ಕೆರೆಗಳಿಗೆ ಅಧಿಕಾರಿಗಳ ಭೇಟಿ – ಪಂಪ್ಸೆಟ್ ಜಪ್ತಿ.
ಸಂಗೋಗಿ ಏ.29

ಇಂಡಿ ತಾಲೂಕಿನ ಕೆರೆಗಳಾದ ಸಂಗೋಗಿ, ತಡವಲಗಾ, ನಿಂಬಾಳ ಕೆಡಿ, ಹಂಜಗಿ ಕೆರೆಗಳಿಗೆ ಕಂದಾಯ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಇವರ ನೇತೃತ್ವದಲ್ಲಿ ಆಕಸ್ಮಿಕ ಭೇಟಿ ನೀಡಿದರು.ಸಂಗೋಗಿ ಕೆರೆಯ ಮೇಲೆ ೨೫ ಪಂಪ್ಸೆಟ್ ಗಳನ್ನು ಜಪ್ತಿ ಮಾಡಿ ರೈತರಿಗೆ ಕೆರೆಯ ನೀರು ಕೇವಲ ಕುಡಿಯುವ ನೀರಿಗಾಗಿ ಮಾತ್ರ ಬಳಸಲಾಗುತ್ತಿದ್ದು ರೈತರು ಕೃಷಿಗೆ ಬಳಸಿದರೆ ಎಫ್.ಐ.ಆರ್ ದಾಖಲಿಸಲಾಗುವದೆಂದು ತಾಕೀತು ಮಾಡಿದರು.ಬೇಸಿಗೆ ಬೇಗೆಯ ಕಾವು ತಾಲೂಕಿನಾದ್ಯಂತ ಏರುತ್ತಿರುವಂತೆಯೇ ತಾಲೂಕಿನಲ್ಲಿ ಜಲ ಸಂಕಟದ ಭೀತಿ ಎದುರಾಗಿದೆ. ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು ಸಧ್ಯ ಕೆರೆಯಲ್ಲಿರುವ ನೀರು ಕೇವಲ ಗ್ರಾಮದ ಜನರಿಗೆ ಉಪಯೋಗಕ್ಕೆ ಮಾತ್ರ ಬಳಸಲು ಆದೇಶವಿದ್ದು ರೈತರು ಕೃಷಿಗೆ ಬಳಸ ಬಾರದೆಂದು ಎ.ಸಿ ಅನುರಾಧಾ ಹೇಳಿದರು.

ಮೇ ತಿಂಗಳಲ್ಲಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಲುವಾಗಿ ಕೆರೆಗಳಲ್ಲಿ ನೀರು ಸಂಗ್ರಹಿಸಲಾಗುತ್ತಿದೆ. ಅದನ್ನು ಕೃಷಿಗೆ ಬಳಸಿದರೆ ಮುಂದೆ ಕೆರೆ ತುಂಬಲು ಕಷ್ಟ. ಹೀಗಾಗಿ ಕೆರೆಯ ನೀರು ಬಳಸದಿರಲು ವಿನಂತಿಸಿದರು.ಇಓ ನಂದೀಪ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಕಂದಾಯ ನಿರೀಕ್ಷಕ ಎಚ್.ಎಚ್ ಗುನ್ನಾಪುರ, ಪಿಡಿಓ ಅಶೋಕ ಹೊನವಾಡ, ಕ್ರೈಂ ಪಿ.ಎಸ್.ಐ ಎಸ್.ಬಿ ಗಂಗನಹಳ್ಳಿ ಮತ್ತಿತರಿದ್ದರು.