ಯುವ ಜನಾಂಗ ಸದ್ಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿ ಕೊಳ್ಳಬೇಕು – ಸಂತೋಷ ಕುಮಾರ್.
ಚಳ್ಳಕೆರೆ ಮೇ.11

ಇಂದಿನ ಯುವ ಜನಾಂಗ ಸದ್ಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿ ಕೊಳ್ಳಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಸಂತೋಷ ಕುಮಾರ್ ಅಗಸ್ತ್ಯ ತಿಳಿಸಿದರು. ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಕಾರ್ಯಕ್ರಮದ ಆರಂಭದಲ್ಲಿ ಭಜನೆ ಮತ್ತು ವೇದ ಮಂತ್ರಗಳನ್ನು ಕನಕಪುರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ಜ್ಯೋತ್ಸ್ನಾಮಯೀ ಅವರು ಹೇಳಿ ಕೊಟ್ಟರೆ, ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ವಿದ್ಯಾರ್ಥಿಗಳಿಗೆ ಧ್ಯಾನಾಭ್ಯಾಸ ಮಾಡಿಸಿದರು.

ಈ ತರಗತಿ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸ್ವಯಂ ಸೇವಕರಾದ ಅಭಿಲಾಷ್, ಯತೀಶ್.ಎಂ ಸಿದ್ದಾಪುರ, ಡಾ, ಭೂಮಿಕ, ಚೇತನ್, ಮಂಜುಳ ಉಮೇಶ್, ಜಿ.ಯಶೋಧಾ ಪ್ರಕಾಶ್, ಸಂಜನ, ಋತಿಕ್, ಅಂಬಣ್ಣ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ:ಯತೀಶ್.ಎಂ ಸಿದ್ದಾಪುರ,ಚಳ್ಳಕೆರೆ.