ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕ ಸಮಿತಿ ಸಿರುಗುಪ್ಪ ವತಿಯಿಂದ – ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ ಆಚರಣೆ.
ಸಿರುಗುಪ್ಪ ಏ.14

ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕ ಸಮಿತಿ ಸಿರುಗುಪ್ಪ ವತಿಯಿಂದ ದಿನಾಂಕ 14/4/2025 ರಂದು ಸಿರುಗುಪ್ಪ ನಗರದಲ್ಲಿ ಇರುವಂತ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ. ಜಯಂತಿಯ ಶುಭಾಶಯಗಳ ಅಂಗವಾಗಿ ಪ್ರತಿಮೆಗೆ ಹೂವಿನ ಹಾರ ಹಾಕಿ ಗೌರವಿಸಲಾಯಿತು. ಭಾರತ ರತ್ನ ಸವಿಧಾನ ಶಿಲ್ಪಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಭಾರತ ದೇಶಕ್ಕೆ ಜಗತ್ತಿಗೆ ಅತಿ ಶ್ರೇಷ್ಠವಾದಂತ ಸಂವಿಧಾನವನ್ನು ಬರೆದು ಕೊಟ್ಟಿದ್ದರಿಂದ ಇಡೀ ಭಾರತ ದೇಶದಲ್ಲಿ ಇರುವಂತ ಎಲ್ಲಾ ಧರ್ಮಗಳು ಮತ್ತು ಎಲ್ಲಾ ಜಾತಿಯ ಜನಾಂಗದವರು ನೆಮ್ಮದಿಯಾಗಿ ಶಾಂತಿಯಿಂದ ಜೀವನ ನಡೆಸಲಿಕ್ಕೆ ಸಾಧ್ಯವಾಗಿದೆ ಈ ಭಾರತ ದೇಶದ ಸಂವಿಧಾನವು ಬೇರೆ ದೇಶಗಳ ಸಂವಿಧಾನದ ತಜ್ಞರು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಸಂವಿಧಾನವನ್ನು ಶ್ರೇಷ್ಠ ಸಂವಿಧಾನ ಎಂದು ಒಪ್ಪಿಕೊಂಡು ಹೊಗಳಿದ್ದಾರೆ. ಆದುದರಿಂದ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಭಾರತ ದೇಶದ ಎಲ್ಲಾ ಧರ್ಮದವರು ಎಲ್ಲಾ ಜಾತಿಯ ಜನಾಂಗದರು ಗೌರವವನ್ನು ಸಲ್ಲಿಸ ಬೇಕಾಗುತ್ತದೆ ಎಂದು ಜಿ.ತಿಮ್ಮಯ್ಯ ತಾಲೂಕ ಅಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸಿರುಗುಪ್ಪ ಮಾತನಾಡಿದರು. ಮಲ್ಲಿಕಾರ್ಜುನ ಎ. ಲಕ್ಷ್ಮಪ್ಪ ರಾರಾವಿ ಮೌಲಪ್ಪ ಅರಳಿಗನೂರು ಮಲ್ಲಿಕಾರ್ಜುನ ಶ್ರೀಧರ ಗಡ್ಡೆ ಪಂಪಾಪತಿ ಎಂ ಮಂಜುನಾಥ್ ಮಲ್ಲಯ್ಯ ಸೂಗುರು ಹೆಚ್ ಗಿರೀಶ್ಈ ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇನ್ನಿತರರು ದಲಿತ ಮುಖಂಡರು ಭಾಗವಹಿಸಿದ್ದರು. ಎಂದು ಜಿ.ತಿಮ್ಮಯ್ಯ ತಾಲೂಕ ಅಧ್ಯಕ್ಷರು ಸಿರುಗುಪ್ಪ ಕರ್ನಾಟಕ ದಲಿತ ರಕ್ಷಣಾ ವೇದಿಕೆಯವರು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.