ಪೊಲೀಸ್ ಠಾಣೆ ಆವರಣದಲ್ಲಿ – ರೌಡಿಶೀಟರ್ ಗಳ ಪರೇಡ್.
ಕೊಟ್ಟೂರು ಮೇ.11




ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶ್ರೀ ಸಲೀಂ ಪಾಶ ಹೆಚ್ಚುವರಿ ಎಸ್ಪಿ ವಿಜಯನಗರ ಮತ್ತು ಮಲ್ಲೇಶ್ ದೊಡ್ಡಮನಿ ಡಿವೈಎಸ್ಪಿ ನೇತೃತ್ವದಲ್ಲಿ ಕೂಡ್ಲಿಗಿ ಉಪ ವಿಭಾಗದಲ್ಲಿ ರೌಡಿಶೀಟರ್ ಫರೇಡ್ ನಡೆಸಲಾಯಿತು ಈ ಸಂದರ್ಭದಲ್ಲಿ 124 ರೌಡಿಶೀಟರ್ ಗಳನ್ನು ವಿಚಾರ ಮಾಡಿ ಯಾವುದಕ್ಕೆ ಎಷ್ಟು ಕೇಸ್ ಇದೆ. ಇದೇ ತರ ಮುಂದುವರೆಸಿ ಕೊಂಡು ಹೋಗಬೇಡಿ ಹಾಗೂ 60 ವರ್ಷ ಹತ್ತಿರವಿರುವ ರೌಡಿಶೀಟರ್ ಗಳನ್ನು ನಾಗರಿಕತೆಗೆ ಪರಿವರ್ತನೆ ಹೊಂದುತ್ತಿದ್ದರೆ ಅವರು ರೌಡಿ ಶೀಟಿನಿಂದ ತೆಗೆಯಲು ಪರಿಶೀಲನೆ ಮಾಡುತ್ತೇವೆ ಎಂದು ತಿಳುವಳಿಕೆ ಹೇಳಿದರು.

ತರಳುಬಾಳು ಹುಣ್ಣಿಮೆ ರೌಡಿಶೀಟರ್ ಗಳನ್ನು ಮುಂದುವರಿಸಲು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ವೆಂಕಟಸ್ವಾಮಿ.ಟಿ ಸಿ.ಪಿ.ಐ, ವಿಕಾಸ್ ಲಂಬಾಣಿ ಸಿ.ಪಿ.ಐ ಪ್ರಹ್ಲಾದ್ ಚನ್ನಗಿರಿ ಸಿ.ಪಿ.ಐ ಗೀತಾಂಜಲಿ ಸಿಂಧೆ ಪಿ.ಎಸ್.ಐ ಕೊಟ್ಟೂರು ಹಾಗೂ ಕೂಡ್ಲಿಗಿ ಉಪ ವಿಭಾಗದ ಎಲ್ಲಾ ಪೊಲೀಸ್ ಠಾಣೆಯ ಪಿ.ಎಸ್.ಐ ಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು