“ಅಮ್ಮ ಅಗಣಿತ ವಾತ್ಸಲ್ಯದ ಗಣಿ”…..

ಅಮ್ಮ ಎನ್ನುವ ಪದ ಎಷ್ಟೊಂದು
ಸುಂದರ ಮಧುರವು
ಅಮ್ಮ ಎಂದು ಕರೆವ ಮನ
ಸಂತಸದ ಹೊನಲು
ಅಮ್ಮನೇ ಉತ್ತಮ ಸ್ನೇಹ
ಜೀವಿಯು
ಅವ್ವ ನಿನಗಿಂತ ದೊಡ್ಡ ದೇವರಿಲ್ಲ
ಸದಾ ಹಿತ ಬಯಸುವಳು
ದೇವರಿಗೂ ಅಮ್ಮ ಲಾಲಿ
ಹಾಡಿದವಳು
ತವರು ಬಿಟ್ಟು ತಾಯಿ ಮನೆ
ಕಟ್ಟಿದವಳು
ಅಮ್ಮನ ಸರಿಸಮ ಯಾರಿಲ್ಲ
ಪ್ರೀತಿ ವಾತ್ಸಲ್ಯದ ಗಣಿಯು
ದಿವ್ಯ ಶಕ್ತಿ ಅಮ್ಮನ ಮಡಿಲು
ಭವ್ಯಮಂದಿರವು
ಅಮ್ಮ ನೀಡಿದ ಉಸಿರಿಗೆ ಹೆಸರು
ಪದಗಳಿಗೆ ಸಿಗದವಳು
ನೋವುಂಡು ನಲಿವಿಗೆ ಅಮೃತವ
ನೀಡಿದವಳು
ಅಗಣಿತ ವಾತ್ಸಲ್ಯದ ಗಣಿಯು
ಅಮ್ಮನ ಸಿರಿಯು
ಅಮ್ಮನ ಋಣ ತೀರಿಸಲಾಗದು
ನಿರ್ಲಕ್ಷಿಸದಿರು
ಅಮ್ಮನಿಗೆ ಮಾಡುವ ಸಹಾಯ
ತೃಣಕ್ಕೆ ಸಮಾನವು
ಅತ್ತಾಗ ಅತ್ತು ನಕ್ಕಾಗ ನಕ್ಕು ಆಡಿಸಿ
ಆಡಿದವಳು
ಬದಲಾವಣೆ ಜಗದ ನಿಯಮ
ಬದಲಾಗದು
ಅಮ್ಮನ ಸುಂದರ ಭಾವ
ಸದಾ ಹಸಿರು
ಹೆತ್ತಮ್ಮನ ಸೇವೆಯೇ
ಮಹಾ ಭಾಗ್ಯವು
ಎಂಥಹ ದುಷ್ಟ ಶಕ್ತಿಯೇ ಬರಲಿ
ದೂರ ಸರಿಸುವಳು
ಅಮ್ಮನೇ ಜಗದ ಶಕ್ತಿ
ಬಾಳಿನಲಿ ಜಯವು
ಅಮ್ಮ ಭೂಮಿ ತೂಕದವಳು
ವಿಶ್ವ ಜನ್ಮಧಾತೆಯ ದಿನ
ಅಮ್ಮನ ನೆನವ ಮನವು
ಪಾವನವು
ವಿಶ್ವ ಅಮ್ಮಂದಿರ ದಿನ
ಹರುಷದ ಹೊನಲು
ಅನುಕ್ಷಣ ಅನುದಿನ
ಆನಂದೋತ್ಸವವು
ಸರ್ವರಿಗೂ ಶುಭ ಹರುಷ ತರಲಿ
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.