ಯಕ್ಷ ಬಸವರಾಜ ತಾಳಿಕೋಟಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂಡಿ ತಾಲೂಕ ಅಧ್ಯಕ್ಷರಾಗಿ ಶಿವಪುತ್ರ ಬಗಲಿ. ಅವರನ್ನು ತಾಲ್ಲೂಕು ಸಮಿತಿಗೆ ಆಯ್ಕೆ ಮಾಡಲಾಯಿತು.ಈ ವೇಳೆ ಕರವೇ ಜಿಲ್ಲಾ ಅಧ್ಯಕ್ಷ ಬಸವರಾಜ ತಾಳಿಕೋಟಿ ಮಾತನಾಡಿ, ಇಂದು ನಮ್ಮ ತಾಲ್ಲೂಕು ಸಮಿತಿಗೆ ನೂತನವಾಗಿ ಅಧ್ಯಕ್ಷರ ಶಿವು ಬಗಲಿ ತಾಲೂಕಿನಲ್ಲಿ (ಕ.ರ.ವೇ) ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯನ್ನು ಸಂಘದ ನಿಯಮಾವಳಿ ಯಂತೆ ಹಾಗೂ ಕನ್ನಡ ಪರ ಹೋರಾಟ ಎಲ್ಲವನ್ನು ರಾಜ್ಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ ನಾವು ನೀವು ಎಲ್ಲಾ ಮಾಡಬೇಕು ಎಂದರು. ಕರ್ನಾಟಕ ರಕ್ಷಣಾ ವೇದಿಕೆ ತಮ್ಮ ನಾಡ ಪ್ರೇಮ ತಮ್ಮ ನಡೆ ನುಡಿ ಉತ್ತಮ ಚಾರಿತ್ರ್ಯದ ಗುಣಗಳನ್ನು ಗುರ್ತಿಸಿ ತಮ್ಮ ಪ್ರಾಮಾಣಿಕ ಕನ್ನಡಪರ ಕಾಳಜಿಯನ್ನು ಗೌರವಿಸಿ ತಮ್ಮನ್ನು ಇಂಡಿ ತಾಲೂಕಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಇನ್ನೂ ಮುಂದೆಯೂ ತಮ್ಮ ಪ್ರಾಮಾಣಿಕ ನಾಡಾಭಿಮಾನವನ್ನು ಎತ್ತಿ ಹಿಡಿಯುವದರೊಂದಿಗೆ ರೈತರ ಮಹಿಳೆಯರ ವಿದ್ಯಾರ್ಥಿಗಳ ಹಾಗೂ ಸಮಗ್ರ ನಾಡಿನ ಸಮಸ್ಯೆಗಳಿಗೆ ಸ್ಪಂದಿಸುತ್ತ ನಾಡಿನ ಸರ್ವತೋಮುಖ ಅಭಿವೃದ್ದಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ತತ್ವ ಸಿದ್ದಂತಾಗಳಿಗೆ ಬದ್ಧರಾಗಿ ತಮ್ಮ ನಾಯಕತ್ವದ ಸೇವೆಯನ್ನು ಒಂದು ವರ್ಷಗಳ ಕಾಲ ವಹಿಸಿ ಕೊಳ್ಳಬೇಕು ಎಂದು ಮಾತನಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ (ಕ.ರ.ವೇ) ಅಧ್ಯಕ್ಷ ಶಿವು ಬಗಲಿ ನಾಡು ನುಡಿ ಕನ್ನಡ ಉಳಿಯುವಿಗಾಗಿ ಮೊನ್ನೆ ಅಷ್ಟೇ ನಡೆದ ಕರ್ನಾಟಕ ಬಸ್ ನಿರ್ವಾಹಕರ ಮೇಲೆ ಮಹಾರಾಷ್ಟ್ರ ಮರಾಠಾ ಯುವರಕರು ಮಾಡಿರುವಂತ ಹಲ್ಲೆ ಖಂಡಿಸುತ್ತೇನೆ.ಈ ರೀತಿ ಮಾಡುವುದು ತಪ್ಪು ಯಾವುದೇ ಜಾತಿ ಧರ್ಮ ಇರಲಿ ನಾವು ನೀವು ಬದುಕುತ್ತಿರುವುದು ಕನ್ನಡ ನಾಡಿನ ನೆಲೆದ ಮೇಲೆ ಇದನ್ ಅರಿತು ಮುಂದೆ ಇಂತಹ ತಪ್ಪು ಆಗದಂತೆ ನೋಡಿ ಕೊಳ್ಳಬೇಕು ಎಂದರು.ಈ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಬಸವರಾಜ ತಾಳಿಕೋಟಿ, ತಾಲೂಕು ಅಧ್ಯಕ್ಷ ಶಿವಪುತ್ರ ಬಗಲಿ, ಸುನಿಲ ಕಾಲೇಭಾಗ, ಆನಂದ ಪವಾರ. ವೆಂಕಟೇಶ್ ಗುಣಾರಿ.ಅಂಬರೀಷ್ ದಶವಂತ. ಚಂದ್ರಕಾಂತ ಪಾಟೀಲ್. ಕೇತನ ಕಾಲೇಭಾಗ, ಸಿದ್ದಾರ್ಥ್ ಹಳ್ಳದಮನಿ. ಅಕ್ಷಯ್ ಹಿಬಾರೆ. ಪ್ರವೀಣ್ ಸಾಲಗಾರ. ಮಂಜು ತೇಲಿ. ಬಸು ಮಾಶ್ಯಾಳ. ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ