ಪಂಚಾಯಿತಿ ಮಾಹಿತಿ ಕೇಳಿದರೆ ದಲಿತ – ವ್ಯಕ್ತಿ ಮೇಲೆ ಹಲ್ಲೆ.

ಹರನಾಳ ಮಾ.27

ಕರ್ನಾಟಕ ಪಂಚಾಯತಿ ರಾಜ್ ಇಲಾಖೆ ಇರುವುದು ಹಳ್ಳಿಗಳು ಸುಧಾರಣೆಯ ಸಲುವಾಗಿ ಈ ಇಲಾಖೆ ಇದೆ. ಆದರೆ ಅದನ್ನು ದುರುಪಯೋಗ ಪಡಿಸಿ ಕೊಳ್ಳುವವರು ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದ ಹಾಗೆ ಹಣ ತಗೆಯತ್ತಾರೆ ಯಾರಾದರೂ ಕೇಳಿದರೆ ಅವರ ಮೇಲೆ ದಬ್ಬಾಳಿಕೆ ಮಾಡುತ್ತಾರೆ, ಇದೇ ತರ ಘಟನೆ ಒಂದು, ದೇವರ ಹಿಪ್ಪರಗಿ ತಾಲೂಕಿನ ಹರನಾಳ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರಾದ ನಾರಾಣಪ್ಪ ಬಸಪ್ಪ ನಾಯ್ಕೋಡಿ ಯವರು ಹರನಾಳ ಗ್ರಾಮ ಪಂಚಾಯತಿ 2023 ರಿಂದ 24 ಹಾಗೂ 2024 ರಿಂದ 2025 ಮಾರ್ಚ್ ವರೆಗೆ ಯಾವುದೇ ಕಾಮಗಾರಿ ಮಾಡದೆ ಬೋಗಸ್ ಬಿಲ್ ತೆಗೆದಿದ್ದ.

ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಗೌರವ ಧನ, ಸಿಬ್ಬಂದಿಗಳಿಗೆ ನೀಡುವ ವೇತನವನ್ನು ಬೇರೆ ಖಾಸಗಿ ವ್ಯಕ್ತಿಯ ಹೆಸರಿನ ಮೇಲೆ ಹಣ ತಗೆದಿದ್ದ ಹಾಗೂ ಕರ ವಸೂಲಿ ಹಣ ಇನ್ನೂ ಹಲವಾರು ಬೋಗಸ್ ಬಿಲ್ ಮಾಡಿದ್ದಾರೆ. ಈ ಹಗರಣದ ಮಾಹಿತಿ ಕೇಳಿದ ನಾರಾಯಪ್ಪ ನಾಯ್ಕೋಡಿ ಇವನ್ನು ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅವನ ಮೇಲೆ ಕೌಂಟರ್ ಕೇಸನ್ನು ದಾಖಲಿಸಿದ್ದಾರೆ.

ಇದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಶಾಖೆ ದೇವರ ಹಿಪ್ಪರಗಿ. ಪ್ರೊ, ಬಿ.ಕೃಷ್ಣಪ್ಪ ಅವರ ಬಣ ಕಾರ್ಯಕರ್ತರು ಇಂದು ಬೃಹತ್ ಪ್ರತಿಭಟನೆ ಮೂಲಕ ದೇವರ ಹಿಪ್ಪರಗಿ ಪಟ್ಟಣದ ಮೊಹರೆ ಹಣಮಂತರಾಯ ವೃತ್ತದಿಂದ ಡಾ, ಬಾಬಾ ಸಾಹೇಬ್ ಅಂಬೇಡ್ಕರ ಅವರ ವೃತ್ತದ ಮಾರ್ಗವಾಗಿ ತಹಶಿಲ್ದಾರ ಕಛೇರಿ ಮುಂದೆ ಧರಣಿ ಕುರಿತು ಆ ದಲಿತ ಕಾರ್ಯಕರ್ತನ ಮೇಲಿನ ಕೌಂಟರ್ ಕೇಸ್ ವಾಪಸ್ ಪಡೆಯಬೇಕು ಹಾಗೂ ಅವರು ಮೇಲೆ ಹಲ್ಲೆ ಮಾಡಿದವನಿಗೆ ಶಿಕ್ಷೆ ಆಗಬೇಕು ಎಂದು ಹೇಳಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ, ದಲಿತ ಮುಖಂಡರಾದ ರಮೇಶ ಆಸಂಗಿ ಪ್ರಕಾಶ ಗುಡಿಮನಿ ಪರಶುರಾಮ ದಿಂಡವಾರ ರಾಜಕುಮಾರ ಸಿಂದಗೇರಿ ರಾವುತ ತಳಗೇರಿ ಪರಶುರಾಮ ಬಡಿಗೇರ ಆಲಗೂರ, ಅಶೋಕ ಗುಡಸಲಮನಿ ಬಸವರಾಜ ಇಂಗಳಗಿ ರಾಘವೇಂದ್ರ ಪಡಗಾನೂರ ಹಾಗೂ ತಾಲೂಕಿನ ಎಲ್ಲಾ ದಲಿತ ಕಾರ್ಯಕರ್ತರು ಈ ಹೋರಾಟದಲ್ಲಿ ಭಾಗವಹಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button