ರಕ್ತದಾನ ಮಾಡಿದರೆ ಪುಣ್ಯ ಪ್ರಾಪ್ತಿ – ವೈ.ಎಂ ಪೂಜಾರಿ.
ಅರ್ಜುಣಗಿ ಬಿ.ಕೆ ಏ. 16

ರಕ್ತದಾನ ಶ್ರೇಷ್ಠ ದಾನ, ರಕ್ತದಾನ ಮಾಡುವುದರಿಂದ ನಾಲ್ಕಾರು ಜೀವ ಉಳಿಸಲು ಸಾಧ್ಯವಾಗುತ್ತದೆ. ಹೀಗಾಗಿ ರಕ್ತದಾನ ಒಂದು ಪುಣ್ಯದ ಕಾರ್ಯವೆಂದು ಕ್ಷೇತ್ರ ಆರೋಗ್ಯಧಿಕಾರಿ ವೈ.ಎಂ ಪೂಜಾರಿ ಹೇಳಿದರು. ಇಂಡಿ ತಾಲೂಕಿನ ಅರ್ಜುಣಗಿ ಬಿಕೆ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆದ ಶ್ರೀ ಗೈಭೀಪಿರ ದೇವರ ಜಾತ್ರಾ ಮಹೋತ್ಸವ ನಿಮಿತ್ಯ ಸ್ಪಂದನಾ ಆಸ್ಪತ್ರೆ ಇಂಡಿ, ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪೂರ, ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕ ಬೇವನೂರ, ತಾಲೂಕು ಆರೋಗ್ಯ ಇಲಾಖೆ ಇಂಡಿ, ಜಿಲ್ಲಾ ಸರಕಾರಿ ಆಸ್ಪತ್ರೆ ರಕ್ತ ನಿಧಿ ಘಟಕ ವಿಜಯಪುರ ಇವರ ಸಯುಕ್ತ ಆಶ್ರಯದಲ್ಲಿ ನಡೆದ 3 ನೇ. ವರ್ಷದ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು ಅರ್ಜುಣಗಿ ಬಿಕೆ ಕೆಡಿ ಗ್ರಾಮದ ಸಮಸ್ಥ ನಾಗರಿಕರು ಸೇರಿ ಶ್ರೀ ಗೈಭೀಪಿರ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ತಾವು ಪ್ರತಿ ವರ್ಷ ರಕ್ತದಾನದ ಶಿಬಿರ ಹಮ್ಮಿಕೊಂಡಿದ್ದು ಒಳ್ಳೆಯ ಕೆಲಸ ನೀವು ಮಾಡಿದ ರಕ್ತದಾನ ರಕ್ತದ ಕೊರತೆಯಿಂದ ಬಳಲುವ ಜನರ ಜೀವಗಳು ಉಳಿಸಲು ಕೈ ಜೋಡಿಸಿ ದಂತಾಗುತ್ತದೆ. ಹೀಗಾಗಿ ಇದು ಹೆಮ್ಮೆಯ ವಿಷಯ ಎಂದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಜಾತ್ರಾ ಕಮಿಟಿಯವರು, ಹಾಗೂ ಊರಿನ ಗ್ರಾಮಸ್ಥರು, ರಕ್ತದಾನಿಗಳು ಮತ್ತು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.