ಶ್ವೇತಾ ಮಹಿಳಾ ಸ್ವಸಹಾಯ ಸಂಘದಿಂದ – ಮೋಸದ ದಂಧೆ
ಹರನಹಳ್ಳಿ ಜು.05

ಬಿಪಿಎಲ್ ಕಾರ್ಡ್ದಾರರಿಗೆ ತಲಾ ಒಬ್ಬರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರು ಹೇಳುತ್ತಾರೆ. ಆದರೆ ಮಾನ್ವಿ ತಾಲೂಕಿನ ಹರನಹಳ್ಳಿ ಗ್ರಾಮದ ಶ್ವೇತಾ ಮಹಿಳಾ ಸ್ವ ಸಹಾಯ ಸಂಘದವರು ಬಡವರಿಗೆ 10 ಕೆಜಿ ಅಕ್ಕಿ ಕೊಡದೆ ಕೇವಲ 6 ಕೆಜಿ ಕೊಡುತ್ತಿದ್ದಾರೆಂದು ಗ್ರಾಮಸ್ಥರ ದಂಡೆ ಮಾನ್ವಿ ತಹಸೀಲ್ದಾರ್ ಗೆ ದೂರು ಸಲ್ಲಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹರನಹಳ್ಳಿ ಗ್ರಾಮದಲ್ಲಿ ಶ್ವೇತಾ ಮಹಿಳಾ ಸ್ವ ಸಹಾಯ ಸಂಘದವರು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಗ್ರಾಮಸ್ಥರಿಗೆ (ರೇಶನ್) ಪಡಿತರ ಹಾಕದೆ ಖದೀಯುವ ಕೆಲಸ ಮಾಡುವುದಲ್ಲದೆ ತಿಂಗಳಲ್ಲಿ ಒಂದು ಭಾರಿ ತೆಗಯುತ್ತಿದ್ದಾರೆ.ಹೀಗಾಗಿ ಶ್ವೇತಾ ಮಹಿಳಾ ಸ್ವಸಹಾಯ ಸಂಘವನ್ನು ರದ್ದು ಮಾಡಬೇಕು ಎಂದು ಗ್ರಾಮಸ್ಥರ ಆರೋಪವಾಗಿದೆ.
ರಾಯಚೂರು ಆಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ ಎಲ್ಲೀದ್ದೀಯಪ್ಪ. ಬಡವರಿಗೆ ಹಂಚಬೇಕಾದ ಪಡಿತರ ಅಕ್ಕಿಯನ್ನು ಶ್ವೇತಾ ಮಹಿಳಾ ಸ್ವಸಹಾಯ ಸಂಘದವರು ಖದೀಯುತ್ತಿದ್ದಾರೆ ಅಂದ ಮೇಲೆ ತಾವು ಯಾವ ರೀತಿ ಕ್ರಮ ಜರುಗಿಸುತ್ತೀರಾ ಇಂತಹವರ ಮೇಲೆ, ಅಥವಾ ನಮಗ್ಯಾಕೆ ಬೇಕು ಎಂದು ಸುಮ್ಮನಿರುವಿರಾ ಹರನಹಳ್ಳಿ ಗ್ರಾಮದ ಜನರಂತು ರೊಚ್ಚಿಗೇಳುವುದು ಗ್ಯಾರಂಟಿ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ